ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆ (Optical Illusion) ಉಂಟು ಮಾಡುವ ಫೋಟೋಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ವ್ಯಕ್ತಿಯ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಈ ಚಿತ್ರಗಳು ಹೇಳುತ್ತವೆ ಎಂಬ ನಂಬಿಕೆ ಇದೆ ಮತ್ತು ಇದೇ ಕಾರಣಕ್ಕೆ ಅನೇಕರು ಆಪ್ಟಿಕಲ್ ಇಲ್ಯೂಷನ್ ಫೋಟೋಗಳನ್ನು ನೋಡಲು ಇಷ್ಟಪಡುತ್ತಾರೆ. ದೃಷ್ಟಿ ಭ್ರಮೆಯ ಚಿತ್ರಗಳು ಉಳಿದ ಚಿತ್ರಗಳಂತೆ ಸರಳವಾಗಿ ಇರುವುದಿಲ್ಲ. ನೋಡಿದ ತಕ್ಷಣ ಅಲ್ಲಿ ನಿಮಗೇನೋ ಕಾಣಿಸುತ್ತದೆ. ಆದರೆ ಅಲ್ಲಿ ಅಷ್ಟೇ ಇರುವುದಿಲ್ಲ. ಇನ್ನೂ ಹೆಚ್ಚಿನದು ಆ ಚಿತ್ರದಲ್ಲಿ ಅಡಗಿಕೊಂಡಿರುತ್ತದೆ. ಅಷ್ಟೇ ಅಲ್ಲ, ಆ ಒಟ್ಟಾರೆ ಫೋಟೋ ನಮಗೆ ಕಂಡ ರೀತಿಯಲ್ಲೇ ಇನ್ನೊಬ್ಬರಿಗೆ ಕಾಣಬೇಕು ಎಂದೇನೂ ಇಲ್ಲ. ಅಲ್ಲಿ ಅವರಿಗೆ ಇನ್ನೇನೋ ಕಾಣಿಸಬಹುದು.
ಅದೇನೆ ಇರಲಿ, ನಾವಿಲ್ಲಿ ಕೆಳಗೆ ಕೊಟ್ಟಿರುವ ಫೋಟೋವನ್ನು ನೋಡಿ. ಇದೂ ಒಂತರ ಆಪ್ಟಿಕಲ್ ಇಲ್ಯೂಷನ್ ಫೋಟೋಗಳ ಸಾಲಿಗೇ ಸೇರುತ್ತದೆ. ಈ ಫೋಟೋದಲ್ಲಿ ನೀವು ಮೊದಲೇನು ನೋಡಿದಿರಿ? ಅದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ. ಅಂದಹಾಗೇ, ಇದೊಂದು ಆಯಿಲ್ ಪೇಂಟ್ (ತೈಲ ವರ್ಣಚಿತ್ರ) ಆಗಿದ್ದು, ಬಿಡಿಸಿದ್ದು ಉಕ್ರೇನ್ನ ಕಲಾವಿದ ಒಲೆಗ್ ಶುಪ್ಲಿಯಾಕ್. ವಿಪರೀತ ಗಾಳಿ ಇರುವ ದಿನವನ್ನು ಕಟ್ಟಿಕೊಟ್ಟ, ಅತ್ಯಾಕರ್ಷಕವಾಗಿರುವ ಈ ಪೇಂಟಿಂಗ್ ಒಮ್ಮೆ ನೋಡಿ ಮತ್ತು ಕೆಳಗೆ ನಾವು ಕೊಟ್ಟಿರುವ ವಿವರಣೆಗಳನ್ನು ಓದಿ, ನಿಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಯಿರಿ..
ಇದನ್ನೂ ಓದಿ: Viral Photo | ಹೂವು ಮಾರುವವ ಹೀಟ್ನಿಂದ ಪಾರಾಗಲು ಮಾಡಿದ ಅದ್ಭುತ ಉಪಾಯ ಇದು!
ಹಾಳಾಗಿರುವ ಛತ್ರಿಯನ್ನು ಹಿಡಿದ ಯುವತಿ
ಉಲ್ಟಾ ಆಗಿ, ಹಾಳಾಗಿರುವ ಛತ್ರಿಯನ್ನು ಹಿಡಿದಿರುವ ಯುವತಿಯನ್ನು ನೀವು ಮೊದಲು ನೋಡಿದರೆ, ‘ನೀವು ಅತ್ಯಂತ ಹಾಸ್ಯಪ್ರಜ್ಞೆ ಹೊಂದಿರುವವರಾಗಿದ್ದೀರಿ ಮತ್ತು ನಿಮ್ಮ ಹಾಸ್ಯಪ್ರವೃತ್ತಿಯಿಂದಾಗಿ ನೀವಿರುವ ಸ್ಥಳವನ್ನು ಸದಾ ಸಂತೋಷವಾಗಿ ಇಡುವವರು ಮತ್ತು ನೀವು ಯಾರೊಂದಿಗೆ ಇದ್ದೀರೋ ಅವರನ್ನು ಕ್ಷಣಮಾತ್ರದಲ್ಲಿ ನಗೆಗಡಲಲ್ಲಿ ತೇಲಿಸುತ್ತೀರಿ’ ಎಂಬ ಅರ್ಥವನ್ನು ಕೊಡುತ್ತದೆ.
ಯುವತಿಯೊಬ್ಬಳು ಛತ್ರಿಯನ್ನು ಸರಿಪಡಿಸುತ್ತಿರುವಂತಹ ಚಿತ್ರ
ಈ ತೈಲ ವರ್ಣಚಿತ್ರವನ್ನು ನೀವು ನೋಡಿದಾಗ ಮೊದಲು ಕಂಡಿದ್ದು ‘ಯುವತಿಯೊಬ್ಬಳು ಕೊಡೆಯನ್ನು ಏನೋ ದುರಸ್ತಿ ಮಾಡುತ್ತಿರುವ’ ಚಿತ್ರವಾದರೆ, ನೀವು ಅತ್ಯಂತ ಸಕಾರಾತ್ಮಕ ಮನೋಭಾವ ಹೊಂದಿರುವ, ಆಕರ್ಷಕ ವ್ಯಕ್ತಿತ್ವದ ವ್ಯಕ್ತಿ ಎಂದು ಭಾವಿಸಿ.
ವೃದ್ಧನ ಮುಖ ಕಾಣಿಸಿದರೆ
ಈ ಆಯಿಲ್ ಪೇಂಟಿಂಗ್ನಲ್ಲಿ ವೃದ್ಧನೊಬ್ಬನ ಮುಖ ಮೊದಲು ಕಂಡಿದ್ದೇ ಆದಲ್ಲಿ, ನಿಮ್ಮ ಗಮನಿಸುವಿಕೆ/ಗ್ರಹಿಸುವಿಕೆಯ ಮಟ್ಟ ಅದ್ಭುತವಾಗಿದೆ. ಕಂಡಿದ್ದಕ್ಕಿಂತಲೂ ಹೆಚ್ಚಿನದನ್ನು ಏನನ್ನೋ ನೀವು ಗ್ರಹಿಸುತ್ತೀರಿ ಎಂದು ಅರ್ಥ ಕೊಡುತ್ತದೆ. ಹಾಗೊಮ್ಮೆ ಇಲ್ಲಿ ನಿಮಗೆ ವೃದ್ಧನ ಮುಖ ಕಾಣದೆ ಇದ್ದರೆ, ಇನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಮುರಿದ ಛತ್ರಿ ಹಿಡಿದ ಯುವತಿ ಮತ್ತು ಅಲ್ಲೇ ಮೇಲ್ಭಾಗದಲ್ಲಿರುವ ಮೋಡವನ್ನು ನೋಡಿ. ಯುವತಿಯ ಬಲಗೈ ವೃದ್ಧನ ಮೂಗಿನಂತೆ ಗೋಚರಿಸುತ್ತದೆ. ಆಕೆಯ ಬಿಳಿ ಅಂಗಿ ಗಡ್ಡದಂತೆ ಭಾಸವಾಗುತ್ತದೆ. ಅಲ್ಲೇ ನಿಮಗೆ ಮುಖದ ಆಕಾರ ಕಾಣಸಿಗುತ್ತದೆ.
ಹೂವುಗಳು
ತೈಲ ವರ್ಣಚಿತ್ರದಲ್ಲಿ ಹೂವುಗಳು ಮೊದಲು ಕಾಣಿಸಿದಲ್ಲಿ ನೀವು ಅತ್ಯಂತ ಸೂಕ್ಷ್ಮ ಮನಸಿನವರು ಮತ್ತು ಇನ್ನೊಬ್ಬರೊಂದಿಗೆ ಅತ್ಯಂತ ಭಾವನಾತ್ಮಕವಾಗಿ, ಆಳವಾಗಿ ಬೆಸೆದುಕೊಳ್ಳುತ್ತೀರಿ ಎಂಬ ಅರ್ಥ ಬರುತ್ತದೆ.