ಪ್ರಾಣಿ-ಪಕ್ಷಿಗಳ ಜಗತ್ತು ಸುಂದರ. ಆಟ, ಕಾಳಗ, ಬೇಟೆ ಅವುಗಳ ಬದುಕು. ಅದರಲ್ಲಿ ಹುಲಿ, ಸಿಂಹ, ಚಿರತೆಯಂಥ ಪ್ರಾಣಿಗಳೆಲ್ಲ ನಾಡಿಗೆ ಹತ್ತಿರವಿರುವಂಥವಲ್ಲ. ನಮಗೆ ಅವುಗಳ ಜೀವನ ಕ್ರಮವೂ ಅಷ್ಟು ಪರಿಚಿತವಲ್ಲ. ಮನೆ ಸಮೀಪದ ಕಾಡಿನಲ್ಲಿ ಒಂಟಿ ಹುಲಿ ಅಡ್ಡಾಡುವುದನ್ನು ಅಪರೂಪಕ್ಕೊಮ್ಮೆ ನೋಡಬಹುದು. ಗುಡ್ಡದ ಆಚೆಯಿಂದ ಕೇಳಿಬರುವ ಹುಲಿ ಕೂಗನ್ನು ಕೇಳಿರಬಹುದು. ಹಾಗೇ, ಹುಲಿ ಬೇಟೆಯಾಡುವ ವಿಡಿಯೋಗಳನ್ನೂ ಸಾಕಷ್ಟು ನೋಡಿರಬಹುದು. ಆದರೆ ಎರಡು ಹುಲಿಗಳು ಫುಲ್ ಜಾಲಿ ಮೂಡ್‌ನಲ್ಲಿ ಆಟ ಆಡುವುದನ್ನು ಎಂದಾದರೂ ನೋಡಿದ್ದೀರಾ?, ಹಾಗೊಮ್ಮೆ ನೋಡಿಲ್ಲದೆ ಇದ್ದಲ್ಲಿ ಇಲ್ಲಿದೆ ನೋಡಿ ಹುಲಿಗಳ ಆಟದ ವೈಭವ ತೋರಿಸುವ ವಿಡಿಯೋ (Tigers Playing Video).
ಐಎಫ್‌ಎಸ್ ಅಧಿಕಾರಿ ಸುಶಾಂತಾ ನಂದಾ ಎಂಬುವರು ಹುಲಿಗಳು ಆಟ ಆಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅದರಲ್ಲಿ ಎರಡು ಹುಲಿಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬಂದು ಒಂದಕ್ಕೊಂದು ಡಿಕ್ಕಿ ಮಾಡಿಕೊಳ್ಳುತ್ತವೆ. ಒಂದು ಹುಲಿ ಸ್ವಲ್ಪ ದೂರ ಹೋಗಿ ಬೀಳುತ್ತದೆ. ಆಗ ಇನ್ನೊಂದು ಹುಲಿ ಮತ್ತೆ ಅದರ ಮೈಮೇಲೆ ಹಾರಿ ಬಿದ್ದು, ತನ್ನ ಮುಂದಿನ ಕಾಲಿನಿಂದ ಅದರ ಹೊಟ್ಟೆಗೆ ಹೊಡೆಯುತ್ತದೆ. ಹಾಗೇ, ಬಿದ್ದಿರುವ ಹುಲಿ ತನ್ನ ಮುಂದಿನ ಕಾಲಿನಿಂದ ಮತ್ತೊಂದು ಹುಲಿಯ ಮುಖಕ್ಕೆ ಹೊಡೆಯುತ್ತದೆ. ಒಟ್ಟಾರೆ ಈ ಸನ್ನಿವೇಶ ಅತ್ಯಂತ ಸುಂದರವಾಗಿದ್ದು, ಮೈ ಜುಂ ಅನ್ನುವಂತಿದೆ.
ಈ ವಿಡಿಯೋಕ್ಕೆ ಈಗಾಗಲೇ 77 ಸಾವಿರ ವೀವ್ಸ್ ಬಂದಿದೆ. ವಿಡಿಯೋ ಚಿತ್ರೀಕರಣವನ್ನು ಮಾಡಿದ್ದು ಮಧ್ಯಪ್ರದೇಶ ಟೈಗರ್ ಫೌಂಡೇಶನ್ ಎಂಬ ಎನ್‌ಜಿಒ ಆಗಿದ್ದು, ಅದರ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ʼಇಷ್ಟೊಳ್ಳೆ ವಿಡಿಯೋ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ʼ ʼಹುಲಿಗಳ ಶಕ್ತಿ-ಸಾಮರ್ಥ್ಯಕ್ಕೆ ಸದೃಶ್ಯವೇ ಇಲ್ಲʼ ʼಹುಲಿಗಳ ಈ ಆಟ ಕಣ್ಣಿಗೆ ತುಂಬ ಮುದಕೊಡುತ್ತಿದೆʼ ಎಂಬಿತ್ಯಾದಿ ಕಮೆಂಟ್‌ಗಳನ್ನು ನೆಟ್ಟಿಗರು ಬರೆದಿದ್ದಾರೆ.
ಇದನ್ನೂ ಓದಿ: Viral Video| ಈ ಹುಂಜ ಒಂದೇ ಸಮ ಕೂಗಿದ್ದೇಕೆ, ಉರುಳಿ ಬಿದ್ದಿದ್ದೇಕೆ?; ಕೋಳಿ ಕತೆಯಲ್ಲಿ ನೀತಿ ಹುಡುಕಿ