Site icon Vistara News

Viral News: ಯುಪಿಎಸ್​ಸಿ ಪರೀಕ್ಷೆಯಲ್ಲಿ ಕೇಳಲಾಗಿದ್ದ ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಾ?-ತಲೆ ಕೆಡಿಸಿದ ಅಳಿಲು

tricky question About squirrel in Civil Services Exam Shared BY IFS Officer

#image_title

ನಾಗರಿಕ ಸೇವಾ ಪರೀಕ್ಷೆಗಳಲ್ಲಿ (Civil Services Exams), ಉದಾಹರಣೆಗೆ ಐಎಎಸ್​, ಕೆಎಎಸ್ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಗಳು ಸಖತ್​ ಟ್ರಿಕ್ಕಿಯಾಗಿ ಇರುತ್ತವೆ. ಅಂದರೆ ಬುದ್ಧಿಗೆ ವಿಪರೀತ ಕೆಲಸಕೊಡುವಂತೆ ಇರುತ್ತವೆ. ಇಂಥ ಪರೀಕ್ಷೆಗಳಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ನೀವು ಆಗೋ, ಈಗೋ ಸೋಷಿಯಲ್ ಮೀಡಿಯಾ (Social Media)ಗಳಲ್ಲಿ ನೋಡಿರುತ್ತೀರಿ. ಅಂಥ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವೂ ಅಲ್ಲ. ತುಂಬ ಆಳವಾಗಿ ಆಲೋಚಿಸಬೇಕಾಗುತ್ತದೆ. ಒಂದು ಪ್ರಶ್ನೆಗಳನ್ನು ಕೊಟ್ಟು ಅದಕ್ಕೆ ಉತ್ತರಗಳನ್ನು ಆಯ್ಕೆ ರೂಪದಲ್ಲಿ ಕೊಟ್ಟಿರುತ್ತಾರೆ. ಆ ಉತ್ತರಗಳು ಭರ್ಜರಿ ಗೊಂದಲ ಸೃಷ್ಟಿಸುವುದಂತೂ ಸುಳ್ಳಲ್ಲ. ಅಂಥ ಒಂದು ಪ್ರಶ್ನೆ ಈಗ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ (Viral News) ಆಗುತ್ತಿದೆ.

ಐಎಫ್​ಎಸ್​ (ಭಾರತೀಯ ಅರಣ್ಯ ಸೇವಾಧಿಕಾರಿ) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೇ ಒಂದು ಪ್ರಶ್ನೆಯನ್ನು ಹಂಚಿಕೊಂಡಿದ್ದಾರೆ. ಇದು ಅಳಿಲಿನ ಬಗ್ಗೆ ಕೇಳಲಾದ ಪ್ರಶ್ನೆಯಾಗಿದ್ದು, ವನ್ಯಜೀವಿಗಳ ಬಗ್ಗೆ ಗೊತ್ತಿದ್ದವರು, ಪ್ರಾಣಿ ಪಕ್ಷಿಗಳ ಜೀವನವನ್ನು ಹತ್ತಿರದಿಂದ ಬಲ್ಲವರು ಮಾತ್ರ ಉತ್ತರಿಸಬಹುದೇನೋ..!. ಪ್ರಶ್ನೆಯ ಫೋಟೋ ಶೇರ್​ ಮಾಡಿರುವ ಪರ್ವೀನ್ ಕಸ್ವಾನ್​ ‘ಇದು 2023ನೇ ಸಾಲಿನ, ನಾಗರಿಕ ಸೇವಾ ಪರೀಕ್ಷೆ ಪತ್ರಿಕೆಯಲ್ಲಿ 87ನೇ ಪ್ರಶ್ನೆ, ಇದಕ್ಕೆ ನೀವೇನು ಉತ್ತರ ಹೇಳುತ್ತೀರಿ?’ ಎಂದು ಕ್ಯಾಪ್ಷನ್​ನಲ್ಲಿ ಪ್ರಶ್ನಿಸಿದ್ದಾರೆ. ಹಾಗೇ ಕಮೆಂಟ್​ ಸೆಕ್ಷನ್​ನಲ್ಲಿ ಅವರೇ ಪ್ರಶ್ನೆಯ ಉತ್ತರವನ್ನೂ ತಿಳಿಸಿದ್ದಾರೆ.

ಪ್ರಶ್ನೆ ಹೀಗಿತ್ತು..
ಭಾರತದಲ್ಲಿರುವ ಅಳಿಲುಗಳ ಬಗ್ಗೆ ಈ ಕೆಳಗೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸತ್ಯ?
1.ಅಳಿಲುಗಳು ಭೂಮಿಯಲ್ಲಿ ಬಿಲ ತೋಡಿಕೊಂಡು, ಅಲ್ಲಿಯೇ ತಮ್ಮ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ
2.ಅಳಿಲುಗಳು ತಮ್ಮ ಆಹಾರವಾದ ಬೀಜಗಳನ್ನು ನೆಲದೊಳಗೆ ಸಂಗ್ರಹಿಸಿಟ್ಟುಕೊಳ್ಳತ್ತವೆ.
3. ಅಳಿಲುಗಳು ಸರ್ವಭಕ್ಷಕ ಪ್ರಾಣಿಗಳು.

ಉತ್ತರಗಳ ಆಯ್ಕೆ ಹೀಗಿದೆ
a) ಒಂದು b) ಎರಡು c)ಎಲ್ಲ ಮೂರೂ ಸತ್ಯ d)ಯಾವವೂ ಅಲ್ಲ.- ಈ ಪ್ರಶ್ನೆಗೆ ‘ಒಂದು’ ಸರಿಯಾದ ಉತ್ತರ ಎಂದು ಬರೆದಿದ್ದಾರೆ. ಅಳಿಲುಗಳು ಸರ್ವಭಕ್ಷಕಗಳು ಎಂಬುದು ಮಾತ್ರ ಸತ್ಯ ಎಂದು ಭಾವಿಸಿ A ಆಯ್ಕೆಗೆ ಮಾರ್ಕ್ ಹಾಕಿದ್ದಾರೆ. ‘‘ಆದರೆ​ ‘ಒಂದು’ ಎಂದು ಉತ್ತರ ಬರೆದರೆ ತಪ್ಪು. ಅಳಿಲುಗಳು ಸರ್ವಭಕ್ಷಕಗಳು. ಅದರ ಜತೆಗೆ ಮೇಲೆ ನೀಡಲಾದ ಎರಡನೇ ಹೇಳಿಕೆಯೂ ಸತ್ಯ. ತಮ್ಮ ಆಹಾರಗಳಾದ ವಿವಿಧ ಬೀಜಗಳನ್ನು ಅವು ನೆಲದೊಳಗೆ ಹೂತಿಟ್ಟುಕೊಳ್ಳುತ್ತವೆ. ಆಮೇಲೆ ತಾವು ಇಟ್ಟ ಜಾಗವನ್ನು ಮರೆತುಬಿಡುತ್ತವೆ. ಆ ಬೀಜಗಳು ಗಿಡಗಳಾಗಿ, ಮರಗಳಾಗಿ ಬೆಳೆಯುತ್ತವೆ. ಬರೀ ಭಾರತವೊಂದೇ ಅಲ್ಲ, ವಿಶ್ವದಾದ್ಯಂತ ಕೋಟ್ಯಂತರ ಗಿಡ/ಮರಗಳ ಹುಟ್ಟಿಗೆ ಈ ಅಳಿಲುಗಳು ಕಾರಣ’’ ಎಂಬ ಸಂಗತಿಯನ್ನು ಪರ್ವೀನ್ ಕಸ್ವಾನ್ ತಿಳಿಸಿದ್ದಾರೆ. ಹೀಗಾಗಿ ಈ ಪ್ರಶ್ನೆಗೆ ಉತ್ತರ ‘ಬಿ’ ಎಂದಿದ್ದಾರೆ. ಅಳಿಲುಗಳ ಜೀವನ ಕ್ರಮ ಸರಿಯಾಗಿ ಗೊತ್ತಿಲ್ಲದೆ ಇದ್ದವರಿಗೆ ಈ ಪ್ರಶ್ನೆ ತಲೆಹಾಳು ಮಾಡುವುದರಲ್ಲಿ ಸಂದೇಹವೇ ಇಲ್ಲ.

ನೆಟ್ಟಿಗರು ಈ ಪೋಸ್ಟ್​ಗೆ ವಿಧವಿಧವಾದ ಕಮೆಂಟ್ ಹಾಕ್ತಿದ್ದಾರೆ. ಅಳಿಲು ಸರ್ವಭಕ್ಷಕ ಎಂಬ ವಿಷಯ ಗೊತ್ತಿತ್ತು, ಆದರೆ ಇವು ಮರಗಳ ಹುಟ್ಟಿಗೆ ಕಾರಣವಾಗುತ್ತವೆ, ತಮ್ಮ ಆಹಾರಗಳನ್ನು ನೆಲದಲ್ಲಿ ಹೂತಿಡುತ್ತವೆ ಎಂಬ ವಿಷಯ ಗೊತ್ತಿರಲಿಲ್ಲ. ಹೊಸ ವಿಷಯ ತಿಳಿದಂತೆ ಆಯಿತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಹಾಗೇ, ತಮಗೆ ತೋಚಿದ ಉತ್ತರಗಳನ್ನೂ ನೀಡುತ್ತಿದ್ದಾರೆ.

    Exit mobile version