ಬೆಂಗಳೂರು: ಅತ್ಯಂತ ಸೃಜನಾತ್ಮಕ ಫ್ಯಾಷನಿಸ್ಟಾ ಎಂದೇ ಕರೆಸಿಕೊಳ್ಳುತ್ತಿರುವ ಉರ್ಫಿ ಜಾವೇದ್ (Urfi Javed) ಸದಾ ಒಂದಲ್ಲ ಒಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಉರ್ಫಿ ಬೇಸಿಗೆ ಕಾಲಕ್ಕೆ ಉತ್ತಮ ಡ್ರೆಸ್ ಪರಿಚಯಿಸಿದ್ದಾರೆ. ಉರ್ಫಿ ಜಾವೇದ್ ಎದೆಯ ಮೇಲೆ ಫ್ಯಾನ್ (Urfi Javed Latest All-Black Style) ಅಳವಡಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ಡಿಸೈನರ್ ಶ್ವೇತಾ ಗುರ್ಮೀತ್ ಕೌರ್ ಜತೆ ಸೇರಿ ಈ ವಿಶಿಷ್ಟ ಡ್ರೆಸ್ (Urfi Javed Style Spinning) ಪರಿಚಯಿಸಿದ್ದಾರೆ ಉರ್ಫಿ. ಕಪ್ಪು ಬಣ್ಣದ ಡ್ರೆಸ್ನಲ್ಲಿ ನಟಿ ಕಂಡರು.
ಈ ಡ್ರೆಸ್ ಹಲವು ವಿಶೇಷತೆಗಳನ್ನೂ ಹೊಂದಿವೆ. ಈ ಫ್ಯಾನ್ಗಳಿಗೆ ಬ್ಯಾಟರಿ ಕನೆಕ್ಷನ್ ನೀಡಲಾಗಿದ್ದು, ಆನ್ ಮಾಡಿದ ಕೂಡಲೇ ತಿರುಗುತ್ತವೆ. ಈ ಬಗ್ಗೆ ನೆಟ್ಟಿಗರು ಉರ್ಫಿ ಬಗ್ಗೆ ಕೆಟ್ಟ ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಉರ್ಫಿ ಕ್ರಿಯೇಟಿವಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉರ್ಫಿ ಜಾವೇದ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಷೇಧಿಸಬೇಕು ಎಂದು ಹಲವರು ಹೇಳಿದ್ದಾರೆ.
ಸ್ಕರ್ಟ್ನೊಳಗೆ ಬ್ರಹ್ಮಾಂಡ ತೋರಿಸಿದ ಉರ್ಫಿ ಜಾವೇದ್!
ಇದಕ್ಕೂ ಮೊದಲು ಉರ್ಫಿ ಕಾರ್ಯಕ್ರಮವೊಂದರಲ್ಲಿ ಹೊಸ ಅವತಾರದಲ್ಲಿ (Dress With Planets) ಕಂಡು ಬಂದಿದ್ದರು. ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್ ಕೊಟ್ಟಿದ್ದರು. ತಮ್ಮ ಸ್ಕರ್ಟ್ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್ನಲ್ಲಿ ನೋಡಬಹುದಾಗಿತ್ತು. ʻಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವುʼ ಎಂದಿದ್ದರು.
ʻಲವ್ ಸೆಕ್ಸ್ ಔರ್ ಧೋಖಾʼ ಸೀಕ್ವೆಲ್ನಲ್ಲಿ ಉರ್ಫಿ ಜಾವೇದ್
2010ರಲ್ಲಿ ಬಿಡುಗಡೆಯಾದ ʻಲವ್ ಸೆಕ್ಸ್ ಔರ್ ಧೋಖಾʼ (Love Sex Aur Dhokha) ಸಿನಿಮಾವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ರಾಜ್ಕುಮಾರ್ ರಾವ್, ನೇಹಾ ಚೌಹಾನ್, ಅಂಶುಮಾನ್ ಝಾ ಮತ್ತು ನುಶ್ರತ್ ಭರುಚ್ಚ ಇತರರು ನಟಿಸಿದ್ದರು. ಈ ಸಿನಿಮಾದ ಸೀಕ್ವೆಲ್ಅನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಘೋಷಿಸಲಾಗಿತ್ತು. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ (Love Sex Aur Dhokha 2) ಏಪ್ರಿಲ್ 19ರಂದು ಥಿಯೇಟರ್ಗಳಲ್ಲಿ ಬರಲಿದೆ. ವಿಶೇಷ ಅಂದರೆ ಈ ಸಿನಿಮಾ ಮೂಲಕ ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಪಡೆದ ಉರ್ಫಿ ಜಾವೇದ್ (Urfi Javed) ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ. ‘ಲವ್ ಸೆಕ್ಸ್ ಔರ್ ಧೋಖಾ 2’ ಅನ್ನು ದಿವಾಕರ್ ಬ್ಯಾನರ್ಜಿ ಅವರೇ ನಿರ್ದೇಶಿಸಿದ್ದಾರೆ.
ಲವ್ ಸೆಕ್ಸ್ ಔರ್ ಧೋಖಾ 2ನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇಂಟರ್ನೆಟ್ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿದೆ. ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಸ್ವಾರ್ ಉರ್ಫಿ ಜಾವೇದ್, ‘ಲವ್ ಸೆಕ್ಸ್ ಔರ್ ಧೋಖಾ 2’ ಮೂಲಕ ದೊಡ್ಡ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ..