ಬೆಂಗಳೂರು: ಕೆಲವು ದಿನಗಳಿಂದ ನಟಿ ಉರ್ಫಿ ಜಾವೇದ್ (Urfi Javed) ಕುಡಿದು ತೇಲಡುತ್ತಿರುವ ವಿಡಿಯೊ ಭಾರಿ ವೈರಲ್ ಆಗಿತ್ತು. ಹೀಗಾಗಿ ಉರ್ಫಿಯ ಫ್ಯಾಷನ್ ಬಗ್ಗೆಯೇ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಮತ್ತೆ ಉರ್ಫಿ ಹೊಸ ಅವತರಾದಲ್ಲಿ ಕಂಡಿದ್ದಾರೆ. ಬಬಲ್ ಗಮ್ ಟಾಪ್‌ನಿಂದ ಕಸದ ಚೀಲದ ಉಡುಪಿನವರೆಗೆ ಬಿಗ್ ಬಾಸ್ OTT 1 ಖ್ಯಾತಿಯ ಉರ್ಫಿ ಸದ್ದು ಮಾಡುತ್ತಲೇ ಇರುತ್ತಾರೆ. ಈ ಬಾರಿ ಅಕ್ಟೋಪಸ್ ಡ್ರೆಸ್ ನಿಂದ ಬಹಳ ಮಜವಾಗಿ ಕಂಡಿದ್ದರು.
ಉರ್ಫಿ ಜಾವೇದ್ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಅಕ್ಟೋಪಸ್ ರೀತಿಯ ತೋಳುಗಳನ್ನು ಹೊಂದಿತ್ತು ಈ ಉಡುಗೆ. ಸದಾ ತನ್ನ ಉಡುಪಿನ ವಿಚಾರವಾಗಿ ಟ್ರೋಲ್ ಆಗುವ ಉರ್ಫಿ ಈ ಬಾರಿ ನೆಟ್ಟಿಗರಿಂದ ಪ್ರಶಂಸೆ ಪಡೆದಿದ್ದಾರೆ. ಬಟ್ಟೆಗಳಲ್ಲಿಯ ಉರ್ಫಿಯ ಸೃಜನಶೀಲತೆಗೆ 10 ಅಂಕ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದಕ್ಕೂ ಮುಂಚೆ ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್ ಕೊಟ್ಟಿದ್ದರು. ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು ನಟಿ ಉರ್ಫಿ. ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದರು ಫ್ಯಾನ್ಸ್. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿತ್ತು. ʻಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವುʼ ಎನ್ನುತ್ತಿದ್ದರು.
ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?
ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.