Site icon Vistara News

Vicky Pedia: ಕರ್ನಾಟಕದಲ್ಲಿ ಬರಗಾಲ: ʻಓ ನಲ್ಲ ನೀರಿಲ್ಲʼ ಎಂದ ವಿಕಾಸ್ ವಿಕ್ಕಿಪಿಡಿಯ!

Vicky Pedia new reels of Drought in Karnataka

ಬೆಂಗಳೂರು: ಕರ್ನಾಟಕದಲ್ಲಿ ಬರಗಾಲ (Drought in Karnataka) ತಾಂಡವವಾಡುತ್ತಿದೆ. ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. 219 ತಾಲೂಕುಗಳು ತೀವ್ರವಾಗಿ ಬಾಧಿತವಾಗಿವೆ. ಈಗಾಗಲೇ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮೇವು ಹಾಗೂ ನೀರಿಗೆ ಹಾಹಾಕಾರ (water Crisis) ಶುರುವಾಗಿದೆ. ಹೀಗಿರುವಾಗ ಇದೇ ಟಾಪಿಕ್‌ ಇಟ್ಟುಕೊಂಡು ವಿಕಾಸ್ ವಿಕ್ಕಿಪಿಡಿಯ ತಂಡ ಹೊಸ ರೀಲ್ಸ್‌ವೊಂದು ಶೇರ್‌ ಮಾಡಿಕೊಂಡಿದೆ. ಕರಿಮಣಿ ಮಾಲೀಕ ಟ್ಯೂನ್‌ ಬಳಸಿ ಸಖತ್‌ ಕಿಕ್‌ ಕೊಟ್ಟಿದ್ದಾರೆ.

ಈ ತಿಂಗಳು ನೀರಿಗೆಂದು 6000 ರೂ. ಕೊಡಿ ಎಂದು ವಿಕಾಸ್ ವಿಕ್ಕಿಪಿಡಿಯ ಬೇಡಿಕೆ ಇಡುತ್ತಾರೆ. ಆಗ ಈ ಹಾಡನ್ನು ಹೇಳುತ್ತಾರೆ.

ನದಿಗಳೆಲ್ಲ ಖಾಲಿ ಖಾಲಿ
borewell ಮನೆಯಲಿ ಇದ್ದರೂ
ನಲ್ಲಿಗೆ..sumpಗೆ ಟ್ಯಾಂಕರ್‌ ಬೇಕು waterಗೇ
ಓ ನಲ್ಲ ನೀರಿಲ್ಲ
ಕುಡಿಯೋಕೆ ತೊಳಿಯೋಕೆ ನೀರಿಲ್ಲ.
ಸ್ನಾನಕೆ ಬಟ್ಟೆಗೆ ನೀರಿಲ್ಲ.

ಇದನ್ನೂ ಓದಿ: Ranganayaka Movie: ʻಡ್ರೋನ್‌ʼ ಕಥೆ ಬೇಡ ಎಂದ ಮಂಜ; ವಿಕ್ಕಿ-ಜಗ್ಗೇಶ್‌ ಕಾಮಿಡಿಗೆ ನಕ್ಕ ಫ್ಯಾನ್ಸ್‌!

ಎಂದು ರೀಲ್ಸ್‌ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್‌ ಮಾಡಿ ಸಖತ್‌ ಫೇಮಸ್‌ ಆಗಿದ್ದರು. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ ಈ ರೀತಿಯ ಕ್ರಿಯೇಟಿವ್‌ ರೀಲ್ಸ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

Exit mobile version