Site icon Vistara News

Viral Video: ನಾನು ನಂದಿನಿ ಬೆಂಗಳೂರು ಬಂದಿನಿ; ಭಾರಿ ವೀಕ್ಷಣೆ ಕಂಡ ವಿಕ್ಕಿಪೀಡಿಯಾ ಹಾಡು!

Vickypedia

ಬೆಂಗಳೂರು: ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ಭಾಷಣ ಟ್ರಾನ್ಸ್‌ಲೇಟ್‌ ವಿಡಿಯೊ ಅಣಕು ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸಖತ್‌ ಆಗಿ ಕಾಮಿಡಿಯಾಗಿ ಅಣುಕಿಸಿದ್ದರು. ಆದರೀಗ ಹೆಣ್ಣು ಮಕ್ಕಳು ಉದ್ಯೋಗಕ್ಕೆಂದು ನಗರಕ್ಕೆ ಬಂದು, ಪಿಜಿಯಲ್ಲಿ ಯಾವ ರೀತಿ ಸಮಸ್ಯೆಗೆ ಗುರಿಯಾಗುತ್ತಾರೆ, ಅಷ್ಟೇ ಅಲ್ಲದೇ ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಸಮಸ್ಯೆಗೆ ಗುರಿಯಾಗುತ್ತಾರೆ ಎಂಬುದನ್ನು ವಿಡಿಯೊ ಮೂಲಕ ಹಾಡಿದ್ದಾರೆ. ಇದೀಗ ಈ ಹಾಡು ಸಖತ್‌ ವೈರಲ್‌ (Viral Video) ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಒಂದೇ ದಿನ ಐದು ಮಿಲಿಯನ್‌ (50 ಲಕ್ಷ) ವೀಕ್ಷಣೆ ಕಂಡಿದೆ.

ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ, ಬಾರ್ಬಿ ಹಾಡಿನ ಟ್ಯೂನ್‌ವನ್ನು ಬಳಸಿಕೊಂಡು ಈ ಹಾಡು ಹಾಡಿದ್ದಾರೆ. ‘ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ, ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ, ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು, ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ, ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್’ ಇದು ಈ ಹಾಡಿನ ಲಿರೀಕ್ಸ್‌ ಆಗಿದೆ.

ವೈರಲ್‌ ನ್ಯೂಸ್‌

ಇದನ್ನೂ ಓದಿ; Jawan Movie: ಅಟ್ಲೀ ಜತೆ ತಮಿಳು ಮಾತನಾಡಿದ ಶಾರುಖ್‌ ಖಾನ್‌; ವಿಡಿಯೊ ವೈರಲ್‌!

ವಿಕ್ಕಿಪೀಡಿಯಾದ ವಿಕಾಸ ಮತ್ತು ತಂಡದವರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಒಂದೇ ದಿನ 5 ಮಿಲಿಯನ್​ ವೀಕ್ಷಣೆ ಕಂಡಿದೆ. ನೆಟ್ಟಿಗರೊಬ್ಬರು ʻʻನಿನ್ನೆಯಿಂದ ನಾನು ನಂದಿನಿ ಹಾಡು ಹಾಡ್ತಾ ತಿರಗ್ತಾ ಇದೀನಿʼʼ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻನಾನು ನಂದಿನಿ, ಪಿಯುಸಿ ಮುಗ್ಸಿನಿ. ಕಾಲೇಜಿಗ್ ಹೋಗಲ್ಲ. ಮನೆ ಕೆಲ್ಸ ಬರಲ್ಲ. ಮನೆಲ್ ಬೈತಾರೆ. ಮದ್ವೆ ಮಾಡ್ತಿನಿ ಅಂತಾರೆ. ಓದೋಕ್ ಹೋಗೋದಾ? ಮದ್ವೆ ಆಗೋದಾ? ಬಾರೆ ನಂದಿನಿ ತಾಳಿ ಕಡ್ತಿನಿ. ಬೇ. ಬೇ ಬೇಡಾ. ಬಾರೆ ನಂದಿನಿ ಮನೆ ಕಟ್ತಿನಿ ಓಹ್ ಬೇಡಾ ಓಹ್ ಬೇಡಾ. ಬಾರೆ ನಂದಿನಿ ಬಂಗಾರ ಮಾಡ್ಸ್ತಿನಿ. ಬೇ. ಬೇ ಬೇಡಾ. ಬಾರೆ ನಂದಿನಿ ಸೀರೆ ಕೊಡ್ಸ್ತಿನಿ. ಓಹ್ ಬೇಡಾ ಓಹ್ ಬೇಡಾ. ನೋಡಮ್ಮ ಅಡುಗೆ ನೀ ಕಲಿಬೇಕುʼʼ ಎಂದು ಮತ್ತೊಬ್ಬರು ಇದೇ ರೀತಿ ಸ್ವತಃ ಹಾಡನ್ನು ಬರೆದು ಕಮೆಂಟ್‌ ಮಾಡಿದ್ದಾರೆ.

Exit mobile version