Site icon Vistara News

Viral News: 128 ವರ್ಷಗಳ ಹಿಂದೆ ಮುಳುಗಿದ್ದ ಹಡಗಿನ ಅವಶೇಷ ಪತ್ತೆ; ರಕ್ಷಣೆಗಿದ್ದ ಲೈಫ್‌ಬೋಟ್‌ ಕೂಡ ಮುಳುಗಿತ್ತು!

#image_title

ಮಿಚಿಗನ್: ಸುಮಾರು 128 ವರ್ಷಗಳ ಹಿಂದೆ ನದಿಯಲ್ಲಿ ಮುಳುಗಿ ಹಲವರ ಜೀವವನ್ನು ಬಲಿ ಪಡೆದಿದ್ದ ಹಡಗಿನ ಅವಶೇಷಗಳನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ಇದೀಗ ಪತ್ತೆ ಹಚ್ಚಿದ್ದಾರೆ. ಮಿಚಿಗನ್‌ ಕರಾವಳಿಯ ಉತ್ತರದಲ್ಲಿರುವ ಹ್ಯೂರನ್‌ ಸರೋವರದ ಥಂಡರ್‌ ಬೇ ಪ್ರದೇಶದಲ್ಲಿ ಈ ಐರನ್‌ಟನ್‌ ಹೆಸರಿನ ಹಡಗು ಇರುವುದಾಗಿ ಹೇಳಲಾಗಿದೆ.

ಇದನ್ನೂ ಓದಿ: Viral News: ಈಕೆಗೆ ಆಕೆಯ ಗಂಡ ಇಷ್ಟ, ಆಕೆಗೆ ಈಕೆಯ ಗಂಡನ ಮೇಲೆ ಪ್ರೀತಿ, ಕೊನೆಗೆ ಗಂಡಂದಿರೇ ಎಕ್ಸ್‌ಚೇಂಜ್‌

1894ರಲ್ಲಿ 191 ಅಡಿಯಷ್ಟು ದೊಡ್ಡ ಹಡಗು ಸರಕು ಸಾಗಣೆ ಮಾಡುತ್ತಿತ್ತು. ರಾತ್ರಿ ವೇಳೆ ಈ ಹಡಗು ಧಾನ್ಯ ಸಾಗಿಸುವ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದಿದ್ದು, ಎರಡೂ ಹಡಗುಗಳು ಮುಳುಗಿದ್ದವು. ಐರನ್‌ಟನ್‌ ಹಡಗಿನ ಕ್ಯಾಪ್ಟನ್‌ ಮತ್ತು ಆರು ನಾವಿಕರು, ಅದರಲ್ಲಿದ್ದ ಲೈಫ್‌ಬೋಟ್‌ ಹತ್ತಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದರು. ಆದರೆ ಲೈಫ್‌ಬೋಟ್‌ ಅನ್ನು ಹಡಗಿನಿಂದ ತಪ್ಪಿಸುವುದಕ್ಕೆ ಮೊದಲೇ ಹಡಗು ಮುಳುಗಿ ಲೈಫ್‌ಬೋಟ್‌ ಕೂಡ ಮುಳುಗಿತ್ತು. ಅದೇ ಐರನ್‌ಟನ್‌ ಹಡಗು ಇದೀಗ ಪತ್ತೆಯಾಗಿದೆ.

ಐರನ್‌ಟನ್‌ ಹಡಗಿಗೆ ಕಟ್ಟಿದ್ದ ಲೈಫ್‌ಬೋಟ್‌ ಕೂಡ ಸಿಕ್ಕಿದೆ. ಯಾವುದೇ ಮನುಷ್ಯರ ಅವಶೇಷ ಸಿಕ್ಕಿಲ್ಲ. 2019ರಲ್ಲಿಯೇ ಈ ಹಡಗನ್ನು ಪತ್ತೆ ಹಚ್ಚಲಾಗಿದೆ. ರಿಮೋಟ್‌ ಕ್ಯಾಮೆರಾಗಳನ್ನು ಕಳುಹಿಸಿ ಸೂಕ್ಷ್ಮವಾಗಿ ಸರ್ವೇ ನಡೆಸಲಾಗುತ್ತಿದೆ. ಹಡಗು ಮುಳುಗಿರುವ ಸ್ಥಳವನ್ನು ನಿಖರವಾಗಿ ಬಹಿರಂಗಪಡಿಸಿಲ್ಲ. ಒಂದು ವೇಳೆ ಸ್ಥಳ ಬಹಿರಂಗವಾದರೆ ಬೇರೆಯವರು ಕುತೂಹಲದಿಂದ ಅಲ್ಲಿಗೆ ತೆರಳುವುದರಿಂದಾಗಿ ಅಧ್ಯಯನಕ್ಕೆ ತೊಂದರೆಯುಂಟಾಗಬಹುದು ಎನ್ನುವ ದೃಷ್ಟಿಯಿಂದ ಸ್ಥಳ ಬಹಿರಂಗಪಡಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Viral News : ಕಚ್ಚಾ ಬಾದಾಮ್‌ ಗಾಯಕನಿಗೆ ಮೋಸ; ಕಾಪಿರೈಟ್ಸ್‌ ವಿಚಾರದಲ್ಲಿ ದೂರು ದಾಖಲಿಸಿದ ಭುಬನ್‌

ಶೀಘ್ರವೇ ಅಧ್ಯಯನ ಪೂರ್ಣಗೊಳ್ಳಲಿದ್ದು, ನಿಖರ ಸ್ಥಳವನ್ನು ಹೇಳಲಾಗುವುದು. ಹಾಗೆಯೇ ಆ ಸ್ಥಳದ ಗುರುತು ಸಿಗುವಂತೆ ಮೋರಿಂಗ್‌ ಬೋಯ್‌ ಅನ್ನೂ ಹಾಕಲಾಗುವುದು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version