Site icon Vistara News

Viral News : 75 ವರ್ಷದ ವೃದ್ಧನ ಕಿಡ್ನಿಯಿಂದ 300 ಕಲ್ಲುಗಳನ್ನು ತೆಗೆದ ವೈದ್ಯರು!

#image_title

ಹೈದರಾಬಾದ್‌: ಕಿಡ್ನಿಯಲ್ಲಿ ಕಲ್ಲಾಗುವುದು ಈಗಿನ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿಬಿಟ್ಟಿದೆ. ಆದರೆ ಹೈದರಾಬಾದ್‌ನ ಈ ವ್ಯಕ್ತಿಯ ಕಿಡ್ನಿಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 300 ಕಲ್ಲುಗಳಾಗಿದ್ದವು. ಅವೆಲ್ಲವನ್ನೂ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದು, ಆ ಸುದ್ದಿ ಭಾರೀ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral Video : ಅರ್ಜುನ್‌ ಜತೆ ಫೋಟೋಗೆ ಪೋಸ್‌ ಕೊಡಲು ಅನುಮತಿ ಕೇಳಿದ ಉರ್ಫಿ; ವೈರಲ್‌ ಆಯ್ತು ವಿಡಿಯೊ
ಕರೀಂನಗರ ಜಿಲ್ಲೆಯ ನಿವಾಸಿಯಾಗಿರುವ ರಾಮ್‌ ರೆಡ್ಡಿ(75) ಹೆಸರಿನ ರೈತನಿಗೆ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಸೊಂಟ ಮತ್ತು ಕಿಡ್ನಿ ಭಾಗದಲ್ಲಿ ನೋವು ಹೆಚ್ಚಾಗಿತ್ತು. ಆ ಹಿನ್ನೆಲೆ ಅವರು ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಹೈದರಾಬಾದ್‌ನಲ್ಲಿರುವ ಏಷಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ನೆಫ್ರಾಲಜಿ & ಉರೊಲಜಿ (ಮೂತ್ರಶಾಸ್ತ್ರ) ಆಸ್ಪತ್ರೆಯಲ್ಲಿ ತೋರಿಸಲು ಸೂಚಿಸಲಾಗಿದೆ.

ವೈದ್ಯರ ಸಲಹೆ ಮೇರೆಗೆ ರಾಮ್‌ ರೆಡ್ಡಿ ಅವರು ಎಐಎನ್‌ಯು ಆಸ್ಪತ್ರೆಯಲ್ಲಿ ತೋರಿಸಿದಾಗ ಅವರ ಕಿಡ್ನಿಯಲ್ಲಿ ಬರೋಬ್ಬರಿ 7 ಸೆಂ.ಮೀ.ನಷ್ಟು ದೊಡ್ಡ ಕಲ್ಲು ಇರುವುದ ಪತ್ತೆಯಾಗಿದೆ. ಡಾ.ತೈಫ್‌ ಬೆಂಡಿಗೆರಿ ಅವರು ಹೇಳುವ ಪ್ರಕಾರ ಮನುಷ್ಯರ ಕಿಡ್ನಿಯಲ್ಲಿ ಸಾಮಾನ್ಯವಾಗಿ 7ಮಿ.ಮೀ.ನಿಂದ 15ಮಿ.ಮೀ. ಗಾತ್ರದ ಕಲ್ಲಿರುತ್ತದೆ. ಆದರೆ ರಾಮ್‌ ರೆಡ್ಡಿ ಅವರ ಕಿಡ್ನಿಯಲ್ಲಿ ಅತ್ಯಂತ ದೊಡ್ಡ ಕಲ್ಲಿರುವುದರಿಂದ ಶಸ್ತ್ರಚಿಕಿತ್ಸೆ ಮಾಡುವುದು ಕೂಡ ಒಂದು ಸವಾಲಾಗಿತ್ತು.

ಇದನ್ನೂ ಓದಿ: Lalu Prasad Yadav: ಕಿಡ್ನಿ ಕಸಿ ಬಳಿಕ ಭಾರತಕ್ಕೆ ಬಂದ ಲಾಲು ಪ್ರಸಾದ್‌, ತಂದೆಗೆ ಕಿಡ್ನಿ ಕೊಟ್ಟ ಮಗಳಿಂದ ಭಾವುಕ ಟ್ವೀಟ್‌
ಆ ದೊಡ್ಡ ಕಲ್ಲು ಒಟ್ಟು 300 ಚಿಕ್ಕ ಚಿಕ್ಕ ಕಲ್ಲುಗಳಿಂದ ಕೂಡಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ರಾಮ್‌ ರೆಡ್ಡಿ ಅವರಿಗೆ ವಯೋ ಸಹಜ ಕಾಯಿಲೆಗಳೂ ಇದ್ದಿದ್ದರಿಂದಾಗಿ ಅತ್ಯಂತ ಸೂಕ್ಷ್ಮವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾದ ಪರಿಸ್ಥಿತಿ ಇತ್ತು. ಡಾ. ಮಲ್ಲಿಕಾರ್ಜುನ್‌ ಅವರ ತಂಡವು ಅಡ್ವಾನ್ಸಡ್‌ ಲೇಸರ್‌ ತಂತ್ರಜ್ಞಾನ ಬಳಸಿಕೊಂಡು ಶಸ್ತ್ರಚಿಕಿತ್ಸೆ ಮಾಡಿದ್ದು, ಅಷ್ಟೂ ಕಲ್ಲುಗಳನ್ನು ಯಶಸ್ವಿಯಾಗಿ ಹೊರತೆಗೆದಿದೆ.

Exit mobile version