Site icon Vistara News

Viral News : ಹುಷಾರಿಲ್ಲವೆಂದು ಸುಳ್ಳು ಹೇಳಿ ರಜೆ ತೆಗೆದುಕೊಳ್ಳುವುದೂ ಕಷ್ಟವೇ! ನಿಮ್ಮ ಆರೋಗ್ಯವನ್ನು ಅಳೆಯುತ್ತದೆ ಈ ಎಐ

#image_title

ಬೆಂಗಳೂರು: ಕಚೇರಿಗೆ ಹೋಗುವವರಿಗೆ ತುರ್ತಾಗಿ ರಜೆ ಬೇಕೆಂದರೆ ಅವರು ಹೇಳುವ ಸುಳ್ಳೆಂದರೆ ಹುಷಾರಿಲ್ಲ ಎನ್ನುವುದು. ಆದರೆ ಇನ್ನು ಮುಂದೆ ಅದು (Viral News) ಕಷ್ಟಸಾಧ್ಯ. ಏಕೆಂದರೆ ನಿಮ್ಮ ಆರೋಗ್ಯ ಹದಗೆಟ್ಟಿದೆಯೋ ಇಲ್ಲವೋ ಎಂದು ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್)‌ ಒಂದು ಇದೀಗ ಸಿದ್ಧವಾಗಿದೆ.

ಇದನ್ನೂ ಓದಿ: A Narayanaswamy: ವಿಸ್ತಾರ ನ್ಯೂಸ್‌ ಕಚೇರಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಭೇಟಿ, ಶುಭ ಹಾರೈಕೆ
ಹೌದು. ಸೂರತ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಜರ್ಮನಿಯ ರೆನಿಶ್ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್‌ನ ಸಂಶೋಧಕರು ಈ ರೀತಿಯ ಎಐ ಅಭಿವೃದ್ಧಿ ಮಾಡಿದ್ದಾರೆ. ನಿಮಗೆ ಶೀತ ಆಗಿದೆಯೋ ಇಲ್ಲವೋ ಎನ್ನುವುದನ್ನು ಈ ಎಐ ಪತ್ತೆ ಹಚ್ಚಬಹುದು ಎಂದಿದ್ದಾರೆ ಸಂಶೋಧಕರು.

ಸಂಶೋಧಕರು 630 ಜನರ ಧ್ವನಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅದರಲ್ಲಿ 111 ಜನರು ಶೀತದಿಂದ ಬಳಲುತ್ತಿದ್ದವರು ಇದ್ದರು. ಈ ಎಐ 630 ಜನರಲ್ಲಿ ಶೀತ ಯಾರ್ಯಾರಿಗೆ ಇದೆ ಮತ್ತು ಯಾರಿಗೆ ಇಲ್ಲ ಎನ್ನುವುದನ್ನು ವರ್ಗೀಕರಿಸಿ ಕೊಟ್ಟಿದೆ. ಜನರ ಧ್ವನಿಯನ್ನೇ ಅಂದರೆ ಹಾರ್ಮೋನಿಕ್ಸ್‌ ಅನ್ನೇ ಬಳಸಿಕೊಂಡು ಈ ವರ್ಗೀಕರಣ ಮಾಡಿದೆ.

ಇದನ್ನೂ ಓದಿ: Viral Video: 500 ರೂ. ನೋಟನ್ನು ಹಾಕಿ ಪರೋಟ ಲಟ್ಟಿಸಿ, ಬೇಯಿಸಿದ ಮೇಲೆ ಅದರಿಂದ 2000 ರೂ. ಹೊರತೆಗೆದ ಮಹಿಳೆ!
ಪರೀಕ್ಷೆ ಒಳಗಾದವರಿಗೆ 1ರಿಂದ 40ರವರೆಗೆ ಎಣಿಸುವುದಕ್ಕೆ ಹೇಳಲಾಗಿತ್ತು. ಹಾಗೆಯೇ ಅವರಿಗೆ ಈಸೋಪನ ನೀತಿಕಥೆಗಳನ್ನೂ ಓದಲು ಹೇಳಲಾಯಿತು. ಈ ಓದುಗಾರಿಕೆಯಲ್ಲೇ ಶೀತ ಇರುವವರನ್ನು ಪತ್ತೆ ಹಚ್ಚಲಾಗಿದೆ. ಇದರ ನಿಖರತೆ ಶೇ.70ರಷ್ಟಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧಕರ ಪ್ರಕಾರ, ಈ ಎಐ ಜನರಿಗೆ ಸಾಂಕ್ರಾಮಿಕ ಸೋಂಕುಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

Exit mobile version