Site icon Vistara News

Viral News: ಉದ್ಯೋಗಿಯ ಹುಟ್ಟುಹಬ್ಬವನ್ನು ಖಾಸಗಿ ಜೆಟ್‌‌ನಲ್ಲಿ ಆಚರಿಸಿದ ಅನಂತ್ ಅಂಬಾನಿ!

#image_title

ಮುಂಬೈ: ಉದ್ಯೋಗಿಗಳಿಗೆ ಬೋನಸ್‌ ನೀಡುವುದು, ಗಿಫ್ಟ್‌ಗಳನ್ನು ನೀಡುವುದು ಮಾಮೂಲಿ. ಆದರೆ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ (Anant Ambani) ತಮ್ಮ ಸಂಸ್ಥೆಯ ಉದ್ಯೋಗಿಯೊಬ್ಬರ ಬರ್ತ್‌ಡೇ ಅನ್ನೇ ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ. ಖಾಸಗಿ ಜೆಟ್‌ನಲ್ಲಿ ಜನ್ಮದಿನಾಚರಣೆ ಆಚರಿಸುವ ಮೂಲಕ ಉದ್ಯೋಗಿಗೆ ಖುಷಿ (Viral News) ಪಡಿಸಿದ್ದಾರೆ.

ಇದನ್ನೂ ಓದಿ: Viral Video : “ಓಂ ಎಲಾನ್‌ ಮಸ್ಕಾಯ ನಮಃ” ಎನ್ನಲಾರಂಭಿಸಿದ ಬೆಂಗಳೂರಿಗರು! ಏನಿದು ವಿಶೇಷ ಪೂಜೆ?
ಅನಂತ್‌ ಅಂಬಾನಿ ಅವರು ಉದ್ಯೋಗಿಯ ಬರ್ತ್‌ಡೇ ಆಚರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೀಲಿ ಬಣ್ಣದ ಟೀ ಶರ್ಟ ಹಾಗೂ ಕಪ್ಪು ಪ್ಯಾಂಟ್‌ ಧರಿಸಿರುವ ಅನಂತ್‌ ಅವರು ಕೇಕ್‌ ತಂದು ಉದ್ಯೋಗಿ ಬಳಿ ಕಟ್‌ ಮಾಡಿಸುವುದನ್ನು ವಿಡಿಯೊದಲ್ಲಿ ಕಾಣಬಹುದು. ಖುಷಿಯಿಂದ ಉದ್ಯೋಗಿ ಕಣ್ಣೀರಿಟ್ಟಿದ್ದಾರೆ. ಹಾಗೆಯೇ ಅನಂತ್‌ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಅನಂತ್‌ ಅವರು ಕೇಕ್‌ ಅನ್ನು ಕತ್ತರಿಸಿ ಉದ್ಯೋಗಿಗೆ ತಿನ್ನಿಸಿದ್ದಾರೆ.


ಅಂಬಾನಿ ಅವರ ಕಿರಿಯ ಮಗನಾಗಿರುವ ಅನಂತ್‌ ಅಂಬಾನಿ ಅವರು ಶೀಘ್ರದಲ್ಲೇ ರಾಧಿಕಾ ಮರ್ಚೆಂಟ್‌ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಜೋಡಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದೆ. ಮದುವೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

Exit mobile version