ಟೋಕಿಯೋ: ಸಮುದ್ರದ ನೀರಿನಲ್ಲಿ ಎಂಥೆಂಥದೋ ವಸ್ತುಗಳು ತೇಲಿಬಂದು ದಡ ಸೇರುತ್ತವೆ. ಅದೇ ರೀತಿ ಜಪಾನ್ ದೇಶದಲ್ಲಿ ದೊಡ್ಡದಾದ ಚೆಂಡೊಂದು ಸಮುದ್ರದಲ್ಲಿ ತೇಲಿಬಂದಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಚೆಂಡಿನ ಫೋಟೋಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral News) ಆಗಿವೆ.
ಇದನ್ನೂ ಓದಿ: Viral Video: ನಡೆಯೋದನ್ನು ಕಲಿಯೋ ಎಂದರೆ ಡ್ಯಾನ್ಸ್ ಮಾಡಿ ತೋರಿಸಿದ ಪುಟಾಣಿ; ಈ ಮುದ್ದಾದ ವಿಡಿಯೋಗೆ ಮನಸೋಲದವರಿಲ್ಲ
ಹಮಾಮತ್ಸು ಪ್ರದೇಶದ ಕರಾವಳಿ ಭಾಗದ ನಿವಾಸಿಯೊಬ್ಬರು ಸಮುದ್ರದ ದಡದಲ್ಲಿ ದೊಡ್ಡ ಚೆಂಡೊಂದು ಕಂಡಿದ್ದಾಗಿ ಬುಧವಾರ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯ ಆಡಳಿತವನ್ನು ಸಂಪರ್ಕಿಸಿ ಸಮುದ್ರ ದಡಕ್ಕೆ ಯಾರೂ ಬರದಂತೆ ತಡೆದಿದ್ದಾರೆ. ತಜ್ಞರನ್ನು ಕರೆಸಿ ಪರೀಕ್ಷೆ ನಡೆಸಿದಾಗ ಚೆಂಡು ಒಳಗೆ ಟೊಳ್ಳಾಗಿರುವುದು ತಿಳಿದುಬಂದಿದೆ. 1.5 ಮೀಟರ್ ಅಷ್ಟು ವ್ಯಾಸ ಹೊಂದಿರುವ ಈ ಚೆಂಡು ಕಬ್ಬಿಣದಿಂದ ನಿರ್ಮಿತವಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಸಂಜೆ 4 ಗಂಟೆಯವರೆಗೆ ಬೀಚ್ ಬಳಿ ಯಾರೊಬ್ಬರೂ ಬರದಂತೆ ತಡೆ ನೀಡಲಾಗಿತ್ತು. ಚೆಂಡಿನಿಂದ ಯಾವುದೇ ಅಪಾಯದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿಲ್ಲ. ಸಮುದ್ರದ ಗಣಿಯಿಂದ ಚೆಂಡು ಬಂದಿದ್ದರೂ ಬಂದಿರಬಹುದು ಎಂದು ಅಂದಾಜಿಸಿ ಹೇಳಲಾಗಿದೆ. ಈ ಚೆಂಡಿನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ.