Site icon Vistara News

Viral News: ರಾಮನ ಚಿತ್ರವಿರುವ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ; ಅಂಗಡಿ ಮಾಲೀಕ ಅರೆಸ್ಟ್‌

Viral News

ದೆಹಲಿ: ಭಗವಾನ್ ರಾಮನ (god ram) ಚಿತ್ರಗಳನ್ನು ಹೊಂದಿರುವ ಪ್ಲೇಟ್‌ಗಳಲ್ಲಿ (plate) ನಾನ್‌ವೆಜ್‌ ಬಿರಿಯಾನಿ (biriyani) ಬಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social) ವೈರಲ್ (Viral News) ಆಗಿದೆ. ಈ ಘಟನೆ ಉತ್ತರ ದೆಹಲಿಯ (north delhi) ಜಹಾಂಗೀರ್‌ಪುರಿಯಲ್ಲಿರುವ (jahangirpuri) ಬಿರಿಯಾನಿ ಜಾಯಿಂಟ್‌ನಲ್ಲಿ ಭಾನುವಾರ ನಡೆದಿದೆ.

ಈ ವಿಡಿಯೋದಲ್ಲಿ ಭಗವಾನ್ ರಾಮನ ಚಿತ್ರಗಳನ್ನು ಒಳಗೊಂಡ ಪ್ಲೇಟ್‌ ಗಳಲ್ಲಿ ಬಿರಿಯಾನಿ ನೀಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಬಿರಿಯಾನಿ ಅಂಗಡಿಯ ಬಳಿ ಜನರ ಗುಂಪಾಗಿ ನಿಂತು ಬಳಕೆ ಮಾಡಿ ಬಿಸಾಡುವ ಪ್ಲೇಟ್ ಗಳಲ್ಲಿ ಬಿರಿಯಾನಿ ತಿನ್ನುತ್ತಿದ್ದರು. ಅಂಗಡಿ ಮಾಲೀಕನ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಬಳಿಕ ಸ್ಥಳಕ್ಕೆ ತೆರಳಿದ ಪೊಲೀಸರು ರಾಮನ ಚಿತ್ರವಿದ್ದ ಪ್ಲೇಟ್‌ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕನನ್ನು ಬಂಧಿಸಿದರು.

ಇದನ್ನೂ ಓದಿ: IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

ಬಿರಿಯಾನಿ ಅಂಗಡಿಯಲ್ಲಿ ಗಲಾಟೆ

ರಾಮನ ಚಿತ್ರವಿರುವ ಪ್ಲೇಟ್ ನಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿರುವ ಮಾಹಿತಿ ತಿಳಿದು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಮತ್ತು ಬಜರಂಗದಳದ ಸದಸ್ಯರು ಸೇರಿದ್ದು ಅಂಗಡಿಯ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಆ ಪ್ಲೇಟ್‌ಗಳಲ್ಲಿ ಬಿರಿಯಾನಿ ಮಾರಾಟ ಮಾಡುವುದನ್ನು ವಿರೋಧಿಸಿ ಪೊಲೀಸರಿಗೆ ದೂರು ನೀಡಿದರು. ಅಂಗಡಿಯಲ್ಲಿ ಬಿರಿಯಾನಿ ಮಾರುವವರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.


ಪೇಪರ್ ಪ್ಲೇಟ್‌ಗಳ ಬಂಡಲ್‌ ನಲ್ಲಿ ಒಂದೆರಡು ಪ್ಲೇಟ್‌ಗಳು ಮಾತ್ರ ಭಗವಾನ್ ರಾಮನ ಫೋಟೋಗಳನ್ನು ಹೊಂದಿದ್ದವು. ಪ್ರಸ್ತುತ, ಜಹಾಂಗೀರ್ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕುರಿತು ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ಮುಂದುವರಿಕೆ

ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಅಂಗಡಿ ಮಾಲೀಕರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಇದನ್ನು ಮಾಡಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲು ಇದನ್ನು ಮಾಡಲಾಗಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ದೆಹಲಿಯ ಜನರು ಬೀದಿ ಬದಿಯ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಹಳೆಯ ದೆಹಲಿಯಲ್ಲಿಯೂ ಆಹಾರದ ರುಚಿ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಈ ಭಾಗದಲ್ಲಿ ಬಿರಿಯಾನಿ ಕೂಡ ಅನೇಕರು ಇಷ್ಟಪಡುತ್ತಾರೆ. ಆದರೆ ಆಹಾರ ಮಾರಾಟಕ್ಕಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಸರಿಯಲ್ಲ ಎಂದು ನಗರದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Exit mobile version