Site icon Vistara News

Viral News : ಮದುವೆ ದಿನವೇ ಕೊನೆಯುಸಿರೆಳೆದ ವಧು, ಆಕೆಯ ತಂಗಿ ಜತೆ ನಡೆಯಿತು ವರನ ಮದುವೆ!

#image_title

ಗಾಂಧಿನಗರ: ಆಕೆ ಮದುವೆಯಾಗುವ ಕನಸು ಕಂಡಿದ್ದಳು. ಕನಸು ನನಸಾಗುವ ಸಮಯ ಬಂದಿತ್ತು. ಮದುವೆ ದಿನದಂದು ವರನ ದಿಬ್ಬಣವೂ ಆಕೆಯ ಮನೆಗೆ ಬಂದಾಗಿತ್ತು. ಆಗ ಇದ್ದಕ್ಕಿದ್ದಂತೆ ಯಮರಾಯ ಬಂದು ಆಕೆಯ ಬದುಕನ್ನೇ (Viral News) ಕೊನೆಯಾಗಿಸಿಬಿಟ್ಟಿದ್ದಾನೆ.

ಇದನ್ನೂ ಓದಿ: Viral Video : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಮ್ಮನನ್ನು ತಬ್ಬಿಕೊಂಡ ಮರಿ ಕೋತಿ; ಇದು ಕರುಳು ಹಿಂಡುವ ವಿಡಿಯೊ
ಹೌದು. ಇನ್ನೇನು ಹಸೆಮಣೆ ಏರಬೇಕಿದ್ದ ವಧು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಗುಜರಾತ್ ಅಲ್ಲಿ ನಡೆದಿದೆ. ಗುಜರಾತಿನ ಭಾವನಗರದ ಭಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ಜಿನಾಭಾಯಿ ರಾಥೋಡ್ ಪುತ್ರಿ ಹೀತಲ್ ಹಾಗೂ ನಾರಿ ಗ್ರಾಮದ ರಾಣಾಭಾಯ್ ಬೂತಭಾಯ್ ಅಲ್ಗೋಟಾರ್ ಅವರ ಪುತ್ರ ವಿಶಾಲ್ ಮದುವೆ ನಡೆಯುವುದರಲ್ಲಿತ್ತು. ಆದರೆ ಅಷ್ಟರಲ್ಲಾಗಲೇ ವಧುವಿಗೆ ಹೃದಯಾಘಾತವಾಗಿದ್ದು, ಆಕೆ ಸಾವನ್ನಪ್ಪಿದ್ದಾಳೆ.

ಆದರೆ ಮದುವೆ ನಡೆಯಲೇಬೇಕೆಂದು ಹೇಳಿದ ಊರಿನ ಹಿರಿಯರು ವಧುವಿನ ತಂಗಿಯನ್ನೇ ವರನಿಗೆ ಕೊಟ್ಟು ಮದುವೆ ಮಾಡುವುದಕ್ಕೆ ಹೇಳಿದ್ದಾರೆ. ಅದಕ್ಕೆ ಎರಡೂ ಕುಟುಂಬವನ್ನು ಒಪ್ಪಿಸಿದ್ದಾರೆ. ಅಕ್ಕನ ಶವವನ್ನು ಕೋಲ್ಡ್ ಬಾಕ್ಸ್ ಅಲ್ಲಿ ಇರಿಸಿ, ತಂಗಿಯ ಮದುವೆ ಮಾಡಲಾಗಿದೆ. ಮದುವೆ ದಿಬ್ಬಣವು ಮದುವೆ ಮುಗಿಸಿಕೊಂಡು ಹೋದ ನಂತರ ಆಕೆಯ ಅಂತ್ಯಸಂಸ್ಕಾರ ಮಾಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Viral Video : ಅಳುತ್ತಲೇ ವರದಿ ಮಾಡಿದ ಪತ್ರಕರ್ತೆ; ಕ್ಷಮಿಸಿ ಬಿಡಿ ಎಂದು ಕೇಳಿಕೊಂಡ ವಿಡಿಯೊ ವೈರಲ್
ಈ ಅಪರೂಪದ ಘಟನೆ ಬಗ್ಗೆ ಮಾತನಾಡಿರುವ ಭಾವನಗರದ ಕಾರ್ಪೊರೇಟರ್ ಮತ್ತು ಮಾಲ್ಧಾರಿ ಸಮಾಜದ ಮುಖಂಡ ಲಕ್ಷ್ಮಣಭಾಯ್ ರಾಥೋಡ್, ಇದನ್ನು ಅತ್ಯಂತ ದುಃಖಕರ ಎಂದು ಹೇಳಿದ್ದಾರೆ. “ಮಗಳ ಸಾವಿನಿಂದ ಕುಟುಂಬವು ಆಘಾತಕ್ಕೊಳಗಾಗಿದ್ದರೂ, ಅವರು ವರ ಮತ್ತು ಅವರ ಕುಟುಂಬವನ್ನು ಬರಿಗೈಯಲ್ಲಿ ಕಳುಹಿಸದೆ ಮಾದರಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ.

Exit mobile version