Site icon Vistara News

Viral News: ವಾಷಿಂಗ್ ಮೆಷಿನ್‌ನಿಂದ ಬಟ್ಟೆ ಎಂದು ಎಳೆದಾಗ ಬಂದಿದ್ದು ನಾಗರ ಹಾವು!

Viral News

ಕಣ್ಣೂರು: ವಾಷಿಂಗ್ ಮೆಷಿನ್ (cobra in washing machine) ಒಳಗೆ ಬಟ್ಟೆ ತುಂಡು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿ ಅದನ್ನು ತೆಗೆಯಲು ಹೋದವನಿಗೆ ಅದರಲ್ಲಿ ಇರುವುದು ಬಟ್ಟೆ ತುಂಡಲ್ಲ ನಾಗರ ಹಾವಿನ ಮರಿ (baby cobra) ಎಂದು ತಿಳಿದು ಶಾಕ್ ಆಗಿದೆ. ಕೂಡಲೇ ವಾಷಿಂಗ್ ಮೆಷಿನ್ ಒಳಗೆ ಹಾಕಿದ್ದ ತನ್ನ ಕೈ ಹಿಂದಕ್ಕೆ ತೆಗೆದು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

ಹಾವುಗಳು ಎಲ್ಲಿ ಅವಿತಿರುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಮನೆಯೊಳಗೆ ಬಂದು ಮನೆ ಮಂದಿಯೆಲ್ಲ ಆತಂಕಗೊಳ್ಳುವಂತೆ ಮಾಡುತ್ತವೆ. ಹಾವುಗಳ ಕಡಿತ ಅಪಾಯಕಾರಿ ಆಗಿರುವುದರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುವುದು ಉತ್ತಮ. ನಮಗೆ ತಿಳಿಯದಂತೆ ಮನೆಯೊಳಗೆ ಬರುವ ಹಾವುಗಳು ತಮಗೆ ಸುರಕ್ಷಿತವೆನಿಸುವ ಜಾಗದಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇವು ಕೆಲವೊಮ್ಮೆ ಅಪಾಯ ತಂದೊಡ್ಡಬಹುದು.

ಕೇರಳದ ಕಣ್ಣೂರಿನಲ್ಲಿ (kerala kannur) ಈಗ ಇಂತಹ ಒಂದು ಘಟನೆ ನಡೆದಿದೆ. ವಾಷಿಂಗ್ ಮೆಷಿನ್ ನೊಳಗೆ ಅವಿತಿದ್ದ ನಾಗರಹಾವೊಂದು ಮನೆ ಮಂದಿಯೆಲ್ಲ ಬೆಚ್ಚಿ ಬೀಳುವಂತೆ ಮಾಡಿದೆ.


ಕೇರಳದ ಕಣ್ಣೂರಿನಲ್ಲಿ ವಾಷಿಂಗ್ ಮೆಷಿನ್ ರಿಪೇರಿ ಮಾಡುತ್ತಿದ್ದ ತಂತ್ರಜ್ಞ ಜನಾರ್ದನನ್ ಕಡಂಬೇರಿ ಅವರು ಬಹುತೇಕ ದುರಸ್ತಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ರಿಪೇರಿ ಬಳಿಕ ವಾಷಿಂಗ್ ಮೆಷಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೋ ಎಂದು ನೋಡಲು ವಾಷಿಂಗ್ ಮೆಷಿನ್ ಒಳಗೆ ಇಣುಕಿ ನೋಡಿದ್ದಾರೆ. ಅದರೊಳಗೆ ಬಟ್ಟೆಯ ತುಂಡಿನಂತೆ ಇರುವುದನ್ನು ಗಮನಿಸಿ ಅದನ್ನು ಹೊರತೆಗೆಯಲು ಯಂತ್ರದೊಳಗೆ ಕೈ ಹಾಕಿದರು. ಆದರೆ ಅದು ಬಟ್ಟೆಯ ತುಂಡಲ್ಲ ನಾಗರ ಹಾವಿನ ಮರಿ ಎಂದು ತಿಳಿದು ಕಡಂಬೇರಿಯವರು ಯಂತ್ರದಿಂದ ತನ್ನ ಕೈಯನ್ನು ಬೇಗನೆ ಹೊರತೆಗೆದರು. ಇದರಿಂದಾಗಿ ಹಾವು ಕಡಿತದಿಂದ ಸ್ವಲ್ಪದರಲ್ಲೇ ಪಾರಾದರು. ಅನಂತರ ಅವರು ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Viral Video: ಅತೀ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ; ಮೇಲೆ ಹಾರಿ ನೆಲಕ್ಕೆ ಅಪ್ಪಳಿಸಿದ ದಂಪತಿ

ಕೆಲವು ದಿನಗಳಿಂದ ಮಷಿನ್ ಕೆಲಸ ಮಾಡುತ್ತಿಲ್ಲ, ಮುಚ್ಚಳವನ್ನು ಮುಚ್ಚಿ ದಿನಗಟ್ಟಲೆ ಇಡಲಾಗಿದೆ. ಹಾವು ಯಂತ್ರದೊಳಗೆ ಹೇಗೆ ಪ್ರವೇಶಿಸಿತು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

Exit mobile version