Site icon Vistara News

Viral News : ಏರ್‌ ಇಂಡಿಯಾ ವಿಮಾನದಲ್ಲಿ ತೆಂಗಿನ ಕಾಯಿ ಬ್ಯಾನ್‌! ವೈರಲ್‌ ಆಯ್ತು ಸುದ್ದಿ

#image_title

ಬೆಂಗಳೂರು: ವಿಮಾನದಲ್ಲಿ ಪ್ರಯಾಣ ಮಾಡಿ ಅಭ್ಯಾಸವಿರುವವರಿಗೆ ಅದರ ಬಗ್ಗೆ ಹಲವು ವಿಚಾರಗಳು ಗೊತ್ತಿರುತ್ತವೆ. ಇ-ಸಿಗರೇಟ್‌, ಲೈಟರ್‌, ಚಿನ್ನ, ಹೆಚ್ಚಿನ ಪ್ರಮಾಣದ ನಗದು ಹಣ ಸೇರಿ ಅನೇಕ ಸಾಮಗ್ರಿಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗುವುದಕ್ಕೆ ನಿಷೇಧವಿದೆ. ಆದರೆ ಇದೀಗ ಏರ್‌ ಇಂಡಿಯಾದ್ದು ಎನ್ನಲಾದ ಮತ್ತೊಂದು ನಿಷೇಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ವೈರಲ್‌ (Viral News) ಆಗಿದೆ.

ವಿಮಾನ ಪ್ರಯಾಣದ ವೇಳೆ ಕೊಂಡೊಯ್ಯಲು ನಿಷೇಧಿಸಲಾಗಿರುವ ಸಾಮಗ್ರಿಗಳ ಪಟ್ಟಿ ತೆಂಗಿನ ಕಾಯಿ ಮತ್ತು ಎರಡು ಚಕ್ರಗಳ ಸೆಗ್ವೇ ಅನ್ನೂ ನಿಷೇಧಿಸಿರುವ ಆದೇಶವಿರುವ ದಾಖಲೆ ಪತ್ರ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆದೇಶ ಏರ್‌ ಇಂಡಿಯಾ ಸಂಸ್ಥೆ ಮಾಡಿರುವುದು ಎನ್ನಲಾಗಿದೆ.

ಇದನ್ನೂ ಓದಿ: Droupadi Murmu: ಅಸ್ಸಾಂನಲ್ಲಿ ಸುಖೋಯ್​ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆಯೇ ಜನರು ಇದರ ಬಗ್ಗೆ ಚರ್ಚೆ ನಡೆಸಲಾರಂಭಿಸಿದ್ದಾರೆ. “ಭಯೋತ್ಪಾದಕರು ತೆಂಗಿನ ಕಾಯಿಯಲ್ಲಿ ಬಾಂಬ್‌ ಇಟ್ಟು ಎಸೆಯುತ್ತಾರೆಯೇ?” ಎನ್ನುವಂತಹ ಕಾಮೆಂಟ್‌ಗಳು ಬರಲಾರಂಭಿಸಿವೆ. ಹಾಗೆಯೇ ಎರಡು ಚಕ್ರದ ಸೆಗ್ವೇ ಅನ್ನು ಯಾರು ವಿಮಾನದಲ್ಲಿ ತೆಗೆದುಕೊಂಡು ಹೋಗುತ್ತಾರೆ ಎನ್ನುವ ವಿಚಾರದಲ್ಲಿಯೂ ಭಾರಿ ಚರ್ಚೆ ಆಗುತ್ತಿದೆ.

Exit mobile version