Site icon Vistara News

Viral News : ನೃತ್ಯ ಮಾಡಿದ್ದಕ್ಕೇ 10 ವರ್ಷ ಜೈಲು ಶಿಕ್ಷೆ! ಇರಾನ್‌ನ ಜೋಡಿಗೆ ಬಂತು ಸಂಕಷ್ಟ

#image_title

ಬೆಂಗಳೂರು: ಅವರಿಬ್ಬರು ಪ್ರೇಮಿಗಳು. ಮದುವೆಯಾಗೇಕೆಂದುಕೊಂಡಿದ್ದ ಆ ಜೋಡಿ ಇತ್ತೀಚೆಗೆ ಇರಾನ್‌ನ ಟೆಹ್ರಾನ್‌ನಲ್ಲಿರುವ ಆಜಾದಿ ಟವರ್‌ ಎದುರು ನೃತ್ಯ ಮಾಡಿದ್ದಾರೆ. ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ಆ ವಿಡಿಯೊವನ್ನು ಮೆಚ್ಚಿಕೊಂಡಿದ್ದಾರೆ ಕೂಡ. ಆದರೆ ಇದೀಗ ಅದೇ ವಿಡಿಯೋ ಜೋಡಿಯು ಜೈಲು ಶಿಕ್ಷೆ ವಿಧಿಸುವಂತೆ (Viral News) ಮಾಡಿದೆ.

ಇದನ್ನೂ ಓದಿ: Viral Video : ವೈರಲ್‌ ಆಗ್ತಿದೆ ಐಸ್‌ಕ್ರೀಂ ದೋಸೆ ವಿಡಿಯೊ, ರುಚಿ ಹೇಗಿರಬಹುದು?

ಇರಾನ್‌ ಭಾರತದಂತಹ ದೇಶವಲ್ಲ. ಅಲ್ಲಿನ ಹೆಣ್ಣು ಮಕ್ಕಳಿಗೆ ಹೆಚ್ಚಿನ ನಿರ್ಬಂಧಗಳಿವೆ. ಹೆಣ್ಣು ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ನೃತ್ಯ ಮಾಡುವಂತಿಲ್ಲ ಎನ್ನುವ ನಿಯಮವಿದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳು ತಲೆಗೆ ಹಿಜಾಬ್‌ ಧರಿಸುವುದು ಕಡ್ಡಾಯ. ಆದರೆ ವೈರಲ್‌ ಆದ ಆ ವಿಡಿಯೊದಲ್ಲಿ ನೃತ್ಯ ಮಾಡಿದ ಒಸ್ಟಿಯಾಜಾ ಹಘಿಘಿ ಹಿಜಾಬ್‌ ಧರಿಸಿರಲಿಲ್ಲ. ಹಾಗೆಯೇ ಸಾರ್ವಜನಿವಾಗಿ ನೃತ್ಯ ಮಾಡಿದ್ದಳು ಕೂಡ.

ಅದೇ ಕಾರಣಕ್ಕೆ ಇರಾನ್‌ ಪೊಲೀಸ್‌ ಇಲಾಖೆ 21 ವರ್ಷದ ಒಸ್ಟಿಯಾಜಾ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಅಮೀರ್ ಮೊಹಮ್ಮದ್ ಅಹ್ಮದಿ(22) ಅನ್ನು ಬಂಧಿಸಿದೆ. ಅಲ್ಲಿನ ನ್ಯಾಯಾಲಯ ಈ ಜೋಡಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಿದೆ.

ಇದನ್ನೂ ಓದಿ: Viral Video: ರೈಲುಗಳಲ್ಲಿ ಬದಲಾದ ಟಾಯ್ಲೆಟ್, ಕೇಂದ್ರ ಸಚಿವರ ಟ್ವೀಟ್ ವೈರಲ್

ಈ ಹಿಂದೆ ಇರಾನ್‌ನಲ್ಲಿ ಹಿಜಾಬ್‌ ಅನ್ನು ಸರಿಯಾಗಿ ಧರಿಸಿಲ್ಲ ಎನ್ನುವ ಕಾರಣಕ್ಕೇ ಯುವತಿಯನ್ನು ಬಂಧಿಸಲಾಗಿತ್ತು. ಆಕೆ ಪೊಲೀಸ್‌ ಠಾಣೆಯಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಳು. ಈ ವಿಚಾರ ರಾಷ್ಟ್ರಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು.

Exit mobile version