Site icon Vistara News

Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್‌ ದಾಖಲಿಸಿದ ಪುತ್ರಿ!

#image_title

ಬೆಂಗಳೂರು: ಆಸ್ತಿ ವಿಚಾರದಲ್ಲಿ ಇಲ್ಲವೇ ಕೌಟುಂಬಿಕ ಜಗಳದ ವಿಚಾರದಲ್ಲಿ ಮಕ್ಕಳು ತಂದೆ-ತಾಯಿ ವಿರುದ್ಧ ಪ್ರಕರಣ ದಾಖಲಿಸುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಲ್ಲೊಬ್ಬ ಹೆಣ್ಣು ಮಗಳು ತನ್ನ ಶಿಕ್ಷಣಕ್ಕೆಂದು ದೊಡ್ಡಮ್ಮ ಕೊಟ್ಟಿದ್ದ ಹಣವನ್ನು ತಂದೆ-ತಾಯಿಯು ತನ್ನ ಅಣ್ಣನ ಮದುವೆಗೆ ಬಳಸಿದರು ಎನ್ನುವ ಕಾರಣಕ್ಕೆ ಪೋಷಕರ ವಿರುದ್ಧವೇ ಪ್ರಕರಣ (Viral News) ದಾಖಲಿಸಿದ್ದಾಳೆ.

ಇದನ್ನೂ ಓದಿ: Viral Video: ನಿಕ್​ ಜೋನಾಸ್​​ರತ್ತ ಬಿಳಿ ಬಣ್ಣದ ಬ್ರಾ ಎಸೆದ ಅಭಿಮಾನಿ; ಪತ್ನಿ ಪ್ರಿಯಾಂಕಾ ಚೋಪ್ರಾ ಮಾಡಿದ್ದೇನು?

ಹೌದು ಈ ಬಗ್ಗೆ ಸ್ವತಃ ಆ ಹೆಣ್ಣು ಮಗಳೇ ಅನುಭವ ಹಂಚಿಕೊಂಡಿದ್ದಾಳೆ. ರೆಡ್ಡಿಟ್‌ ತಾಣದಲ್ಲಿ @Accomplished_Bar5656 ಹೆಸರಿನಲ್ಲಿ ಗುರುತಿಸಿಕೊಂಡಿರುವ ಯುವತಿ ಈ ವಿಚಾರವನ್ನು ಬರೆದುಕೊಂಡಿದ್ದಾಳೆ. ಯುವತಿ ಹೇಳಿರುವ ಪ್ರಕಾರ ಆಕೆಯ ಕುಟುಂಬದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರಲಿಲ್ಲವಂತೆ. ಆದರೆ ಆಕೆಯ ದೊಡ್ಡಮ್ಮ ಲಂಡನ್‌ನಲ್ಲಿ ಶಿಕ್ಷಣ ಪಡೆದು ಅಲ್ಲಿಯೇ ವಾಸವಿದ್ದರಂತೆ. ನಂತರ ಅವರು ಬ್ರಿಟಿಷ್‌ ವ್ಯಕ್ತಿಯೊಬ್ಬರನ್ನು ಮದುವೆಯಾಗಿ ಅಮೆರಿಕಕ್ಕೆ ಶಿಫ್ಟ್‌ ಆದರಂತೆ. ಈ ವೇಳೆ ಶ್ರೀಮಂತರಾಗಿದ್ದ ಅವರು ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣಕ್ಕೆಂದು ಎಲ್ಲ ಹೆಣ್ಣು ಮಕ್ಕಳ ಹೆಸರಿನಲ್ಲಿ ಒಂದಿಷ್ಟು ಹಣ ಕೂಡಿಟ್ಟಿದ್ದರಂತೆ. ಅವರು ತೀರಿಕೊಂಡ ನಂತರ ಆ ಹಣ ಆ ಹೆಣ್ಣು ಮಕ್ಕಳ ಪಾಲಾಗಿತ್ತು.

ಈ ನಡುವೆ ಯುವತಿಯ ಕುಟುಂಬ ಆಕೆಯ ಅಣ್ಣನಿಗೆ ಮದುವೆ ಮಾಡಲು ನಿಶ್ಚಯಿಸಿದ್ದಾರೆ. ಆ ಮದುವೆಗೆಂದು ಯುವತಿಯ ಹೆಸರಿನಲ್ಲಿ ಆಕೆಯ ದೊಡ್ಡಮ್ಮ ಕೂಡಿಟ್ಟಿದ್ದ ಹಣವನ್ನೇ ಬಳಸಿಕೊಂಡಿದ್ದಾರೆ. “ನನ್ನ ಹಣ ಎಲ್ಲಿ ಹೋಯಿತು ಎಂದು ನಾನು ನನ್ನ ಕುಟುಂಬವನ್ನು ಕೇಳಿದೆ. ಆಮೇಲೆ ನನಗೆ ಹಣ ಮದುವೆಗೆ ಖರ್ಚಾದ ವಿಚಾರ ತಿಳಿಯಿತು. ನಾನು ಶೈಕ್ಷಣಿಕ ಸಾಲ ಪಡೆದುಕೊಂಡು ಮನೆಯಿಂದ ಹೊರನಡೆದೆ. ಅದರಿಂದ ಇಡೀ ಕುಟುಂಬಕ್ಕೆ ಅವಮಾನವಾಯಿತು. ಅವರೆಲ್ಲರೂ ನನ್ನ ವಿರುದ್ಧ ತಿರುಗಿಬಿದ್ದರು. ಕುಟುಂಬದ ವಿಚಾರವನ್ನು ಸಾರ್ವಜನಿಕ ಮಾಡಬಾರದು ಎಂದು ಹೇಳಲಾರಂಭಿಸಿದರು. ಆದರೆ ನನಗೆ ನನ್ನ ಹಣ ಬೇಕಿತ್ತು” ಎಂದು ಆಕೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: Viral News : ಸುಳ್ಳು ಅತ್ಯಾಚಾರ ಆರೋಪ ಹೊರಿಸಿ ಹಣ ವಸೂಲಿ ಮಾಡಿದ ಮಹಿಳೆ!

ಮಾತು ಮುಂದುವರಿಸಿರುವ ಯುವತಿ, “ಈ ವಿಚಾರವನ್ನು ಇಲ್ಲಿಯೇ ಮುಗಿಸಿಬಿಡೋಣ ಎಂದು ನನ್ನ ಮನವೊಲಿಸುವುದಕ್ಕೆ ನನ್ನ ಅಣ್ಣನೂ ಮುಂದೆ ಬಂದ. ಖರ್ಚಾದ ಹಣವನ್ನು ವಾಪಸ್ ಕೊಡುತ್ತೇನೆ ಎಂದು ಆತ ಹೇಳಿದ. ಆದರೆ ಅದೇ ವಿಚಾರದಲ್ಲಿ ಕಾನೂನಾತ್ಮಕವಾಗಿ ಒಪ್ಪಂದ ಮಾಡಿಕೊಳ್ಳೋಣ ಎಂದಾಗ ಅವನು ಸಿದ್ಧನಾಗಲಿಲ್ಲ” ಎಂದು ಹೇಳಿದ್ದಾಳೆ. ಯುವತಿಯ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಹಲವಾರು ಮಂದಿ ವಿವಿಧ ರೀತಿಯ ಕಾಮೆಂಟ್‌ ಮಾಡಿದ್ದಾರೆ.

Exit mobile version