Site icon Vistara News

Viral News: ಆಗಸದಲ್ಲೇ ತೆಗೆದುಕೊಂಡಿತು ವಿಮಾನದ ಬಾಗಿಲು! ಭಯಾನಕ ದೃಶ್ಯದ ವಿಡಿಯೊ ಸೆರೆ

#image_title

ದಕ್ಷಿಣ ಕೋರಿಯಾ: ಇತ್ತೀಚೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಡೋರ್‌ ತೆಗೆಯಲು ಪ್ರಯತ್ನಿಸಿದ್ದರು ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಅಂಥದ್ದೇ ಒಂದು ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಶುಕ್ರವಾರ ಏಷಿಯನ್‌ ಏರ್‌ಲೈನ್‌ನ ವಿಮಾನ ಡಯೆಗು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದ್ದಾಗಿ (Viral News) ವರದಿಯಾಗಿದೆ.

ವಿಮಾನದಲ್ಲಿ ಒಟ್ಟು 194 ಮಂದಿ ಪ್ರಯಾಣಿಸುತ್ತಿದ್ದು, ಈ ಘಟನೆಯಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ. ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಗಿದೆ. ಬಾಗಿಲ ಬಳಿ ಕುಳಿತಿದ್ದ ಆರು ಮಂದಿಗೆ ಉಸಿರಾಟ ತೊಂದರೆಯುಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಾಗಿ ಗಾಳಿ ನುಗ್ಗಿದ್ದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Viral News : ಈಗಲೂ ಬಡತನದಲ್ಲೇ ಬೇಯುತ್ತಿದ್ದಾರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದು ಕೊಟ್ಟ ʼಸ್ಮೈಲ್‌ ಪಿಂಕಿʼ
ಬಾಗಿಲ ಬಳಿ ಕುಳಿತಿದ್ದ 30 ವರ್ಷ ಆಸುಪಾಸಿನ ವ್ಯಕ್ತಿಯೊಬ್ಬರು ಬಾಗಿಲನ್ನು ಕಾಲಿನಿಂದ ಒತ್ತಿದ್ದರಿಂದಾಗಿ ಬಾಗಿಲು ತೆರೆದುಕೊಂಡಿದೆ ಎನ್ನಲಾಗಿದೆ. ಈ ಸಂಬಂಧ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆತನ ಈ ನಡವಳಿಕೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.


ವಿಮಾನದ ಬಾಗಿಲು ತೆರೆದಾಗ ಗಾಳಿ ಒಳಗೆ ನುಗ್ಗಿದ್ದನ್ನು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೊ ಮಾಡಿದ್ದಾರೆ. ಅದರಲ್ಲಿ ಗಾಳಿಯ ಎಷ್ಟು ರಭಸದಲ್ಲಿ ನುಗ್ಗಿದೆ ಎನ್ನುವುದನ್ನು ಕಾಣಬಹುದಾಗಿದೆ. ವಿಡಿಯೊದ ಕೊನೆಯಲ್ಲಿ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಎಂದು ತೋರಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ವಿಡಿಯೊವನ್ನು ತೋರಿಸಲಾಗಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿದ್ದು, ವೈರಲ್‌ ಆಗಿದೆ.

Exit mobile version