Site icon Vistara News

Viral News: ಜಗತ್ತಿನ ಅತ್ಯಂತ ಕಡಿಮೆ ಸಮಯದ ವಿಮಾನ ಪ್ರಯಾಣವಿದು; ಇಷ್ಟೇ ಪ್ರಯಾಣಕ್ಕೆ ಅಷ್ಟೊಂದು ಶುಲ್ಕವೇಕೆ?

#image_title

ಬೆಂಗಳೂರು: ವಿಮಾನಗಳು ಬಂದ ನಂತರ ಪ್ರಯಾಣದ ಸಮಯ ಕಡಿಮೆಯಾಗಿದೆ. ದೂರದ ದೇಶಗಳಿಗೂ ಗಂಟೆಗಳಲ್ಲಿ ಹೋಗಿಬಿಡಬಹುದಾಗಿದೆ. ಆದರೂ ಅಮೆರಿಕದಂತಹ ದೂರದ ರಾಷ್ಟ್ರಗಳಿಗೆ ತೆರಳುವುದಕ್ಕೆ ನಮ್ಮ ಭಾರತೀಯರಿಗೆ 20 ಗಂಟೆಗಳಷ್ಟು ಸಮಯ ಬೇಕು. ಹಾಗಾದರೆ ಅತ್ಯಂತ ಕಡಿಮೆ ಸಮಯದ ವಿಮಾನ ಹಾರಾಟ ಯಾವುದು ಎನ್ನುವುದರ ಬಗ್ಗೆ (Viral News) ಎಂದಾದರೂ ಯೋಚಿಸಿದ್ದೀರಾ?

ಇದನ್ನೂ ಓದಿ: Viral Video: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್​ ಪತ್ನಿ
ಜಗತ್ತಿನಲ್ಲಿ ಅತ್ಯಂತ ಕಡಿಮೆ ಸಮಯದ ವಿಮಾನ ಪ್ರಯಾಣ ನಿಮಿಷಗಳಲ್ಲಿ ಇರಬಹುದು ಎಂದು ನೀವು ಅಂದಾಜಿಸಿದ್ದರೆ ಅದು ತಪ್ಪು. ಏಕೆಂದರೆ ದಾಖಲೆ ಬರೆದಿರುವ ಕಡಿಮೆ ಸಮಯದ ವಿಮಾನದ ಪ್ರಯಾಣ ಸೆಕೆಂಡುಗಳಲ್ಲಿದೆ. ಕೇವಲ 53 ಸೆಕೆಂಡುಗಳ ವಿಮಾನ ಪ್ರಯಾಣ ಅದಾಗಿದೆ.

ಉತ್ತರ ಸ್ಕಾಟ್ಲೆಂಡ್‌ನಲ್ಲಿರುವ ವೆಸ್ಟ್ರೇ ಮತ್ತು ಪಾಪಾ ವೆಸ್ಟ್ರೇ ದ್ವೀಪಗಳ ನಡುವಿನ ಹಾರಾಟದ ಅವಧಿ ಕೇವಲ 53 ಸೆಕೆಂಡು. ಈ ಎರಡು ದ್ವೀಪಗಳ ನಡುವೆ 2.7 ಕಿ.ಮೀ. ಅಂತರವಿದೆ. ಇವುಗಳ ನಡುವೆ ಸೇತುವೆಯಿಲ್ಲವಾದ್ದರಿಂದ ಜನರು ದೋಣಿಗಳನ್ನು ಮತ್ತು ವಿಮಾನಗಳನ್ನು ಮಾತ್ರವೇ ಸಂಚಾರಕ್ಕೆ ಬಳಸಬೇಕಾಗಿದೆ. ಇಲ್ಲಿನ ವಿಮಾನ ಸಂಚಾರವನ್ನು ಲೋಗನೈರ್‌ ಏರ್‌ಲೈನ್‌ ಸಂಸ್ಥೆ ನಿರ್ವಹಿಸುತ್ತದೆ. ಇಲ್ಲಿ ಸೆಕೆಂಡುಗಳಲ್ಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾರಬಹುದಾದರೂ ವಿಮಾನ ನಿರ್ವಹಣೆಯ ಅವಶ್ಯಕತೆಯಿಂದಾಗಿ ಪ್ರಯಾಣವನ್ನು ಒಂದೂವರೆ ನಿಮಿಷಕ್ಕೆ ಹೆಚ್ಚಿಸಿಕೊಳ್ಳಲಾಗಿದೆ.

ವೆಸ್ಟ್ರೇ ದ್ವೀಪದಿಂದ ಸ್ಕಾಟ್ಲೆಂಡ್‌ನ ಪ್ರಮುಖ ನಗರವಾದ ಕಿರ್ಕ್‌ವಾಲ್‌ಗೆ ಕನೆಕ್ಟಿಂಗ್‌ ವಿಮಾನ ಇರುವುದರಿಂದಾಗಿ ಈ ಎರಡೂ ದ್ವೀಪಗಳ ನಡುವಿನ ಪ್ರಯಾಣ ಮುಖ್ಯವಾಗಿದೆ. 1967ರಿಂದಲೂ ಲೊಗನೈರ್‌ ಸಂಸ್ಥೆಯು ಇಲ್ಲಿ ವಿಮಾನಗಳ ಹಾರಾಟವನ್ನು ನಡೆಸಿಕೊಂಡು ಬಂದಿದೆ.

ಇದನ್ನೂ ಓದಿ: Viral Video : ಯುವಕರೂ ನಾಚುವಂತೆ ನೀರಿಗೆ ಡೈವ್ ಹೊಡೆದ ಅಜ್ಜಿ; ವೈರಲ್‌ ಆಯ್ತು ವಿಡಿಯೊ
ಇಷ್ಟೊಂದು ಕಡಿಮೆ ಅವಧಿಯ ಪ್ರಯಾಣಕ್ಕೆ ಕಡಿಮೆ ಹಣದ ಟಿಕೆಟ್‌ ಇರುತ್ತದೆ ಎಂದು ಭಾವಿಸಬೇಡಿ. ಇಲ್ಲಿನ ಟಿಕೆಟ್‌ ಮೊತ್ತ ಬರೋಬ್ಬರಿ 1,387.77 ರೂ. ಈ ಎರಡೂ ದ್ವೀಪಗಳ ನಡುವೆ ಇರುವ ಅತ್ಯಂತ ಪ್ರಮುಖ ಸಂಚಾರಿ ವಾಹನ ವಿಮಾನವೇ ಆಗಿರುವುದರಿಂದಾಗಿ ಅದರ ಬೆಲೆಯೂ ಹೆಚ್ಚಿರುವುದಾಗಿ ಹೇಳಲಾಗಿದೆ. ಈ ಎರಡು ದ್ವೀಪಗಳ ಪೈಕಿ ಒಂದರಲ್ಲಿ 600 ಜನರಿದ್ದರೆ, ಇನ್ನೊಂದರಲ್ಲಿ 90 ಜನರಿದ್ದಾರೆ. ಇವುಗಳ ನಡುವೆ ಸೇತುವೆ ನಿರ್ಮಿಸಬೇಕು ಎನ್ನುವ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಇಂದಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

Exit mobile version