Site icon Vistara News

Viral News : ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹುಟ್ಟಿ, ಬೆಳೆದ ಮನೆ ಈಗ ತಮಿಳು ನಟನ ಸ್ವತ್ತು

#image_title

ಚೆನ್ನೈ: ಎಲ್ಲರಿಗೂ ಗೊತ್ತಿರುವ ಹಾಗೆ ಗೂಗಲ್‌ ಸಂಸ್ಥೆಯ ಸಿಇಒ ಆಗಿರುವ ಸುಂದರ್‌ ಪಿಚ್ಚೈ ಅವರು ನಮ್ಮ ಭಾರತದ ತಮಿಳುನಾಡಿನ ಮೂಲದವರು. ಅವರು ಇಲ್ಲಿಯೇ ಹುಟ್ಟಿ, ಬೆಳೆದು, ವ್ಯಾಸಂಗ ಪಡೆದವರು. ಅವರು ಬಾಲ್ಯವನ್ನು ಕಳೆದಿದ್ದ ಮನೆ ಇದೀಗ ತಮಿಳಿನ ನಟರೊಬ್ಬರ (Viral News) ಪಾಲಾಗಿದೆ.

ಹೌದು. ಚೆನ್ನೈನ ಅಶೋಕ ನಗರದಲ್ಲಿರುವ ಸುಂದರ್‌ ಪಿಚ್ಚೈ ಅವರ ತಂದೆಯ ಮನೆಯನ್ನು ತಮಿಳಿನ ನಟ ಹಾಗೂ ಪ್ರಸಿದ್ಧ ರಿಯಲ್‌ ಎಸ್ಟೇಟ್‌ ಉದ್ಯಮಿ ಮಣಿಕಂದನ್‌ ಅವರು ಖರೀದಿಸಿದ್ದಾರೆ. ಈ ಮನೆಯಲ್ಲಿ ಸುಂದರ್‌ ಪಿಚ್ಚೈ ಅವರು 20 ವರ್ಷ ವಾಸವಿದ್ದರು ಎನ್ನಲಾಗಿದೆ. ಈ ಮನೆಯ ಜಾಗದಲ್ಲಿ ವಿಲ್ಲಾ ಒಂದನ್ನು ನಿರ್ಮಿಸುವುದಕ್ಕೆ ಮಣಿಕಂದನ್‌ ಅವರು ನಿರ್ಧರಿಸಿದ್ದಾರೆ. ಇನ್ನು 18 ತಿಂಗಳುಗಳಲ್ಲಿ ವಿಲ್ಲಾ ಸಿದ್ಧವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Viral Video: ಹಾರುವ ಸೋಫಾದ ವಿಡಿಯೊ ನೋಡಿ ಅಲ್ಲಾವುದ್ದೀನ್​ ಮ್ಯಾಜಿಕ್ ಕಾರ್ಪೆಟ್​ ನೆನಪಿಸಿಕೊಂಡ ಜನರು

ಈ ಮನೆಯನ್ನು ಖರೀದಿಸಲು ಸುಂದರ್‌ ಪಿಚ್ಚೈ ಅವರನ್ನು ಭೇಟಿಯಾದ ಅನುಭವವನ್ನು ಮಣಿಕಂದನ್‌ ಹಾಗೂ ನಟ ಹಂಚಿಕೊಂಡಿದ್ದಾರೆ. “ಸುಂದರ್‌ ಪಿಚ್ಚೈ ಅವರ ತಾಯಿ ಸ್ವತಃ ತಾವಾಗಿಯೇ ಫಿಲ್ಟರ್‌ ಕಾಫಿ ಮಾಡಿಕೊಟ್ಟರು. ತಂದೆ ಮೊದಲನೇ ಮೀಟಿಂಗ್‌ನಲ್ಲಿಯೇ ಎಲ್ಲ ದಾಖಲೆಗಳನ್ನು ಹೊತ್ತು ತಂದಿದ್ದರು. ಆಸ್ತಿ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಸುಂದರ್‌ ಅವರ ಹೆಸರು ಬಳಸಬಾರದು ಎಂದು ಹೇಳಿದ್ದರು. ವರ್ಗಾವಣೆ ಮಾಡಿಕೊಳ್ಳಲು ಕಚೇರಿಗೆ ಹೋದಾಗಲೂ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಎಲ್ಲ ರೀತಿಯ ಶುಲ್ಕ ಪಾವತಿಸಿದರು. ಅವರ ಸರಳತೆ ನೋಡಿ ಮನಸ್ಸಿಗೆ ಖುಷಿಯಾಯಿತು” ಎಂದು ಮಣಿಕಂದನ್‌ ಅವರು ಹೇಳಿದ್ದಾರೆ.

ಹಾಗೆಯೇ ಸುಂದರ್‌ ಅವರ ತಂದೆ ಮನೆಯ ದಾಖಲೆ ಪತ್ರಗಳನ್ನು ಹಸ್ತಾಂತರ ಮಾಡುವಾಗ ಕೆಲ ಕಾಲ ಭಾವುಕರಾದರು. ಇದು ಅವರು ಕೊಂಡ ಮೊದಲನೇ ಆಸ್ತಿಯಾಗಿತ್ತು ಎಂದು ಅನುಭವ ಹಂಚಿಕೊಂಡರು ಎಂದು ಆಸ್ತಿ ಖರೀದಿಸಿರುವ ನಟ ಹೇಳಿದ್ದಾರೆ.

Exit mobile version