Site icon Vistara News

Viral news | ಈಕೆಗೆ ಅತ್ಯಂತ ನೆಮ್ಮದಿ ಕೊಡುವ ಆಫೀಸು ಸ್ಮಶಾನವಂತೆ!

cemetary job

ಸ್ಮಶಾನದಲ್ಲಿ ಕೆಲಸ ಮಾಡುವುದನ್ನು ಯಾರೂ ಬಯಸುವುದಿಲ್ಲ. ದಿನನಿತ್ಯ ರೋದನೆಯನ್ನು ನೋಡುತ್ತಾ, ಖುಷಿಯಾಗಿರುವುದು ಹೇಗೆಂದು ಕೆಲವರಿಗೆ ಅನಿಸಿದರೆ, ಇನ್ನೂ ಕೆಲವರಿಗೆ ಅದೇ ಯಾಂತ್ರಿಕವಾಗಿ ಸಾವಿನ ಬಗೆಗೆ ಯಾವ ಭಾವನೆಯೂ ಇರುವುದಿಲ್ಲ. ಆದರೂ ಬಯಸಿ ಬಯಸಿ ಯಾರೂ ಸ್ಮಶಾನದಲ್ಲಿ ಕೆಲಸ ಸಿಗಬೇಕೆಂದು ಕನಸು ಕಾಣುವುದಿಲ್ಲ. ತಮ್ಮ ಕುಲಕಸುಬಾಗಿ ಕೆಲಸ ಮಾಡುವ ಮಂದಿಯೂ ನಮ್ಮ ಮಕ್ಕಳು ಇಲ್ಲಿ ಕೆಲಸ ಮಾಡದೆ, ಓದಿ ವಿದ್ಯಾವಂತರಾಗಿ ಎಲ್ಲರಂತೆ ಉತ್ತಮ ಜೀವನ ನಡೆಸುವಂತಾಗಲಿ ಎಂದು ಬಯಸುತ್ತಾರೆ. ಆದರೆ, ಇಲ್ಲೊಬ್ಬಾಕೆ ಇದಕ್ಕೆಲ್ಲ ವೈರುಧ್ಯವಾಗಿದ್ದಾಳೆ. ಈಕೆಗೆ ಸ್ಮಶಾನದ ಕೆಲಸ ಅತ್ಯಂತ ಪ್ರಿಯವಾದ ಕೆಲಸವಂತೆ!

ಚೀನಾದ ಟಾನ್‌ ಎಂಬ ೨೨ ವಯಸ್ಸಿನ ಯುವತಿಗೆ ಇತ್ತೀಚೆಗೆ ಒಂದು ಉದ್ಯೋಗ ಸಿಕ್ಕಿದೆ. ಅದು ಸ್ಮಶಾನದಲ್ಲಿ. ಇಲ್ಲಿ ಯಾವ ರಾಜಕೀಯವೂ ಇಲ್ಲ. ಕೆಲಸದಲ್ಲಿ ನೆಮ್ಮದಿಯಿಂದೆ. ಶಾಂತವಾಗಿ, ಯಾವ ವೃತ್ತಿ ರಾಜಕೀಯಗಳಿಗೂ ಬಲಿಯಾಗದೆ ಕೆಲಸ ಮಾಡಬಹುದು ಎಂದಾಕೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ.

ಹೀಗೆ ಹೇಳಿಕೊಳ್ಳುವ ಮೂಲಕ ತನ್ನ ಕೆಲಸದ ಜಾಗದ ಫೋಟೋ ಹಾಗೂ ವಿಡಿಯೋಗಳನ್ನೂ ಪೋಸ್ಟ್‌ ಮಾಡಿದ್ದು ಇದು ಜಾಲತಾಣದ ಮಂದಿಯನ್ನು ನಿಬ್ಬೆರಗಾಗಿಸಿದೆ. ಎಲ್ಲರೂ ಬೇಡವೆಂದುಕೊಳ್ಳುವ ಕೆಲಸವೇ ಆಕೆಗೆ ನೆಮ್ಮದಿ ನೀಡಿದ್ದರ ಜನರಿಗೆ ಸಹಜವಾಗಿಯೇ ಆಶ್ಚರ್ಯ ತಂದಿದೆ.

ಈಕೆ ಕೆಲಸ ಮಾಡುವ ಸ್ಮಶಾನದ ಮಕ್ಕದಲ್ಲೇ ಅತ್ಯಂತ ಸುಂದರವಾದ ಬೆಟ್ಟವಿದ್ದು, ಅದರ ತಪ್ಪಲಲ್ಲೇ ಈ ಸ್ಮಶಾನವಿದೆ. ಸ್ಮಶಾನವು ಹಸಿರಿನಿಂದ ಕಂಗೊಳಿಸುತ್ತಿದ್ದು, ಅದರ ತುಂಬ ಮರಳ ಹೊಂದಿದವರನ್ನು ಹೂಳಿದ ಮೇಲೆ ಆ ಜಾಗದಲ್ಲಿ ಕಟ್ಟಲಾದ ಜನನ ಮರಣಗಳ ವಿವರಗಳಿರುವ ಗೋರಿ ಇದೆ. ಆದರೆ ಇದು ಸುಂದರ ಪರಿಸರದಲ್ಲಿದ್ದು, ಆಕೆ ತನ್ನ ಜಾಲತಾಣದಲ್ಲಿ ʻಇದು ಜೆನ್‌ ಝಡ್‌ ಗ್ರೇವ್‌ ಕೀಪರ್‌ನ ಕೆಲಸದ ವಾತಾವರಣ ನೋಡಿ. ಇಲ್ಲಿ ನಾಯಿಗಳೂ, ಬೆಕ್ಕೂಗಳೂ ಇಂಟರ್ನೆಟ್‌ ಕೂಡಾ ಇವೆʼ ಎಂದಾಕೆ ತಮಾಷೆಯಾಗಿ ಬರೆದುಕೊಂಡಿದ್ದಾಳೆ.

ತನ್ನ ಈ ಕೆಲಸ ಮುಂಚಿತವಾಗಿಯೇ ತೆಗೆದುಕೊಂಡ ನಿವೃತ್ತಿಯಂತಿದೆ ಎಂದು ಬಣ್ಣಿಸಿರುವ ಆಕೆ, ಇಲ್ಲಿ ಎಲ್ಲವೂ ಇವೆ. ಚಂದದ ವಾತಾವರಣ, ಕಣ್ಣಿಗ ಸದಾ ಹಬ್ಬ ನೀಡುವ ಚಂದದ ದೃಶ್ಯ, ರಾಜಕಾರಣವಿಲ್ಲದ ಆಫೀಸು, ಹೀಗೆ ಎಲ್ಲ ಇವೆ. ಕೆಲಸದಲ್ಲಿ ಇದಕ್ಕಿಂತ ಇನ್ನೇನು ಬೇಕಿದೆ ಹೇಳಿ ಎಂದಾಕೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ | Viral News | ವಧುವಿಗೆ ಕಿಸ್‌ ಮಾಡಿ ಕೇಸಿನಲ್ಲಿ ತಗ್ಲಾಕೊಂಡ ವರ, ಮದುವೆಯೇ ರದ್ದು!

ಅಂದಹಾಗೆ ಇಲ್ಲಿ ಆಕೆಗೇನು ಕೆಲಸ ಅಂತೀರಾ? ಈ ಸ್ಮಶಾನವನ್ನು ನೋಡಿಕೊಳ್ಳುವಾತನ ಕೆಲಸ ಈಕೆಗೆ ದಕ್ಕಿದ್ದು ಈ ಕೆಲಸದ ಪ್ರಕಾರ ಆಕೆ, ಇಡೀ ಸ್ಮಶಾನವನ್ನು ಗುಡಿಸಿ ಒಪ್ಪ ಮಾಡಿ, ಇಲ್ಲಿಗೆ ಬರುವ ಹೋಗುವ ಮಂದಿಗೆ ಬೇಕಾದ್ದನ್ನು ಒದಗಿಸಿ, ಚಂದಕ್ಕೆ ನೋಡಿಕೊಂಡರೆ ಮುಗಿಯಿತು. ಈಕೆ ಇಲ್ಲಿ ವಾರದಲ್ಲಿ ಆರು ದಿನ ಕೆಲಸ ಮಾಡಬೇಕಿದ್ದು ಬೆಳಗ್ಗೆ ೮.೩೦ರಿಂದ ಸಂಜೆ ಐದರವರೆಗೆ ಕೆಲಸ ಮಾಡಬೇಕಿದೆ. ಇದಕ್ಕೆ ಆಕೆ ಪಡೆಯುವ ಸಂಬಳ ಭಾರತೀಯ ರುಪಾಯಿಗಳ ಪ್ರಕಾರ ೪೫,೭೬೬ ರೂಪಾಯಿಗಳು.

ಈಕೆ ಮಾಡಿದ ವಿಡಿಯೋ ಹಾಗೂ ಬರೆದುಕೊಂಡ ವಿವರಳನ್ನು ನೋಡಿದಾತ ಆಕೆಯ ಕೆಲಸದ ಬಗೆಗೆ ಮಾರುಹೋಗಿದ್ದಾನೆ. ಇದೊಂದು ಒಳ್ಳೆಯ ಕೆಲಸ. ಹಿಂದಿನ ಕಾಲದಲ್ಲಿ ಇಂತಹ ಕೆಲಸವಿದ್ದರೆ ಅದೃಷ್ಟಹೀನರೆಂದು ಪರಿಗಣಿಸಲಾಗುತ್ತಿತ್ತು. ನೀವು ಹೀಗೆ ಹೇಳುವ ಮೂಲಕ ಅಭಿಪ್ರಾಯವನ್ನೇ ಬದಲಾಯಿಸಿದ್ದೀರಿ. ಕೆಲಸದಲ್ಲಿ ಶಾಂತಿ ನೆಮ್ಮದಿ ಬಹಳ ಮುಖ್ಯ ಎಂದಿದ್ದಾರೆ.

ಈ ಪ್ರತಿಕ್ರಿಯೆಗಳಿಗೆ ಉತ್ತರಿಸಿರುವ ಆಕೆ, ನನ್ನದು ಒಂದು ಸಾಮಾನ್ಯ ಕೆಲಸ. ಆದರೆ ನಾನು ನನ್ನ ಜೀವನದ ಬಗ್ಗೆ ಸಂತುಷ್ಟಳಾಗಿದ್ದೇನೆ. ಹಾಗೂ ಇದೇ ಕೆಲಸಕ್ಕೆ ನಿಷ್ಠಳಾಗಿಯೇ ಉಳಿಯಲಿದ್ದೇನೆ ಎಂದಾಕೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Viral news | 1300 ವರ್ಷಗಳ ಹಿಂದಿನ ಚಿನ್ನದ ನೆಕ್ಲೆಸ್‌ ಇಂಗ್ಲೆಂಡಿನಲ್ಲಿ ಪತ್ತೆ!

Exit mobile version