Site icon Vistara News

Viral News : ಕಾರ್ಟೂನ್‌ನಂತೆ ಊದಿಕೊಂಡ ತುಟಿ; ಕಣ್ಣೀರಿಡುತ್ತ ಆಸ್ಪತ್ರೆಗೆ ತೆರಳಿದ ಯುವತಿ; ಕಾರಣವೇನು?

#image_title

ಬೆಂಗಳೂರು: ಮಾನವನ ದೇಹಕ್ಕೆ ಕೆಲವೊಮ್ಮೆ ಕೆಲವು ಔಷಧಗಳು ಕೂಡ ಒಗ್ಗಿಕೊಳ್ಳುವುದಿಲ್ಲ. ಎಷ್ಟೋ ಬಾರಿ ಚುಚ್ಚುಮದ್ದು ಪಡೆದುಕೊಂಡರೂ ಅಲರ್ಜಿ ಉಂಟಾಗಿ, ಒದ್ದಾಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಯುವತಿ ತನ್ನ ತುಟಿಯನ್ನು ಸುಂದರಗಾಣಿಸಿಕೊಳ್ಳಲು ಹೋಗಿ ಕೊನೆಗೆ ಪೇಚಾಡಿರುವ ಘಟನೆ ನಡೆದಿದೆ. ಈ ಯುವತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral News) ಆಗಿದೆ.

ಹೌದು. ಇತ್ತೀಚಿನ ದಿನಗಳಲ್ಲಿ ತುಟಿ ಚಂದಗಾಣಿಸಿಕೊಳ್ಳುವುದಕ್ಕೆಂದೇ ಅನೇಕ ಯುವತಿಯರು ವೈದ್ಯರ ಮೊರೆ ಹೋಗುತ್ತಿದ್ದಾರೆ. ಲಿಪ್‌ ಫಿಲ್ಲರ್‌ ಚಿಕಿತ್ಸೆ ಮೂಲಕ ತುಟಿಯನ್ನು ದಪ್ಪವಾಗಿಸಿ, ಸೌಂದರ್ಯವನ್ನು ಹೆಚ್ಚಿಸುವ ಪ್ರಯತ್ನವೂ ಎಲ್ಲೆಡೆ ನಡೆಯುತ್ತಿದೆ. ಅದೇ ರೀತಿ ಲಾಸ್‌ ಏಂಜಲೀಸ್‌ನ ಸೋಶಿಯಲ್‌ ಮೀಡಿಯಾ ಸ್ಟಾರ್‌ ಆದ 27 ವರ್ಷದ ಯುವತಿಯೊಬ್ಬಳು ಇತ್ತೀಚೆಗೆ ಲಿಪ್‌ ಫಿಲ್ಲಿಂಗ್‌ ಮಾಡಿಸಿಕೊಂಡಿದ್ದಾಳೆ. ಆದರೆ ಇದರಿಂದಾಗಿ ಆಕೆಯ ತುಟಿ ಅಳತೆಗೂ ಮೀರಿ ಊದಿಕೊಂಡಿದ್ದು, ಕೊನೆಗೆ ಆಕೆ ಮತ್ತೊಮ್ಮೆ ವೈದ್ಯರ ಬಳಿ ತೆರಳಿ ತುಟಿಯನ್ನು ಸರಿ ಮಾಡಿಸಿಕೊಂಡಿದ್ದಾಳೆ.

ಇದನ್ನೂ ಓದಿ: Viral News : ಮನೆಯವರ ಬ್ಯಾಂಕ್‌ ಖಾತೆಯನ್ನೆಲ್ಲ ಬರಿದು ಮಾಡಿ, ರಸ್ತೆ ಮೇಲೆ 1.6 ಕೋಟಿ ರೂ. ಚೆಲ್ಲಿದ!
ಅಂದ ಹಾಗೆ ಈ ಯುವತಿ ಈ ಹಿಂದೆಯೂ ಅನೇಕ ಬಾರಿ ಲಿಪ್‌ ಫಿಲ್ಲಿಂಗ್‌ ಮಾಡಿಸಿಕೊಂಡಿದ್ದಳಂತೆ. ಆದರೆ ಹ್ಯಾಲೋವೆನ್‌ ಪಾರ್ಟಿಯನ್ನು ಈಕೆಗೆ ಒಂದು ಲಿಪ್‌ ಫಿಲ್ಲಿಂಗ್‌ ಚಿಕಿತ್ಸೆಯ ಉಚಿತ ಕೂಪನ್‌ ಸಿಕ್ಕಿದೆ. ಅದೇ ಹಿನ್ನೆಲೆ ಆಕೆ ತನ್ನ ಮಾಮೂಲಿ ವೈದ್ಯರನ್ನು ಬಿಟ್ಟು ಬೇರೆಯ ವೈದ್ಯರ ಬಳಿ ಚಿಕಿತ್ಸೆ ಮಾಡಿಸಿಕೊಳ್ಳಲು ತೆರಳಿದ್ದಾಳೆ. ಆ ವೈದ್ಯರು ಕೂಡ ಎಲ್ಲ ವೈದ್ಯರಂತೆ ವಿಧಾನಗಳನ್ನು ಪಾಲಿಸಿದ್ದು, ತುಟಿಗೆ ಇಂಜೆಕ್ಷನ್‌ ಕೊಟ್ಟಿದ್ದಾರೆ. ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ಯುವತಿಯ ತುಟಿ ಊದಿಕೊಳ್ಳಲಾರಂಭಿಸಿದೆ.

ಊದಿಕೊಂಡಿರುವ ತುಟಿಯೊಂದಿಗೆ ಯುವತಿ ಟಿಕ್‌ಟಾಕ್‌ನಲ್ಲಿ ವಿಡಿಯೊವನ್ನೂ ಮಾಡಿದ್ದಾಳೆ. “ಮನೆಗೆ ಬಂದು ನೋಡುವಷ್ಟರಲ್ಲಿ ನನ್ನ ತುಟಿ ಅಸಹ್ಯವೆನಿಸುವಷ್ಟು ಊದಿಕೊಂಡಿತ್ತು” ಎಂದು ಆಕೆ ವಿಡಿಯೊದಲ್ಲಿ ತಿಳಿಸಿದ್ದಾಳೆ. ಮಾರನೇ ದಿನ ಮತ್ತೆ ಯುವತಿ ಆಸ್ಪತ್ರೆಗೆ ತೆರಳಿದ್ದು, ಊದಿಕೊಂಡು ಕೆಂಪಾಗಿದ್ದ ತುಟಿಯನ್ನು ಸರಿ ಮಾಡಿಸಿಕೊಂಡು ಬಂದಿದ್ದಾಳೆ. ಫಿಲ್ಲಿಂಗ್‌ಗೆ ಮೊದಲು, ಫಿಲ್ಲಿಂಗ್‌ ಆದಾಗ ಮತ್ತು ಅದನ್ನು ಸರಿ ಮಾಡಿಸಿಕೊಂಡು ಬಂದ ನಂತರ ತುಟಿ ಹೇಗೆ ಕಾಣುತ್ತಿದೆ ಎನ್ನುವುದನ್ನು ಯುವತಿ ವಿಡಿಯೊದಲ್ಲಿ ತೋರಿಸಿದ್ದಾಳೆ.

Exit mobile version