Site icon Vistara News

Viral News : ಪಾಕಿಸ್ತಾನದಲ್ಲಿ ಸಮಾಧಿಗೂ ಲಾಕ್‌? ಇಲ್ಲಿದೆ ನೋಡಿ ವೈರಲ್‌ ಚಿತ್ರದ ಅಸಲಿಯತ್ತು

ಸಮಾಧಿಗೆ ಗೇಟು

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ವಿಚಾರಗಳು ವೈರಲ್‌ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಇತ್ತೀಚೆಗೆ ಪಾಕಿಸ್ತಾನದ್ದು ಎನ್ನಲಾದ ಸಮಾಧಿಯೊಂದರ ಫೋಟೋ ಕೂಡ ವೈರಲ್‌ ಆಗಿತ್ತು. ಅದರಲ್ಲಿ ಸಮಾಧಿಗೆ ಗೇಟನ್ನು ಹಾಕಲಾಗಿದ್ದು, ಪಾಕ್‌ನಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳ ಸಮಾಧಿಯನ್ನು ಕಾಪಾಡಿಕೊಳ್ಳುವುದಕ್ಕೆ ಗೇಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಸಮಾಧಿಯ ಅಸಲಿಯತ್ತು ಇದೀಗ (Viral News) ಹೊರಬಿದ್ದಿದೆ.

ನಿಜವಾಗಿಯೂ ಆ ಸಮಾಧಿ ಪಾಕಿಸ್ತಾನದ್ದು ಅಲ್ಲವೇ ಅಲ್ಲ. ಬದಲಾಗಿ ನಮ್ಮ ಭಾರತದ ತೆಲಂಗಾಣದಲ್ಲಿರುವ ಹೈದರಾಬಾದ್‌ನದ್ದು. ಹೈದರಾಬಾದ್‌ನ ಮದನ್ನಪೇಟೆಯ ದರಾಬ್ ಜಂಗ್ ಕಾಲೋನಿಯಲ್ಲಿರುವ ಇ ಸಲಾರ್ ಮುಲ್ಕ್ ಎಂಬ ಮಸೀದಿಯ ಪಕ್ಕದಲ್ಲಿರುವ ಸ್ಮಶಾನದಲ್ಲಿ ಸಮಾಧಿಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: Karnataka Election: ಬಜರಂಗದಳ ನಿಷೇಧ ಭರವಸೆ; ಒಂಟಿಯಾದ್ರಾ ಡಿಕೆಶಿ? ಉಳಿದ ನಾಯಕರಿಂದೇಕೆ ಸಿಗುತ್ತಿಲ್ಲ ಬೆಂಬಲ?
ಈ ಸಮಾಧಿಯನ್ನು ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಮಹಿಳೆಯೊಬ್ಬಳ ಪುತ್ರ ಆಕೆಗೆಂದು ಈ ಸಮಾಧಿ ನಿರ್ಮಿಸಿದ್ದಾನೆ. ಸ್ಮಶಾನ ಕಾಯುವವರ ಅನುಮತಿ ಇಲ್ಲದೆಯೇ ಈ ಸಮಾಧಿ ನಿರ್ಮಿಸಿ ಹೋಗಲಾಗಿದೆ. ಸಮಾಧಿಯ ಮೇಲೆ ಯಾರೂ ನಡೆದುಕೊಂಡು ಹೋಗಬಾರದು, ಹಾಗೆಯೇ ಅದರ ಮೇಲೆ ಮತ್ತೊಂದು ಶವದ ಸಮಾಧಿ ಮಾಡಬಾರದು ಎನ್ನುವ ಕಾರಣದಿಂದ ಅದರ ಮೇಲೆ ಗೇಟಿನಂತೆ ಗ್ರಿಲ್‌ ಮಾಡಲಾಗಿದೆ. ಈ ಮಾಹಿತಿಯನ್ನು ಮಸೀದಿಯ ಮುವಾಝಿನ್ ಮುಖ್ತಾರ್ ಸಾಹಬ್ ಅವರು ನೀಡಿದ್ದಾರೆ.

ಆಶಿಶ್‌ ಹೆಸರಿನ ಟ್ವಿಟರ್‌ ಬಳಕೆದಾರರು ಈ ಸ್ಮಶಾನಕ್ಕೆ ಭೇಟಿ ಕೊಟ್ಟಾಗ ಅಪರೂಪದ ಸಮಾಧಿ ಕಂಡು ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಅದೇ ಫೋಟೋವನ್ನು ಬೇರೆ ದೇಶದ್ದು ಎಂದು ಹೇಳಿಕೊಂಡು ವೈರಲ್‌ ಮಾಡಲಾಗಿದೆ.

ಇದನ್ನೂ ಓದಿ: Video Viral: ಇದೊಂದು ಮೊಟ್ಟೆಗಳ ಕಥೆ; ಮೊಟ್ಟೆಯಾಸೆಗೆ ಕೋಳಿ ಗೂಡಿಗೆ ನುಗ್ಗಿ ಬಂಧಿಯಾದ ನಾಗರಾಜ!
ಈ ಫೋಟೋ ಎಷ್ಟರ ಮಟ್ಟಿಗೆ ವೈರಲ್‌ ಆಗಿದೆ ಎಂದರೆ ‘ದಿ ಕರ್ಸ್ ಆಫ್ ಗಾಡ್ – ವೈ ಐ ಲೆಫ್ಟ್ ಇಸ್ಲಾಂ’ ಪುಸ್ತಕದ ಲೇಖಕ ಹ್ಯಾರಿಸ್ ಸುಲ್ತಾನ್ ಅವರೂ ಚಿತ್ರದ ಬಗ್ಗೆ ಮಾತನಾಡಿದ್ದರು. “ಪಾಕಿಸ್ತಾನವು ಲೈಂಗಿಕವಾಗಿ ಹತಾಶೆಗೊಂಡ ಸಮಾಜವನ್ನು ಸೃಷ್ಟಿಸಿದೆ. ಜನರು ಈಗ ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಹೆಣ್ಣುಮಕ್ಕಳ ಸಮಾಧಿಗಳ ಮೇಲೆ ಬೀಗಗಳನ್ನು ಹಾಕುತ್ತಿದ್ದಾರೆ. ನೀವು ಬುರ್ಖಾವನ್ನು ಅತ್ಯಾಚಾರದೊಂದಿಗೆ ಜೋಡಿಸಿದಾಗ, ಅದು ನಿಮ್ಮನ್ನು ಸಮಾಧಿಗೆ ಹಿಂಬಾಲಿಸುತ್ತದೆ” ಎಂದು ಹೇಳಿದ್ದರು.

ಹೈದರಾಬಾದ್‌ನಲ್ಲಿ ಸಮಾಧಿ ಮಾಡುವುದಕ್ಕೆ ಜಾಗದ ಕೊರತೆ ಹೆಚ್ಚಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಅಧಿಕಾರಿಗಳು ಕೆಲವು ವರ್ಷಗಳ ಹಿಂದೆ ಅಂದಾಜಿಸಿದ್ದರ ಪ್ರಕಾರ, ಪ್ರಸ್ತುತ ಮತ್ತು ಭವಿಷ್ಯದ ಜನಸಂಖ್ಯೆಯ ಬೆಳವಣಿಗೆಯನ್ನು ಪರಿಗಣಿಸಿದರೆ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 1,000 ಸ್ಮಶಾನಗಳ (ಎಲ್ಲಾ ಧರ್ಮಗಳಿಗೆ) ಅಗತ್ಯವಿದೆ. ಆದರೆ ಇದೀಗ ಕೇವಲ 291 ಸ್ಮಶಾನಗಳಿವೆ.

Exit mobile version