ಬೆಂಗಳೂರು: ‘ಕುಣಿಯಲು ಬಾರದವನಿಗೆ ನೆಲ ಡೊಂಕು’ ಎನ್ನುವ ಗಾದೆ ಮಾತಿದೆ. ತುಸು ಬದಲಾಯಿಸಿ ‘ಕುಣಿಯಲು ಗೊತ್ತಿರುವವನಿಗೆ ವೇದಿಕೆಯೇ ಬೇಕು ಅಂತೇನಿಲ್ಲ’ ಎಂದು ಮಾಡಬಹುದೇನೋ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಇಲ್ಲೊಬ್ಬ ಕುಣಿಯಲು ವೇದಿಕೆಗಾಗಿ ಕಾಯಲಿಲ್ಲ. ಬದಲಾಗಿ ಇ-ರಿಕ್ಷಾ ಟಾಪ್ ಅನ್ನೇ ವೇದಿಕೆಯನ್ನಾಗಿಸಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾನೆ. ಆತ ಜೋಶ್‌ನಿಂದ ಹೆಜ್ಜೆ ಏನೋ ಹಾಕಿದ. ಆದರೆ ಮುಂದೆ ಯಾರೂ ಸ್ವತಃ ಆತನೇ ಊಹಿಸದ ನಡೆಯದ ಘಟನೆಯೊಂದು ನಡದೇ ಹೋಯ್ತು. ಅದನ್ನು ನೋಡಿದರೆ ನಿಮ್ಮ ಮುಖದಲ್ಲಿಯೂ ನಗು ಅರಳುವುದು ಖಚಿತ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral News). ಹಾಗಾದರೆ ವಿಡಿಯೊದಲ್ಲೇನಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಯಾವ ಪರಿ ಅಂಟಿಕೊಂಡಿದೆ ಎಂದರೆ ಯುವ ಜನತೆ ಬಿಡಿ ಮಕ್ಕಳಿಂದ ಹಿಡಿದು ವಯಸ್ಸಾವರೂ ಇದಕ್ಕೆ ಜೋತು ಬೀಳುತ್ತಿದ್ದಾರೆ. ಲೈಕ್ಸ್ ಗಿಟ್ಟಿಸಿಕೊಳ್ಳಲು ಅಪಾಯಕಾರಿ ಸಾಹಸ ಮಾಡುವವರಿಗೂ ಕಡಿಮೆ ಇಲ್ಲ. ಅದರಂತೆ ಇಲ್ಲೊಬ್ಬ ಯುವಕ ಇ-ರಿಕ್ಷಾದ ಟಾಪ್ ಮೇಲೆ ಹತ್ತಿ ತನ್ನ ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದಾನೆ. ಹಿನ್ನೆಲೆಯಲ್ಲಿ ಸಂಗೀತ ಕೇಳಿ ಬರುತ್ತಿದ್ದಂತೆ ಕುಣಿಯಲು ಆರಂಭಿಸಿದ್ದ. ಆದರೆ ಇದರ ಪರಿವೇ ಇಲ್ಲದ ಚಾಲಕ ರಿಕ್ಷಾವನ್ನು ಚಲಾಯಿಸಿದ್ದಾನೆ. ಇದರಿಂದ ಬ್ಯಾಲನ್ಸ್ ತಪ್ಪಿ ಡ್ಯಾನ್ಸ್ ಮಾಡುತ್ತಿದ್ದ ಯುವಕ ಜಾರಿ ಬಿದ್ದಿದ್ದಾನೆ. ಆತನಿಗೆ ಏನಾಯ್ತು ಎನ್ನುವುದು ತಿಳಿದು ಬಂದಿಲ್ಲ. ಅದೇನೇ ಇರಲಿ ಈ ವಿಡಿಯೊ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇವಲ 16 ಸೆಕೆಂಡ್‌ನ ಈ ವಿಡಿಯೊ ಈಗಾಗಲೇ ಲಕ್ಷಾಂತರ ವೀಕ್ಷಣೆ ಕಂಡಿದೆ. ಇನ್‌ಸ್ಟಾಗ್ರಾಮ್‌ನ babusingh7160 ಎನ್ನುವ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ಘಟನೆ ನಡೆದಿರುವುದು ಎಲ್ಲಿ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಮಾರ್ಚ್ 18ರಂದು ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 90 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. 1,80,000 ಲೈಕ್ಸ್ ಲಭಿಸಿದೆ.
ನೆಟ್ಟಿಗರು ಏನಂದ್ರು?
ಅನೇಕರು ಈ ವಿಡಿಯೊವನ್ನು ನೋಡಿ ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ತಮಾಷೆಯ ಕಮೆಂಟ್ ಮಾಡಿದ್ದರೆ ಇನ್ನು ಕೆಲವರು ಟೀಕಿಸಿದ್ದಾರೆ. ಅನೇಕರು ಇಂತಹ ಸ್ಟಂಟ್‌ಗಳನ್ನು ಪ್ರಯತ್ನಿಸದಂತೆ ವೀಕ್ಷಕರಿಗೆ ಸಲಹೆ ನೀಡಿದ್ದಾರೆ. ʼʼಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನರ ಗಮನ ಸೆಳೆಯಲು ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳುವ ಪ್ರವೃತ್ತಿಯನ್ನು ಒತ್ತಿ ಹೇಳುತ್ತದೆʼʼ ಎಂದು ಒಬ್ಬರು ಹೇಳಿದ್ದಾರೆ. ಆತನ ಡ್ಯಾನ್ಸ್‌ಗೆ ಇಷ್ಟು ಲೈಕ್ ಬರುತ್ತಿತ್ತೋ ಗೊತ್ತಿಲ್ಲ. ಆದರೆ ಈ ವಿಡಿಯೊ ಮಾತ್ರ ಹಲವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: Viral Video: ಡ್ಯಾನ್ಸ್ ಗೊತ್ತಿರುವವರಿಗೆ ಆಗಸವೂ ವೇದಿಕೆ; ಅದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ
ಕೆಲವು ದಿನಗಳ ಹಿಂದೆ ಹೋಳಿ ಸಂದರ್ಭದಲ್ಲಿ ಚಲಿಸುತ್ತಿರುವ ಸ್ಕೂಟರ್‌ನಲ್ಲಿ ಯುವತಿಯರಿಬ್ಬರು ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಸ್ಕೂಟರ್‌ಲ್ಲಿ ಮೂವರು ಕುಳಿತಿದ್ದರು. ಅವರಲ್ಲಿ ಇಬ್ಬರು ಹುಡುಗಿಯರು ಹಾಗೂ ಒಬ್ಬ ಹುಡುಗ. ಆ ಇಬ್ಬರು ಹುಡುಗಿಯರು ಚಲಿಸುತ್ತಿರುವ ಸ್ಕೂಟರ್ನಲ್ಲಿಯೇ ಪೋಲಿಯಾಟ ಆಡಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಜತೆಗೆ ಪೊಲೀಸರು ದಂಡ ವಿಧಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ