Site icon Vistara News

Viral News : ಬಿಟ್ಟಿ ಊಟ ಮಾಡಲು ಹೋಗಿ ಸ್ಕೂಟರನ್ನೇ ಕಳೆದುಕೊಂಡ! ಮದುವೆ ಊಟಕ್ಕೆ ನುಗ್ಗುವ ಮುನ್ನ ಈ ಸುದ್ದಿ ಓದಿ

Man who went to eat free food loses scooter

#image_title

ಮುಂಬೈ: ಮದುವೆ ಸೀಸನ್‌ ಈಗಷ್ಟೇ ಮುಗಿದಿದೆ. ಆಮಂತ್ರಣವಿರುವ ಮದುವೆಗಳೆಲ್ಲದಕ್ಕೂ ಹೋಗಲಾದರೆ ಕೆಲವರು ಬೇಜಾರಾಗಿದ್ದರೆ, ಇನ್ನು ಕೆಲವರು ಆಮಂತ್ರಣವಿಲ್ಲದಿದ್ದರೂ ಒಂದೊತ್ತಿನ ಊಟಕ್ಕಾಗಿ ಮದುವೆ ಮನೆಗೆ ಹೋಗಿ ಊಟ ಮಾಡಿ ಬಂದುಬಿಟ್ಟಿರುತ್ತಾರೆ. ಅದೇ ರೀತಿಯಲ್ಲಿ ಆಮಂತ್ರಣವಿಲ್ಲದೆ ಮದುವೆ ಊಟಕ್ಕೆ ಹೋದ ವ್ಯಕ್ತಿಯೊಬ್ಬ ಇದೀಗ ಸ್ಕೂಟರ್‌ ಕಳೆದುಕೊಂಡು ಒದ್ದಾಡುವ ಸ್ಥಿತಿ ಬಂದೊದಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral News) ಆಗುತ್ತಿದೆ.

ಮುಂಬೈನ ಜಾವೇದ್‌ ಕುರೇಶಿ(24) ಹೆಸರಿನ ವ್ಯಕ್ತಿ ಜೂನ್‌ 13ರಂದು ತನ್ನ 17 ವರ್ಷದ ಸಂಬಂಧಿ ಮತ್ತು ಒಂದಿಷ್ಟು ಸ್ನೇಹಿತರೊಂದಿಗೆ ಹೊರಗಡೆ ಸುತ್ತಾಡಲು ಹೋಗಿದ್ದ. ಜೋಗೇಶ್ವರಿ ತಲುಪಿದಾಗ ಅಲ್ಲಿನ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮವೊಂದು ನಡೆಯುತ್ತಿರುವುದು ಈ ಗುಂಪಿಗೆ ತಿಳಿದುಬಂತು. ಸುಮ್ಮನೆ ಹೋಗಿ ಮದುವೆ ಊಟ ಮಾಡಿ ಬರೋಣ ಎಂದು ಎಲ್ಲರೂ ಮಂಟಪದೊಳಗೆ ನುಗ್ಗಿದರು.

ಇದನ್ನೂ ಓದಿ: Viral News: ಸ್ಟೇಡಿಯಂ ಸ್ವಚ್ಚಗೊಳಿಸಿದ ಜಿಂಬಾಬ್ವೆ ಅಭಿಮಾನಿಗಳು; ವಿಡಿಯೊ ವೈರಲ್​
ಈ ವೇಳೆ ವಧು, ವರನ ಕುಟುಂಬದವರು ಈ ಗುಂಪನ್ನು ಮಾತನಾಡಿಸಲು ಬಂದಿದ್ದಾರೆ. ಆಗ ಅವರಿಗೆ ಈ ಗುಂಪು ಆಮಂತ್ರಣವಿಲ್ಲದೆ ಮಂಟಪಕ್ಕೆ ಬಂದಿರುವುದು ತಿಳಿದುಬಂದಿದೆ. ತಕ್ಷಣ ಗುಂಪಿನ ಮತ್ತು ವಧು ವರರ ಕುಟುಂಬದವರ ನಡುವೆ ಜಗಳ ಉಂಟಾಗಿದೆ. ಈ ಘಟನೆ ನಡೆಯುತ್ತಿದ್ದಂತೆಯೇ ಕುರೇಶಿ ಮತ್ತು ಆತನ ಸ್ನೇಹಿತರು ಅವಮಾನದಿಂದ ಮಂಟಪದ ಹೊರಗೆ ಓಡಿದ್ದಾರೆ.

ಜಾವೇದ್‌ ಕುರೇಶಿ ತಾನು ತಂದಿದ್ದ ಸ್ಕೂಟರ್‌ ಅನ್ನು ಕಲ್ಯಾಣ ಮಂಟಪದ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದ. ಅದನ್ನು ವಾಪಸ್‌ ತರಲು ಅಲ್ಲಿಗೆ ಹೋಗಲು ಮನಸ್ಸು ಒಪ್ಪದ ಕಾರಣ, ಅವರ ಜಗಳ ಬಿಡಿಸಲು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಕೈಗೆ ಸ್ಕೂಟರ್‌ನ ಕೀ ಕೊಟ್ಟು ಗಾಡಿಯನ್ನು ತಂದುಕೊಡಿ ಎಂದು ಕೇಳಿಕೊಂಡ. ಸ್ಕೂಟರ್‌ ತಂದುಕೊಡಬೇಕಿದ್ದ ಆ ವ್ಯಕ್ತಿ ಅದೇ ಸ್ಕೂಟರ್‌ನೊಂದಿಗೆ ಪರಾರಿಯಾಗಿದ್ದಾನೆ!

ಇದನ್ನೂ ಓದಿ: Viral News: ಅಯ್ಯೋ ನನ್ಮಗನೇ ಓದೋರಿಗೆ ಕೊಡಲೇ; ಪಿಡಿಒಗಳ ಮುಂದೆ ದುರಹಂಕಾರ ತೋರಿದ ಶಾಸಕ ಗುಬ್ಬಿ ಶ್ರೀನಿವಾಸ್‌
ಈ ಸಂಬಂಧ ಜಾವೇದ್‌ ಕುರೇಶಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ. ಅನಾಮಿಕ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಟ್ಟಿ ಊಟ ಸಿಗುತ್ತದೆಯೆಂದು ಎಲ್ಲೆಂದರಲ್ಲಿ ನುಗ್ಗಿದರೆ ಹೀಗೇ ಆಗುವುದು ಎಂದು ಜನರು ಈ ಸುದ್ದಿಯನ್ನು ಹೆಚ್ಚೆಚ್ಚು ಹಂಚಿಕೊಳ್ಳಲಾರಂಭಿಸಿದ್ದಾರೆ.

Exit mobile version