Site icon Vistara News

Viral news | ಅಪಘಾತದಲ್ಲಿ ಸ್ಮರಣಶಕ್ತಿ ಕಳೆದುಕೊಂಡ ಗಂಡ, ಹೆಂಡತಿಯಲ್ಲಿ ಮದುವೆಯಾಗು ಅಂದನಂತೆ!

viral news

ಸಿನಿಮಾದಲ್ಲೋ, ಸೀರಿಯಲ್ಲಲ್ಲೋ ಆಕ್ಸಿಡೆಂಟ್‌ ಆಗೋದು, ನಾಯಕಿಗೋ ನಾಯಕನಿಗೋ ಜೀವನದ ಎಲ್ಲ ಘಟನೆಗಳೂ ಮರೆತುಹೋಗಿ ಸಿನಿಮಾಕ್ಕೆ ಇದ್ದಕ್ಕಿದ್ದಂತೆ ಟ್ವಿಸ್ಟ್‌ ಕೊಡುವುದು ಸಾಮಾನ್ಯ. ಪ್ರೇಕ್ಷಕರಿಗೂ ಇಂಥ ಟ್ವಿಸ್ಟು ನೋಡಿ ನೋಡಿ ಸಾಮಾನ್ಯವಾಗಿ ಕತೆಯಲ್ಲಿ ಎಲ್ಲಿ ಯಾವಾಗ ಏನಾಗಬಹುದೆಂದು ಊಹಿಸುವುದೂ ಕೂಡಾ ಸಾಧ್ಯವಾಗುತ್ತದೆ. ಆದರೆ, ನಿಜ ಜೀವನದಲ್ಲಿ ಎಲ್ಲಾದರೂ ಹೀಗಾಗೋದನ್ನು ನೋಡಿದ್ದೀರಾ? ಆಕ್ಸಿಡೆಂಟ್‌, ಮರೆವು, ಪ್ರೀತಿ ಇತ್ಯಾದಿ ಇತ್ಯಾದಿ ಕಂಡಿದ್ದೇ ಅಪರೂಪ ಎನ್ನಬಹುದೇನೋ. ಆದರಿಲ್ಲೊಂದು ಆಕ್ಸಿಡೆಂಟ್‌ ಕಥನ ಸಿನಿಮಾದ ಕತೆಯಂತೆಯೇ ಇದೆ!

ಹೌದು. ಬೈಕ್‌ ಅಫಘಾತದಲ್ಲಿ ಅದೃಷ್ಟವಶಾತ್‌ ಬದುಕಿ ಉಳಿದ ಯುಎಸ್‌ನ ೫೮ ವರ್ಷದ ವ್ಯಕ್ತಿಯೊಬ್ಬರು ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದು, ತಾನು ೧೯೯೦ನೇ ಇಸವಿಯಲ್ಲಿದ್ದೇನೆಂದು ತಿಳಿದು ತನ್ನ ಹೆಂಡತಿಯಲ್ಲಿ ಮದುವೆಯಾಗುವಂತೆ ಹೇಳಿದ್ದಾರಂತೆ!

ಕ್ರಿಸ್ಟಿ ಹಾಗೂ ಆಡ್ರ್ಯೂ ಮೆಕೆನ್ಝೀ ಎಂಬ ವರ್ಜೀನಿಯಾ ನಿವಾಸಿಗಳು ಜೂನ್‌ ೨೦೨೧ರಲ್ಲಿ ಬೈಕ್‌ ಅಫಘಾತವೊಂದರಲ್ಲಿ ಸಾಯುವ ಹಂತ ತಲುಪಿದ್ದರು. ಮುಂದಿದ್ದ ಕಾರ್‌ ಚಾಲಕ ಕೆಂಪು ದೀಪವನ್ನು ಲಕ್ಕಿಸದೆ ಚಲಾಯಿಸಿದ್ದರಿಂದ ಅಫಘಾತಕ್ಕೀಡಾಗಿ, ಇವರಿದ್ದ ಬೈಕೂ ಕೂಡಾ ಜೊತೆಗೇ ನಜ್ಜುಗುಜ್ಜಾಗಿತ್ತು. ಈ ಬೈಕ್‌ನಲ್ಲಿದ್ದ ಗಂಡ ೫೦ ಅಡಿ ದೂರಕ್ಕೆ ಚಿಮ್ಮಿದ್ದರ ಫಲವಾಗಿ ಬಹುತೇಕ ಸಾವು ಬದುಕಿನ ಹೋರಾಟದ ಹಂತಕ್ಕೆ ತಲುಪಿ ಕೊನೆಗೂ ಶಸ್ತ್ರಚಿಕಿತ್ಸೆಯೊಂದರ ನೆರವಿನಿಂದ ಬದುಕಿ ಬಂದಿದ್ದಾರೆ. ಈ ಅಫಘಾತ ನಡೆದ ಕೂಡಲೇ ಈ ದಂಪತಿಗಳಿಬ್ಬರನ್ನೂ ಏರ್‌ ಲಿಫ್ಟ್‌ ಮಾಡಿ ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿತ್ತು.

ಇದನ್ನೂ ಓದಿ | Viral News | ಗೋಡಂಬಿ ಉದ್ಯಾನದಲ್ಲಿ ಮದ್ಯ ಕುಡಿದ 24 ಆನೆಗಳು ಮಾಡಿದ್ದೇನು? ಸ್ಥಳೀಯರು ಡ್ರಮ್​ ಬಡಿಯಬೇಕಾಯ್ತು !

ಆದರೆ ಮೂರು ದಿನ ಕಳೆದು, ಶಸ್ತ್ರಚಿಕಿತ್ಸೆಯ ನಂತರ ಎಚ್ಚರಗೊಂಡ ಗಂಡ ಆಂಡ್ರ್ಯೂಎಲ್ಲರಿಗೂ ಒಂದು ಶಾಕ್‌ ಕೊಟ್ಟಿದ್ದಾರೆ. ಅವರು ೧೯೯೩ನೇ ಇಸವಿಯಲ್ಲಿ ತಾನಿದ್ದೇನೆಂದು ತಿಳಿದುಕೊಂಡಿದ್ದಾರೆ. ನಂತರ ೨೯ ವರ್ಷಗಳು ಪೂರ್ತಿಯಾಗಿ ಅವರಿಗೆ ಮರೆತು ಹೋಗಿದೆ. ಅವರು ತನ್ನ ಇಬ್ಬರು ಪುತ್ರಿಯರನ್ನೂ ಗುರುತು ಹಿಡಿಯಲಿಲ್ಲ. ಆದರೆ ಎಚ್ಚರಾದ ತಕ್ಷಣ ಅವರು, ನನ್ನ ಹೆಂಡತಿ ಎಲ್ಲಿ? ನನ್ನ ಹೆಂಡತಿ ಎಲ್ಲಿ ಎಂದು ಕೇಳಿದ್ದಾರೆ ಎನ್ನಲಾಗಿದೆ.

ಈತನ ಕುಟುಂಬದ ಮಂದಿಗೆ ಇದರ ಜೊತೆಗೆ ವೈದ್ಯರುಗಳು ಒಂದು ಶಾಕ್‌ ಕೂಡಾ ಕೊಟ್ಟಿದ್ದು, ಈವರಿಗೆ ನೆನಪಿನ ಶಕ್ತಿ ಮರಳಿ ಬರುವ ಬಗ್ಗೆ ಯಾವುದೇ ಗ್ಯಾರೆಂಟಿ ಇಲ್ಲ ಎಂದು ಹೇಳಿದ್ದಾಗಿ ಅವರ ಪತ್ನಿ ಹೇಳಿದ್ದಾರೆ. ಆದರೆ, ಪತ್ನಿ, ತಾನು ಅವರ ಸ್ಮರಣಶಕ್ತಿಯನ್ನು ಮರಳಿಸಲು ತನಗಾಗುವ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುವೆ ಎಂದು ಹೇಳಿದ್ದರೆನ್ನಲಾಗಿದೆ.

೧೧ ದಿನಗಳು ಆಸ್ಪತ್ರೆಯಲ್ಲಿ ಕಳೆದ ಮೇಲೆ ದಂಪತಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಸಂದರ್ಭವೂ ಆಂಡ್ರ್ಯೂ ಅವರು ತನ್ನ ನೆನಪಿನ ಶಕ್ತಿಯನ್ನು ಪಡೆದಿರಲಿಲ್ಲ. ಜೊತೆಗೆ ಯಾವಾಗ ಮದುವೆಯಾಗೋಣ ಎಂದೇ ತನ್ನ ಪತ್ನಿಯ ಬಳಿ ಕೇಳುತ್ತಿದ್ದರು. ಇದಾದ ಬಳಿಕ ಕೆಲದ ದಿನಗಳ ಕಾಲ ಇಬ್ಬರೂ ಸಮುದ್ರ ತೀರಕ್ಕೆ ಪ್ರವಾಸ ಹೋಗಿದ್ದ ಸಂದರ್ಭ ಮತ್ತೆ ಮದುವೆಯ ಶಾಸ್ತ್ರ ಮಾಡಿಕೊಂಡಿದ್ದಾರೆನ್ನಲಾಗಿದೆ. ಆದರೆ ಇವರಿಗೆ ಇನ್ನೂ ಅಫಘಾತದ ನೆನಪೂ ಆಗಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ | Viral news | ಅತೀ ಹೆಚ್ಚು ವಯಸ್ಸಿನ ನಾಯಿಗೆ ಈಗ 22 ವರ್ಷ ವಯಸ್ಸು!

Exit mobile version