ಲಂಡನ್: ನಾಯಿಗಳು ಕಾಣೆಯಾದರೆ ಸಿಗುವುದು ಕಷ್ಟವೇ. ಅದರಲ್ಲೂ ಎಲ್ಲರೊಂದಿಗೂ ಹೊಂದಿಕೊಳ್ಳುವಂಥ ನಾಯಿಗಳು ಕಳುವಾದರಂತೂ ಅವು ಸಿಗುವುದು ಅಸಾಧ್ಯ ಎಂದೇ ಹೇಳಬಹುದು. ಆದರೆ, ಇಂಗ್ಲೆಂಡ್ ದೇಶದಲ್ಲಿ ಬೆಳಗ್ಗೆ 5 ಗಂಟೆಗೆ ಕಳುವಾಗಿದ್ದ ನಾಯಿ 10 ಗಂಟೆಯೊಳಗೆ 161 ಕಿ.ಮೀ. ಟ್ಯಾಕ್ಸಿ ಪ್ರಯಾಣ ಮಾಡಿಕೊಂಡು ಬಂದು ಮಾಲೀಕರ ಕೈಗೆ ಸಿಕ್ಕಿರುವ ವಿಶೇಷ ಘಟನೆ (Viral News) ನಡೆದಿದೆ.
ಇದನ್ನೂ ಓದಿ: Viral News : ಈ ವ್ಯಕ್ತಿಯ ಪಿಎಚ್ಡಿ ಪದವಿಗೆ ತಗುಲಿದ್ದು ಬರೋಬ್ಬರಿ 50 ವರ್ಷ!
ಜಾರ್ಜಿಯಾ ಕ್ರೀವೆ ಹೆಸರಿನ ಹೆಸರಿನ ವ್ಯಕ್ತಿ ರಾಲ್ಫ್ ಹೆಸರಿನ ನಾಯಿ ಸಾಕಿದ್ದು, ಇತ್ತೀಚೆಗೆ ಮುಂಜಾನೆ 5 ಗಂಟೆ ಹೊತ್ತಿಗೆ ಅದನ್ನು ವಾಕಿಂಗ್ ಮಾಡಿಸುವುದಕ್ಕೆ ಕರೆದುಕೊಂಡು ಹೋಗಿದ್ದಾರೆ. ವಾಕಿಂಗ್ ಮಾಡುವಾಗ ಸ್ನೇಹಿತರೊಬ್ಬರು ಸಿಕ್ಕರೆಂದು ಅವರೊಂದಿಗೆ ಜಾರ್ಜಿಯಾ ಮಾತನಾಡುತ್ತ ನಿಂತಿದ್ದಾರೆ. ಆಗ ರಾಲ್ಫ್ ಅಲ್ಲಿಂದ ತಪ್ಪಿಸಿಕೊಂಡು ಓಡಲಾರಂಭಿಸಿದೆ.
ಹೀಗೆ ಓಡಿದ ರಾಲ್ಫ್ ಟ್ಯಾಕ್ಸಿಯೊಂದನ್ನು ಹತ್ತಿ ಕುಳಿತಿದೆ. ಆ ಟ್ಯಾಕ್ಸಿ ಪ್ರಯಾಣಿಕರನ್ನು ಕರೆದುಕೊಂಡು ಮ್ಯಾಂಚೆಸ್ಟರ್ ವಿಮಾನ ನಿಲ್ದಾಣಕ್ಕೆ ತೆರಳಿದೆ. ಅದಕ್ಕೂ ಮೊದಲೇ ನಾಯಿಯನ್ನು ಕಂಡ ಟ್ಯಾಕ್ಸಿ ಚಾಲಕ ಅದರ ಬಗ್ಗೆ ಬೆಲ್ಟ್ ಅಲ್ಲಿ ಏನಾದರೂ ಮಾಹಿತಿ ಇದೆಯೇ ಎಂದು ಹುಡುಕಿದ್ದಾರೆ. ಆದರೆ ಯಾವುದೇ ಮಾಹಿತಿ ಇಲ್ಲದ ಹಿನ್ನೆಲೆ ಅದನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದು ನಂತರ ಅದರ ಮಾಲೀಕರನ್ನು ಹುಡುಕಲು ಆರಂಭಿಸಿದ್ದಾರೆ.
ಇದನ್ನೂ ಓದಿ: Viral Video: ಹಳ್ಳಿ ಹುಡುಗಿಯ ಬ್ಯಾಟಿಂಗ್ ಸ್ಕಿಲ್ಗೆ ಫಿದಾ ಆದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್
ಅದಾಗಲೇ ಜಾರ್ಜಿಯಾ ಅವರು ಫೇಸ್‌ಬುಕ್‌ನಲ್ಲಿ ತಮ್ಮ ನಾಯಿ ಕಳೆದುಹೋಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ನಾಯಿ ಕಂಡರೆ ಕರೆ ಮಾಡುವುದಕ್ಕೆಂದು ಫೋನ್ ನಂಬರ್ ನೀಡಿದ್ದಾರೆ. ಅದನ್ನು ಕಂಡ ಟ್ಯಾಕ್ಸಿ ಚಾಲಕ ಆ ಸಂಖ್ಯೆಗೆ ಕರೆ ಮಾಡಿದ್ದು, ರಾಲ್ಫ್ ಅನ್ನು ವಾಪಸು ಮಾಲೀಕರಿಗೆ ತಲುಪಿಸಿದ್ದಾರೆ. ಬೆಳಗ್ಗೆ 10 ಗಂಟೆಯೊಳಗಾಗಿ ನಾಯಿ ತಮಗೆ ಸಿಕ್ಕಿದ್ದಾಗಿ ಜಾರ್ಜಿಯಾ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.