ವಾಷಿಂಗ್ಟನ್: ಹಣದಿಂದ ಸಂತೋಷವನ್ನು ಕೊಳ್ಳಲಾಗದು ಎನ್ನುವ ಮಾತಿದೆ. ಇದನ್ನೇ ನಂಬಿ ಬದುಕುವವರೂ ಇದ್ದಾರೆ. ಆದರೆ ಈ ಮಾತು ಸುಳ್ಳು ಎಂದು ಅಮೆರಿಕದ ಸಂಶೋಧಕರಿಬ್ಬರು ತೋರಿಸಿಕೊಟ್ಟಿದ್ದಾರೆ. ಅವರ ಅಧ್ಯಯನ ವರದಿ ಇದೀಗ ವೈರಲ್ (Viral News) ಆಗಿದೆ.
ಇದನ್ನೂ ಓದಿ: Viral Video: ಜಿರಾಫೆ ಮರಿಯನ್ನು ಹಿಡಿದು ಕುತ್ತಿಗೆಗೆ ಬಾಯಿ ಹಾಕಿದ್ದ ಸಿಂಹಿಣಿ ಏಕಾಏಕಿ ಬಿಟ್ಟು ಓಡಿತು; ಯಾಕೆ?
ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಡೇನಿಯಲ್ ಕಹ್ನೆಮನ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಮ್ಯಾಥ್ಯೂ ಕಿಲ್ಲಿಂಗ್ಸ್‌ವರ್ತ್ ಅವರು ಈ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ. ಡೇನಿಯಲ್ ಅವರು ಈ ಹಿಂದೆ 2010ರಲ್ಲಿ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಅಮೆರಿಕದ ಜನರು 75,000 ಡಾಲರ್ ಆದಾಯ ತಲುಪಿದ ನಂತರ ಸಂತೋಷವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಆದರೆ ಈಗ ಮಾಡಿರುವ ಸಂಶೋಧನೆಯ ಪ್ರಕಾರ ಜನರು 75,000 ಡಾಲರ್ ಆದಾಯದ ನಂತರವೂ ಹೆಚ್ಚಾಗಿ ಹಣದಿಂದ ಸಂತೋಷವನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಡೇನಿಯಲ್ ಅವರು 2008 ಮತ್ತು 2009ರ ನಡುವೆ ಪ್ರತಿದಿನ ಅವರ ಸಂತೋಷದ ಮಟ್ಟವನ್ನು ಕುರಿತು ಸಮೀಕ್ಷೆ ನಡೆಸಿದ್ದಾರೆ. ಒಟ್ಟು 1000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಡೇನಿಯಲ್ ಮತ್ತು ಕಿಲ್ಲಿಂಗ್ಸ್‌ವರ್ತ್ ಅವರು ತಮ್ಮ ಇತ್ತೀಚಿನ ಸಂಶೋಧನೆಗಳ ದತ್ತಾಂಶವನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ಇದು ಒಂದು ದಶಕದ ಹಿಂದಿನ ಅವರ ಸಂಶೋಧನೆಯ ವರದಿಗೆ ವಿರುದ್ಧವಾಗಿದೆ.
ಇದನ್ನೂ ಓದಿ: Viral Video: ಗೋವಾ ರೆಸಾರ್ಟ್‌ಗೆ ಬಂದಿದ್ದ ಕುಟುಂಬದ ಮೇಲೆ ಸ್ಥಳೀಯರ ಭೀಕರ ಹಲ್ಲೆ; ವೈರಲ್ ಆಯ್ತು ವಿಡಿಯೊ
ಈಗ ನಡೆಸಲಾಗಿರುವ ಸಮೀಕ್ಷೆಯಲ್ಲಿ ಒಟ್ಟು 33,000 ಅಮೆರಿಕನ್ನರನ್ನು ಒಳಪಡಿಸಲಾಗಿದೆ. 10,000 ಡಾಲರ್ ಆದಾಯ ಇರುವವರಿಂದ ಹಿಡಿದು, ಹೆಚ್ಚು ಆದಾಯ ಇರುವವರವರೆಗೆ ಹೋಲಿಕೆ ಮಾಡಲಾಗಿದೆ. ಅಂತಿಮ ದತ್ತಾಂಶವನ್ನು ಕಲೆ ಹಾಕಿ ನೋಡಿದಾಗ ಅದರಲ್ಲಿ 5,00,000 ಡಾಲರ್ ಆದಾಯ ಇರುವವರು ಹೆಚ್ಚು ಸಂತೋಷವಾಗಿದ್ದಾರೆ ಎಂದು ತಿಳಿದುಬಂದಿದೆ.