ಬೆಂಗಳೂರು: ಮನುಷ್ಯರ ನಾಲಿಗೆ ವಿಚಾರದಲ್ಲಿ ಸಾಕಷ್ಟು ರೆಕಾರ್ಡ್‌ಗಳು ಆಗಿರುವುದನ್ನು ಈವರೆಗೆ ನೋಡಿದ್ದೇವೆ. ಅದರೆ ಇದೀಗ ನಾಯಿಯ ಸರದಿ. ವಿಶ್ವದಲ್ಲೇ ಅತ್ಯಂತ ಉದ್ದದ ನಾಲಿಗೆ ಹೊಂದಿರುವ ನಾಯಿ ಎನ್ನುವ ಗಿನ್ನೆಸ್ ರೆಕಾರ್ಡ್ ಇದೀಗ ಹೊರಬಿದ್ದಿದೆ. ಅದರ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ (Viral News)ಆಗಿದೆ.
ಅಮೆರಿಕದ ರಾಕಿ ಹೆಸರಿನ ನಾಯಿ ಈ ರೆಕಾರ್ಡ್ ಅನ್ನು ತನ್ನ ಪಾಲಿಗೆ ಮಾಡಿಕೊಂಡಿದೆ. ಅಂದ ಹಾಗೆ ಈ ನಾಯಿಗೆ ಇದೀಗ 9 ವರ್ಷ ವಯಸ್ಸು. ಈ ರಾಕಿಯ ನಾಲಿಗೆ ಬರೋಬ್ಬರಿ 13.88 ಸೆಂ.ಮೀ. ಅಂದರೆ 5.46 ಇಂಚು ಉದ್ದವಿದೆಯಂತೆ. ಈ ವಿಚಾರವನ್ನು ಪರಿಗಣಿಸಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ರಾಕಿಗೆ ʼವಿಶ್ವದಲ್ಲೇ ಅತ್ಯಂತ ಉದ್ದದ ನಾಲಿಗೆ ಹೊಂದಿರುವ ನಾಯಿʼ ಎನ್ನುವ ಅವಾರ್ಡ್ ಅನ್ನು ಕೊಟ್ಟಿದೆ.
ಇದನ್ನೂ ಓದಿ: Viral News: ಫಸ್ಟ್ ನೈಟ್ ಆದ ಮರುದಿನವೇ ಹೆಣ್ಣುಮಗುವಿಗೆ ಜನ್ಮ ನೀಡಿದ ಯುವತಿ, ಗಂಡನಿಗೆ ಫಜೀತಿ
ಈ ಬಗ್ಗೆ ನಾಯಿಯನ್ನು ಸಾಕಿರುವ ಅದರ ಮಾಲೀಕ ಮಾತನಾಡಿದ್ದಾರೆ. “ನಾವು ರಾಕಿಯನ್ನು ಹೊರಗಡೆ ಕರೆದುಕೊಂಡು ಹೋಗುವಾಗ ರಾಕಿಯನ್ನು ನೋಡುವ ಅನೇಕರು ಅದರ ನಾಲಿಗೆಯ ಬಗ್ಗೆ ಮಾತನಾಡಿದ್ದಾರೆ. ನಮಗೇನು ಅದರಲ್ಲಿ ಹೊಸತು ಕಂಡುಬಂದಿಲ್ಲ. ಆದರೆ ಇದೀಗ ರಾಕಿ ಗಿನ್ನೆಸ್ ರೆಕಾರ್ಡ್ ಅನ್ನೇ ಬರೆದಿರುವುದು ಖುಷಿ ತಂದಿದೆ” ಎಂದು ಹೇಳಿದ್ದಾರೆ.
ರಾಕಿಯನ್ನು ವಾರ್ಷಿಕವಾಗಿ ದಂತ ಪರೀಕ್ಷೆಗೆಂದು ವೈದ್ಯರ ಬಳಿ ಕರೆದುಕೊಂಡು ಹೋದಾಗ ವೈದ್ಯರು ರಾಕಿಯ ನಾಲಿಗೆಯ ಉದ್ದವನ್ನು ಲೆಕ್ಕ ಹಾಕಿದ್ದಾರೆ. ಅದರ ನಂತರ ಅದನ್ನು ಗಿನ್ನೆಸ್ ರೆಕಾರ್ಡ್ ಹಂತಕ್ಕೆ ತೆಗೆದುಕೊಂಡು ಹೋಗಲಾಗಿದೆ.
ರಾಕಿ ರೆಕಾರ್ಡ್ ಬರೆದಿರುವ ಬಗ್ಗೆ ಗಿನ್ನೆಸ್ ರೆಕಾರ್ಡ್ ಸಂಸ್ಥೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಹತ್ತು ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ. ಅನೇಕರು ಇದಕ್ಕೆ ವಿವಿಧ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ: Viral Video : ಬುಲೆಟ್ ಬೈಕಲ್ಲಿ ರಿವಾಲ್ವರ್ ಹಿಡಿದು ಯುವಕರ ಶೋಕಿ, ಇಬ್ಬರು ಪುಂಡರ ಅರೆಸ್ಟ್
ಅಂದ ಹಾಗೆ ಇದಕ್ಕೂ ಮೊದಲು ಈ ರೆಕಾರ್ಡ್ ಅನ್ನು ಲ್ಯಾಬ್ರಡಾರ್ ಮತ್ತು ಜರ್ಮನ್ ಶೆಫರ್ಡ್‌ನ ಮಿಕ್ಸ್ ತಳಿಯ ನಾಯಿಯಾದ ಜೋಯ್ ಹೊಂದಿತ್ತು. ಜೋಯ್‌ನ ನಾಲಿಗೆಯ ಉದ್ದ 12.7 ಸೆಂ.ಮೀ. ಅಂದರೆ 5 ಇಂಚಿನಷ್ಟಿತ್ತು.