Site icon Vistara News

Viral News : ಫುಡ್‌ ಡೆಲಿವರಿಗೆ ಬಂದವನು ಪಾಟ್‌ ಒಡೆದ; ಮುಂದಾಗಿದ್ದು ಮನ ಮುಟ್ಟುವ ಕಥೆ

food delivery boy breaks flower pot

food delivery boy breaks flower pot by accident. And returns that with sweet gesture

ಬೆಂಗಳೂರು: ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡಿದಾಗ ಅದನ್ನು ಡೆಲಿವರಿ ಬಾಯ್‌ ತಂದುಕೊಡುತ್ತಾರೆ. ಆ ರೀತಿ ಕೆಲಸ ಮಾಡುವ ಕೆಲವು ಡೆಲಿವರಿ ಬಾಯ್‌ಗಳ ಬಗ್ಗೆ ಒಳ್ಳೊಳ್ಳೆ ಅಭಿಪ್ರಾಯಗಳು ಕೇಳಿಬರುತ್ತಿರುತ್ತವೆ. ಆದರೆ ಅದರಲ್ಲಿ ಕೆಲವರು ಸಿಡುಕಾಗಿ ನಡೆದುಕೊಂಡರು ಎಂದು ದೂರಿದ್ದನ್ನೂ ಕೇಳಿರುತ್ತೀರಿ. ಇಲ್ಲೂ ಕೂಡ ಒಬ್ಬ ಡೆಲಿವರಿ ಬಾಯ್‌ ಕಥೆಯೇ ಇದೆ. ಆದರೆ ಈ ಕಥೆ ಕೇಳಿದಾಕ್ಷಣ ನೀವು ಕೂಡ ಒಮ್ಮೆ, “ಹೌ ಸ್ವೀಟ್‌” ಎಂದು (Viral News) ಉದ್ಗರಿಸಬಹುದು.

ಎಲಿ ಮೆಕ್‌ಕ್ಯಾನ್‌ ಹೆಸರಿನ ವ್ಯಕ್ತಿಯ ಪತಿ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡಿದ್ದರಂತೆ. ಅದನ್ನು ಕೊಡುವುದಕ್ಕೆ ಬಂದ ಡೆಲಿವರಿ ಬಾಯ್‌ ಜೋರ್ಡನ್‌ ಆಕಸ್ಮಿಕವಾಗಿ ಆ ಮನೆಯಲ್ಲಿದ್ದ ಒಂದು ಪಾಟ್‌ ಅನ್ನು ತುಳಿದುಬಿಟ್ಟಿದ್ದಾನೆ. ಪಾಟ್‌ ಅಲ್ಲಿಯೇ ಒಡೆದುಹೋಗಿದೆ. ಈ ವಿಚಾರವಾಗಿ ಜೋರ್ಡನ್‌ ಮನೆಯ ಯಜಮಾನನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. “ತಿಳಿಯದೆ ನಿಮ್ಮ ಪಾಟ್‌ ಒಡೆದುಬಿಟ್ಟೆ. ನನ್ನನ್ನು ಕ್ಷಮಿಸಿ. ಆ ಪಾಟ್‌ನ ಹಣವನ್ನು ನಿಮಗೆ ಕೊಡುತ್ತೇನೆ” ಎಂದು ಹೇಳಿದ್ದಾನೆ.

ಇದನ್ನೂ ಓದಿ: Viral Video : ಸ್ಕೂಟರ್‌ನಲ್ಲೇ ಲಿಪ್‌ ಲಾಕ್‌! ಇದು ಹುಡುಗ-ಹುಡುಗಿ ಕಥೆಯಲ್ಲ, ಇಬ್ಬರು ಹುಡುಗರ ಕಥೆ!

ಆದರೆ ಅದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಅರಿತುಕೊಂಡ ಮನೆಯ ಮಾಲೀಕ, ಹಣ ಕೊಡುವುದೇನು ಬೇಡವೆಂದು ಹೇಳಿ ಜೋರ್ಡನ್‌ ಅನ್ನು ಕಳುಹಿಸಿಕೊಟ್ಟಿದ್ದಾನೆ.


ಇದಾದ ಕೆಲವೇ ದಿನಗಳಲ್ಲಿ ಆ ಮನೆಯ ಎದುರು ಹೊಸದೊಂದು ಪಾಟ್‌ ಕಾಣಿಸಿಕೊಂಡಿದೆ. ಅದರೊಂದಿಗೆ ಚಿಕ್ಕದೊಂದು ಕೈ ಬರಹವಿದ್ದ ಪೇಪರ್‌ ಕೂಡ ಸಿಕ್ಕಿದೆ. ಅದರಲ್ಲಿ ಜೋರ್ಡನ್‌, “ನಿಮ್ಮ ಪಾಟ್‌ ಒಡೆದಿದ್ದಕ್ಕೆ ಕ್ಷಮಿಸಿ. ಹಾಗೆಯೇ ನನ್ನನ್ನು ಕ್ಷಮಿಸಿದ್ದಕ್ಕೆ ನಿಮಗೆ ಧನ್ಯವಾದ” ಎಂದು ಬರೆದಿದ್ದಾನೆ. ಈ ರೀತಿ ಜೋರ್ಡನ್‌ ಪಾಟ್‌ ತಂದಿಡುವುದನ್ನು ಎಲಿ ಮೆಕ್‌ಕ್ಯಾನ್‌ ನೋಡಿದ್ದಾರೆ ಕೂಡ.

ಇದನ್ನೂ ಓದಿ: Viral Video: ಹೊಸ ಡಾಂಬರು ರಸ್ತೆಯನ್ನು ಬರಿಗೈಯಲ್ಲಿ ಎತ್ತಿ ಹಿಡಿದ ಗ್ರಾಮಸ್ಥರು; ಜರ್ಮನ್ ತಂತ್ರಜ್ಞಾನವಂತೆ!

ಎಲಿ ಅವರು ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಜೋರ್ಡನ್‌ ತಂದಿಟ್ಟ ಹೊಸ ಪಾಟ್‌ ಮತ್ತು ಅದರೊಂದಿಗೆ ಇಟ್ಟಿದ್ದ ಸಂದೇಶದ ತುಣುಕನ್ನೂ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಜೋರ್ಡನ್‌ ಅವರ ಒಳ್ಳೆಯತನದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. “ಈ ಸಮಾಜದಲ್ಲಿ ಜೋರ್ಡನ್‌ನಂತಹ ವ್ಯಕ್ತಿತ್ವ ಇರುವವರು ಕಡಿಮೆ” ಎಂದು ಜನರು ಆತನನ್ನು ಹೊಗಳಲಾರಂಭಿಸಿದ್ದಾರೆ.

Exit mobile version