ಬೆಂಗಳೂರು: ಆಪ್ಟಿಕಲ್ ಇಲ್ಯೂಷನ್ ಒಂದು ರೀತಿಯಲ್ಲಿ ಟ್ರಿಕ್ಕಿ ಆಟ ಎಂದೇ ಹೇಳಬಹುದು. ನೋಡುವುದಕ್ಕೆ ಎಲ್ಲವೂ ಒಂದೇ ರೀತಿಯಲ್ಲಿ ಕಾಣುತ್ತದೆಯಾದರೂ ನಿಮ್ಮ ಕಣ್ಣು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಿಮಗೆ ವ್ಯತ್ಯಾಸ ಕಾಣುತ್ತದೆ. ಅಂತಹ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ (Viral News) ಆಗುತ್ತಿರುತ್ತವೆ. ಇದೀಗ ಅಂಥದ್ದೇ ಒಂದು ಆಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಚಿತ್ರದಲ್ಲಿ ಒಂದಷ್ಟು ಕೈಗಳ ಇಮೋಜಿ ಕೊಡಲಾಗಿದೆ. ಎ ಇಂದ ಜಿವರೆಗೆ ಕಾಲಂ ಮತ್ತು 1ರಿಂದ 9ರವರೆಗಿನ ಸಾಲು ಅದರಲ್ಲಿದೆ. ಇಷ್ಟು ದೊಡ್ಡ ಚಿತ್ರದಲ್ಲಿ ಎಲ್ಲ ಇಮೋಜಿಗಳೂ ಒಂದೇ ರೀತಿಯಲ್ಲಿ ಕಾಣುತ್ತದೆ. ಆದರೆ ನಿಜ ಹೇಳಬೇಕೆಂದರೆ ಈ ಚಿತ್ರದಲ್ಲಿ ಒಂದು ಕೈ ಮಾತ್ರ ಎಲ್ಲ ಕೈಗಳಿಗಿಂತ ವಿಭಿನ್ನವಾಗಿದೆ. ಅದು ಯಾವುದು ಎಂದು ಕಂಡುಹಿಡಿಯುವುದೇ ನಿಮ್ಮ ಕಣ್ಣಿಗಿರುವ ಸವಾಲು.
ಇದನ್ನೂ ಓದಿ: Viral News : ಪ್ರಸವಪೂರ್ವ ಹೆರಿಗೆಯಲ್ಲಿ ಭಾರತವೇ ಮೊದಲು! ಶಿಶುಗಳ ಸಾವಿನ ಪ್ರಮಾಣವೂ ಹೆಚ್ಚು
ಈ ಆಟವನ್ನು ಆಪ್ಟಿಕಲ್ ಇಲ್ಯೂಷನ್ಸ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಅನೇಕರು ಸರಿಯಾದ ಉತ್ತರ ಕೊಟ್ಟು ಭೇಷ್ ಎನಿಸಿಕೊಂಡಿದ್ದರೆ ಹಲವರು ಉತ್ತರ ಹುಡುಕಲಾಗದೆ ಒದ್ದಾಡಿದ್ದಾರೆ.
ಇಷ್ಟು ಸಮಯ ಚಿತ್ರವನ್ನು ಗಮನಿಸಿರುವ ನಿಮಗೆ ಸರಿಯಾದ ಉತ್ತರ ಸಿಕ್ಕಿದೆಯೇ? ಸಿಕ್ಕಿದ್ದರೆ ಒಳ್ಳೆಯದು. ಇಲ್ಲದಿದ್ದರೆ ನಾವೇ ಉತ್ತರ ಹೇಳುತ್ತೇವೆ ಕೇಳಿ. ಇಲ್ಲಿ ಇ ಲೈನಿನಲ್ಲಿ ಮೂರನೇ ಕೈಯನ್ನು ಗಮನಿಸಿ. ಎಲ್ಲ ಕೈಗಳ ಬೆರಳುಗಳನ್ನು ಜೋಡಿಸಿಟ್ಟುಕೊಳ್ಳಲಾಗಿದ್ದರೆ ಇದೊಂದು ಇಮೋಜಿಯಲ್ಲಿ ಮಾತ್ರ ಎಲ್ಲ ಬೆರಳುಗಳನ್ನು ಬೇರೆ ಬೇರೆ ಇಟ್ಟುಕೊಳ್ಳಲಾಗಿದೆ. ಹಾಗಾಗಿ ಇದೇ ಸರಿಯಾದ ಉತ್ತರವಾಗಿದೆ.