Site icon Vistara News

Viral News : ಐಎಎಸ್ ಅಧಿಕಾರಿಯ ಈ ಪೋಸ್ಟ್ ನೋಡಿ ತಮ್ಮ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು

#image_title

ನವ ದೆಹಲಿ: ಕಾಲ ಆಗಿಂದಾಗ ಬದಲಾಗುತ್ತಾ ಇರುತ್ತದೆ. ಅದೇ ರೀತಿ ಹಣದ ಮೌಲ್ಯ ಕೂಡ. ಹಿಂದೆ ಒಂದು ರೂಪಾಯಿ ಇದ್ದರೆ ಒಂದು ದಿನದ ಖರ್ಚಿಗೆ ಆಗುತ್ತಿತ್ತು. ಆದರೆ ಇಂದು ಅದೇ ಒಂದು ರೂಪಾಯಿಯ ಮೌಲ್ಯ ತೀರಾ ಕಡಿಮೆ. ದುಡ್ಡಿಗೆ ಹೆಚ್ಚಿನ ಮೌಲ್ಯವಿದ್ದ ಆ ಕಾಲದ ನೆನಪನ್ನು ಮರಳಿಸುವ ಪೋಸ್ಟ್ ಒಂದನ್ನು ಐಎಎಸ್ ಅಧಿಕಾರಿಯೊಬ್ಬರು ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ.

ಇದನ್ನೂ ಓದಿ: Viral video: ಹತ್ತಾರು ಪಂಜು ಕಟ್ಟಿಕೊಂಡು ಬಂದ ಪಂಜುರ್ಲಿ: ಯಕ್ಷಗಾನದ ವೇಷ ವೈರಲ್
2009ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಅವನೀಶ್ ಶರಣ್ ಅವರು ಈ ಕುರಿತು ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಹಳೆಯ ನಾಣ್ಯಗಳಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. 2 ಪೈಸೆ, 3 ಪೈಸೆ, 5 ಪೈಸೆ, 10 ಪೈಸೆ, 20 ಪೈಸೆ ಮತ್ತು 50 ಪೈಸೆಯ ನಾಣ್ಯಗಳಿರುವ ಫೋಟೋ ಅದಾಗಿದೆ. ಅದನ್ನು ಹಂಚಿಕೊಂಡಿರುವ ಅಧಿಕಾರಿಯು, “ಇವುಗಳಲ್ಲಿ ಯಾವುದನ್ನು ಬಳಸಿ ಏನನ್ನಾದರೂ ಖರೀದಿಸಿದ್ದೀರಾ?” ಎಂದು ಕೇಳಿದ್ದಾರೆ.


ಅವನೀಶ್ ಅವರ ಈ ಪೋಸ್ಟ್ ನೋಡುತ್ತಿದ್ದಂತೆಯೇ ಅನೇಕರು ತಮ್ಮ ಬಾಲ್ಯಕ್ಕೆ ತೆರಳಿದ್ದಾರೆ. ಬಾಲ್ಯದಲ್ಲಿ 10, 20 ಪೈಸೆ ಕೊಟ್ಟು ಹೊಟ್ಟೆ ತುಂಬ ತಿನಿಸು ತಿನ್ನುತ್ತಿದ್ದದ್ದು, ಸಿನಿಮಾ ನೋಡುತ್ತಿದ್ದ ಅನುಭವಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. ಕೆಲವರು ಈ ಎಲ್ಲ ನಾಣ್ಯಗಳನ್ನೂ ಬಳಕೆ ಮಾಡಿರುವ ಅನುಭವ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಅವನೀಶ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದು, ವೈರಲ್ ಆಗಿದೆ.

ಇದನ್ನೂ ಓದಿ: Viral Video: ಮಾಡಬಾರದ ಜಾಗದಲ್ಲಿ ಯೋಗ ಮಾಡಿದ ಯುವತಿ; ಬಿದ್ದಿದ್ದು 5 ಅಡಿ ಕೆಳಗೆ, ತಲುಪಿದ್ದು 30 ಅಡಿ ಆಳವನ್ನು!
ಭಾರತೀಯ ರಿಸರ್ವ್ ಬ್ಯಾಂಕ್ 25 ಪೈಸೆ ಮತ್ತು ಅದರೊಳಗಿನ ಮೌಲ್ಯದ ಎಲ್ಲ ನಾಣ್ಯಗಳನ್ನು 2011ರಲ್ಲಿ ಅಮಾನ್ಯ ಮಾಡಿತು. ಈಗ 50 ಪೈಸೆಯ ನಾಣ್ಯ ಚಾಲ್ತಿಯಲ್ಲಿದೆ. ಭಾರತದ ಅತ್ಯಂತ ಕಡಿಮೆ ಮೌಲ್ಯದ್ದಾಗಿರುವ ಈ ನಾಣ್ಯ ಕಾಣಸಿಗುವುದು ತೀರಾ ಅಪರೂಪ.

Exit mobile version