ಟೋಕಿಯೋ: ಇತ್ತೀಚಿನ ದಿನಗಳಲ್ಲಿ ಜನರು ನೇರ ಭೇಟಿ ಮಾಡಿ ಮಾತನಾಡುವುದಾಗಲಿ ಅಥವಾ ಕರೆ ಮಾಡಿ ಮಾತನಾಡುವುದಾಗಲಿ ಕಡಿಮೆಯಾಗಿದೆ. ಎಲ್ಲವೂ ಮೊಬೈಲ್ ಫೋನ್‌ನಲ್ಲೇ ನಡೆಯುತ್ತದೆ. ಒಂದು ಮೆಸೇಜ್‌ನಲ್ಲೇ ಎಲ್ಲವೂ ಮುಗಿದುಬಿಡುತ್ತದೆ. ಹೀಗಿರುವ ಯಾಂತ್ರಿಕ ಸಮಾಜದಲ್ಲಿ ಜನರು ತಮ್ಮ ಭಾವನೆಗಳನ್ನು ಮುಚ್ಚಿಡುವುದಕ್ಕೆ ಮತ್ತು ಭಾವನೆಯನ್ನು ಹಂಚಿಕೊಳ್ಳುವುದಕ್ಕೆ ಹೆಚ್ಚಾಗಿ ಇಮೋಜಿಗಳನ್ನು ಬಳಸುತ್ತಾರೆ ಎನ್ನುವ ಅಂಶ ಸಮೀಕ್ಷೆಯೊಂದರಿಂದ (Viral News) ತಿಳಿದುಬಂದಿದೆ.
ಇದನ್ನೂ ಓದಿ: Kangana Ranaut : ಕಿಯಾರಾ-ಸಿದ್ಧಾರ್ಥ್ ಜೋಡಿ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರಿ ಹಾಕಿದ ಕಂಗನಾ ರಣಾವತ್
ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯದ ಮೊಯು ಲಿಯು ಅವರು ಈ ರೀತಿಯ ಸಮೀಕ್ಷೆಯನ್ನು ನಡೆಸಿದ್ದಾರೆ. ಅವರು ಮೊಬೈಲ್ ಚಾಟಿಂಗ್ ಅನ್ನು ಬಳಸುವ 1,289 ಜನರನ್ನು ಸಮೀಕ್ಷೆಗೆ ಬಳಸಿಕೊಂಡಿದ್ದಾರೆ. ಅವರುಗಳಿಗೆ ಒಂದಿಷ್ಟು ಸಂದೇಶಗಳನ್ನು ಕಳುಹಿಸಲಾಗಿದ್ದು, ಅದಕ್ಕೆ ತಾವು ಸಾಮಾನ್ಯವಾಗಿ ಪ್ರತಿಕ್ರಿಯಿಸುವಂತೆ ಪ್ರತಿಕ್ರಿಯಿಸಲು ತಿಳಿಸಲಾಗಿದೆ.
ಈ ಸಮೀಕ್ಷೆಯಲ್ಲಿ ಜನರು ತಮ್ಮೊಂದಿಗೆ ಹೆಚ್ಚು ಆಪ್ತವಾಗಿರುವವರಿಗೆ ಮಾತ್ರ ಹೆಚ್ಚು ಇಮೋಜಿಗಳನ್ನು ಕಳುಹಿಸಿರುವುದು ತಿಳಿದುಬಂದಿದೆ. ಉನ್ನತ ಮಟ್ಟದ ಜನರೊಂದಿಗೆ ಅಥವಾ ಹೆಚ್ಚು ಆಪ್ತರಲ್ಲದವರೊಂದಿಗೆ ಇಮೋಜಿ ಬಳಕೆ ಕಡಿಮೆ ಇರುವುದು ಗೊತ್ತಾಗಿದೆ. ಹಾಗೆಯೇ ಜನರು ಅತಿ ಹೆಚ್ಚು ನೋವುಂಟಾದಾಗ ಮಾತ್ರ ನೋವಿನ ಇಮೋಜಿಗಳನ್ನು ಕಳುಹಿಸುತ್ತಾರೆ. ಸ್ವಲ್ಪ ಸಂತೋಷಕ್ಕೂ ಕೂಡ ಸಂತೋಷದ ಇಮೋಜಿ ಕಳುಹಿಸಿಕೊಡುತ್ತಾರೆ ಎನ್ನುವ ಅಂಶ ತಿಳಿದುಬಂದಿದೆ.
ಇದನ್ನೂ ಓದಿ: Viral Video: ಲೋಹದ ಬೇಲಿಯನ್ನೇ ಮುರಿದು, ನುಗ್ಗಿತು ಬೃಹತ್ ಮೊಸಳೆ; ಇಷ್ಟೊಂದು ಶಕ್ತಿಶಾಲಿಯಾ ಈ ಸರೀಸೃಪ?!
ಈ ರೀತಿ ಇಮೋಜಿ ಬಳಕೆಯಿಂದ ಮನುಷ್ಯ ತನ್ನ ನೋವನ್ನು ಹೆಚ್ಚಾಗಿ ಮುಚ್ಚಿಡಲು ಬಯಸುತ್ತಾನೆ. ಇದು ಆತನಿಗೆ ಮಾನಸಿಕವಾಗಿ ನೋವುಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷೆ ನಡೆಸಿರುವ ತಂಡ ಹೇಳಿದೆ.