Site icon Vistara News

Viral News : ಈ ವ್ಯಕ್ತಿಯ ಪಿಎಚ್ಡಿ ಪದವಿಗೆ ತಗುಲಿದ್ದು ಬರೋಬ್ಬರಿ 50 ವರ್ಷ!

#image_title

ಲಂಡನ್: ಕೆಲವರು ಓದುವುದೆಂದರೆ ಹೆಚ್ಚು ಇಷ್ಟ ಪಡುತ್ತಾರೆ. ಅಂಥವರ ಸಾಲಿಗೆ ಸೇರಿದವರು ಬ್ರಿಟನ್ ದೇಶದ ನಿಕ್ ಅಕ್ಸ್ಟೆನ್. ಈ ವ್ಯಕ್ತಿಗೆ ಓದು ಅದೆಷ್ಟು ಇಷ್ಟವೆಂದರೆ 50 ವರ್ಷಗಳ ಕಾಲ ಪ್ರಯತ್ನಿಸಿ ಪಿಎಚ್ಡಿಯನ್ನೇ (Viral News) ಪಡೆದುಕೊಳ್ಳುವಷ್ಟು.

ಹೌದು. ನಿಕ್ ಅವರು 1970ರಲ್ಲಿ ಅಮೆರಿಕದ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಗಣಿತದ ಸಮಾಜಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಮಾಡುವುದಕ್ಕೆ ನೋಂದಣಿ ಮಾಡಿಕೊಂಡಿದ್ದರು. ಅದಕ್ಕೆಂದು ಅವರಿಗೆ ವಿದ್ಯಾರ್ಥಿ ವೇತನ ಕೂಡ ಸಿಗುತ್ತಿತ್ತು. ಆದರೆ ಐದು ವರ್ಷಗಳಲ್ಲಿ ಅವರು ಬ್ರಿಟನ್ ದೇಶಕ್ಕೆ ವಾಪಸಾಗಬೇಕಾದ ಹಿನ್ನೆಲೆ ಅವರ ಪಿಎಚ್ಡಿ ಕನಸು ಅರ್ಧಕ್ಕೆ ನಿಂತಿತು.

ಇದನ್ನೂ ಓದಿ: Viral Video: ಹಳ್ಳಿ ಹುಡುಗಿಯ ಬ್ಯಾಟಿಂಗ್​ ಸ್ಕಿಲ್​ಗೆ ಫಿದಾ ಆದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​

ಅಷ್ಟಕ್ಕೆ ಸುಮ್ಮನಾಗದ ಅವರು ತಮ್ಮ 69ನೇ ವಯಸ್ಸಿನಲ್ಲಿ ಫಿಲಾಸಫಿ ವಿಷಯದಲ್ಲಿ ಎಂಎ ಪದವಿ ಪಡೆದುಕೊಂಡಿದ್ದಾರೆ. ಬ್ರಿಟನ್ ದೇಶದ ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ ಈ ಪದವಿ ಪಡೆದಿದ್ದಾರೆ. ನಂತರ ಅಲ್ಲಿಯೇ ಪಿಎಚ್ಡಿಗೆ ನೋಂದಣಿ ಮಾಡಿಕೊಂಡಿದ್ದು, 2022ರಲ್ಲಿ ಅದನ್ನು ಸಂಪೂರ್ಣಗೊಳಿಸಿದ್ದಾರೆ. ಇದೀಗ 76 ವರ್ಷದವರಾಗಿರುವ ನಿಕ್ ಅವರಿಗೆ ಇತ್ತೀಚೆಗೆ ಬ್ರಿಸ್ಟಲ್ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಪ್ರದಾನಿಸಿದೆ. ಪತ್ನಿ ಮತ್ತು ಮೊಮ್ಮಗಳ ಸಮ್ಮುಖದಲ್ಲಿ ಅವರು ಪದವಿ ಸ್ವೀಕರಿಸಿದ್ದಾರೆ. “ವಿಶ್ವವಿದ್ಯಾಲಯದಲ್ಲಿ 23-25 ವರ್ಷದ ವಿದ್ಯಾರ್ಥಿಗಳಿದ್ದರು. ಅವರ್ಯಾರೂ ನನ್ನನ್ನು ವಯಸ್ಸಾದವನಂತೆ ಕಾಣದಂತೆ ಸ್ನೇಹಿತನಂತೆ ಕಂಡು, ಪದವಿ ಪಡೆಯಲು ಸಹಕರಿಸಿದ್ದಾರೆ” ಎಂದು ಹೇಳಿದ್ದಾರೆ ನಿಕ್.

Exit mobile version