ಬೆಂಗಳೂರು: ಆಪ್ಟಿಕಲ್ ಇಲ್ಯೂಷನ್‌ನಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಮೆದುಳಿಗೂ ಕೆಲಸ ಕೊಡುವ ಅನೇಕ ಫೋಟೋಗಳು ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಇದೀಗ ಅದೇ ರೀತಿಯ ಆಟದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral News) ಆಗಿದೆ.
ಒಟ್ಟು ಏಳು ಬಕೆಟ್‌ಗಳನ್ನು ಇಡಲಾಗಿದೆ. ಅದರಲ್ಲಿ ನಲ್ಲಿಯಿಂದ ನೀರು ಒಂದು ಬಕೆಟ್‌ಗೆ ಬಿದ್ದು ಅದರಿಂದ ಎಲ್ಲವಕ್ಕೂ ಹರಿದುಹೋಗುತ್ತದೆ. ಕೆಲವೊಂದರಲ್ಲಿ ನೀರು ಹರಿಯುವುದಕ್ಕೆ ಕೆಳಗೆ ಪೈಪ್ ಜೋಡಿಸಲಾಗಿದ್ದರೆ, ಕೆಲವೊಂದಕ್ಕೆ ಮೇಲೆ ಜೋಡಿಸಲಾಗಿದೆ. ಇನ್ನು ಕೆಲವು ಪೈಪ್ ಜೋಡಿಸಲಾಗಿದೆಯಾದರೂ ಅದರಲ್ಲಿ ನೀರು ಹರಿಯದಂತೆ ಮಾಡಲಾಗಿದೆ. ಈ ಇಷ್ಟೂ ಬಕೆಟ್‌ಗಳಲ್ಲಿ ಯಾವ ಬಕೆಟ್‌ನಲ್ಲಿ ಬಹುಬೇಗನೆ ನೀರು ತುಂಬಿಕೊಳ್ಳುತ್ತದೆ ಎನ್ನುವುದನ್ನು ನೀವು ಕಂಡುಹಿಡಿಯಬೇಕು. ಅದರಲ್ಲೂ ಐದು ಸೆಕೆಂಡ್‌ಗಳ ಒಳಗೆ ಉತ್ತರ ಕಂಡುಹಿಡಿಯಬೇಕು.
ಇದನ್ನೂ ಓದಿ: Viral News: ವಯಸ್ಸು 27, ಇರೋದು 4 ಸಾವಿರ ಕೋಟಿ ರೂ. ಮನೆಯಲ್ಲಿ; ಅಂದಹಾಗೆ ಈತ ಬಿಜೆಪಿ ಮಿನಿಸ್ಟರ್ ಪುತ್ರ
ಇಂಥದ್ದೊಂದು ಸವಾಲನ್ನು ಸೂರ್ಯನಂದನ್ ಡಾಟ್ ನೆಟ್ ಸಂಸ್ಥೆಯ ಸಿಇಒ ಆಗಿರುವ ಪ್ರಶಾಂತ್ ಸಾಹು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಯಾವ ಬಕೆಟ್‌ನಲ್ಲಿ ನೀರು ಮೊದಲು ತುಂಬುತ್ತದೆ ಎನ್ನುವುದನ್ನು ಕಾರಣದೊಂದಿಗೆ ವಿವರಿಸಿ ಎಂದು ಫೋಟೊದೊಂದಿಗೆ ಕ್ಯಾಪ್ಶನ್ ಕೊಡಲಾಗಿದೆ.
Kaun Sa Balti , Pehle full Hoga ?
— Prashant Sahu 🇮🇳 (@suryanandannet) July 3, 2023
Which bucket will fill first ? Write with Explanation. #viral #puzzle #puzzles #BrainTeaser pic.twitter.com/seqwzrfBUr
ಜುಲೈ 3ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಅನ್ನು ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡಿದೆ. ಹಲವಾರು ಮಂದಿ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ನೂರಾರು ಮಂದಿ ಮೆದುಳಿಗೆ ಕೆಲಸ ಕೊಟ್ಟು, ಉತ್ತರವನ್ನು ಕಮೆಂಟ್‌ನಲ್ಲಿ ಹಾಕಿದ್ದಾರೆ. ಕೆಲವರು ಐದನೇ ಬಕೆಟ್ ಎಂದು ಹೇಳಿದರೆ, ಇನ್ನು ಕೆಲವರು ಏಳನೇ ಬಕೆಟ್ ಎಂದು ಉತ್ತರ ಕೊಟ್ಟಿದ್ದಾರೆ. ಹಲವಾರು ಮಂದಿ ಬೇರೆ ಬೇರೆ ಬಕೆಟ್‌ಗಳನ್ನು ಉತ್ತರವಾಗಿ ನೀಡಿದ್ದಾರೆ. ಹಾಗಾದರೆ ಇದರಲ್ಲಿ ಮೊದಲು ತುಂಬುವ ಬಕೆಟ್ ಯಾವುದಿರಬಹುದು? ನೀವು ಕೂಡ ಐದು ಸೆಕೆಂಡುಗಳೊಳಗೆ ಉತ್ತರಿಸಲು ಪ್ರಯತ್ನಿಸಿ ನೋಡಿ.