Site icon Vistara News

Viral News : ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಕೂತಿದ್ದ ಬಾಲಕನ ಚಡ್ಡಿಯೊಳಗೇ ಹೋಗಿ ಕಚ್ಚಿದ ಇಲಿ! ಇಲ್ಲಿದೆ ವೈರಲ್‌ ವಿಡಿಯೊ

#image_title

ಹೈದರಾಬಾದ್:‌ ಇಲಿ ಅಪಾಯಕಾರಿ ಪ್ರಾಣಿಯೇನಲ್ಲವಾದರೂ ಅದನ್ನು ಕಂಡರೆ ಹೆದರುವವರು ಬಹಳಷ್ಟು ಮಂದಿಯಿದ್ದಾರೆ. ಇಲಿ ಇಲ್ಲಿ ಬಾಲಕ ಚಡ್ಡಿಯೊಳಗೇ ಹೋಗಿ ಕಚ್ಚಿ ಓಡಿದೆ! ಪ್ರಸಿದ್ಧ ಮ್ಯಾಕ್‌ಡೊನಾಲ್ಡ್ಸ್‌ ಅಂಗಡಿಯಲ್ಲಿ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲೆ ಸೆರೆಯಾಗಿದ್ದು, ವಿಡಿಯೊ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral News: ವ್ಯಕ್ತಿಯ ಹೊಟ್ಟೆಯಿಂದ ವೋಡ್ಕಾ ಬಾಟಲಿ ತೆಗೆದ ವೈದ್ಯರು, ಬಾಟಲಿ ಹೊಟ್ಟೆ ಸೇರಿದ್ದೇ ರೋಚಕ ಕತೆ
ತೆಲಂಗಾಣದ ಕೊಂಪಲ್ಲಿ ನಗರದಲ್ಲಿ ಈ ಘಟನೆ ನಡೆದಿದೆ. ತಂದೆ, ತಾಯಿ ಮತ್ತು 8 ವರ್ಷದ ಮಗ ಮ್ಯಾಕ್‌ಡೊನಾಲ್ಡ್ಸ್‌ಗೆ ಬಂದು ಕುಳಿತಿದ್ದರು. ಆಗ ಅಲ್ಲಿನ ಬಾತ್‌ರೂಮ್‌ನಿಂದ ಇಲಿಯೊಂದು ಓಡಿ ಬಂದಿದೆ. ಕುಟುಂಬ ಕುಳಿತಿದ್ದ ಟೇಬಲ್‌ ಕೆಳಗೆ ಅಡಗಿಕೊಳ್ಳಲು ಯತ್ನಿಸಿದ ಇಲಿ ಬಾಲಕ ತೊಟ್ಟಿದ್ದ ಶಾರ್ಟ್ಸ್‌ ಒಳಗೆ ನುಗ್ಗಿದೆ. ಅಲ್ಲಿ ಬಾಲಕನಿಗೆ ಎರಡು ಬಾರಿ ಕಚ್ಚಿ, ಅಲ್ಲಿಂದ ಹೊರ ಬಂದು ಬೇರೆಡೆ ಓಡಿ ಪರಾರಿಯಾಗಿದೆ.


ಈ ನಡುವೆ ಬಾಲಕನ ತಂದೆ ಇಲಿಯಿಂದ ಮಗನನ್ನು ರಕ್ಷಿಸಲು ಎಳೆದಾಡಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಾದ ತಕ್ಷಣ ಬಾಲಕನ ತಂದೆ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗೆಯೇ ಪೊಲೀಸ್‌ ಠಾಣೆಗೂ ತೆರಳಿ, ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Exit mobile version