Site icon Vistara News

Viral News : ಇವರು ಭಲೇ ಸ್ಟೂಡೆಂಟ್ಸ್, ಶಾಲೆಯನ್ನೇ ಮಾರಾಟಕ್ಕೆ ಇಟ್ಟಿದ್ದಾರೆ ನೋಡಿ!

school for sale advertisement

#image_title

ಬೆಂಗಳೂರು: ಈಗಿನ ಮಕ್ಕಳು ಜಾಣರಲ್ಲಿ ಜಾಣರು. 10-20 ವರ್ಷಗಳ ಹಿಂದೆ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳಿಗೂ ಈಗಿನ ಮಕ್ಕಳಿಗೂ ಭಾರೀ ವ್ಯತ್ಯಾಸವಿದೆ ಎನ್ನುವುದು ಗಮನಿಸಬಹುದಾದ ವಿಚಾರ. ತಂತ್ರಜ್ಞಾನವನ್ನು ನುಂಗಿ ನೀರು ಕುಡಿಯತ್ತಿರುವ ಈಗಿನ ಮಕ್ಕಳ ಕೈಯಲ್ಲಿ ಎಲ್ಲವೂ ಸಾಧ್ಯ. ಹಾಗೆಯೇ ತಾವು ಓದುತ್ತಿರುವ ಶಾಲೆಯನ್ನು ಮಾರಾಟಕ್ಕೆ ಇಡುವುದೂ ಸಾಧ್ಯ! ಅಂಥದ್ದೊಂದು ಜಾಹಿರಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral News) ಮಾಡುತ್ತಿದೆ.

ಅಮೆರಿಕದ ಮರಿಲ್ಯಾಂಡ್‌ನ ಮಿಯಾಡೆ ಹೈಸ್ಕೂಲ್‌ನ ವಿದ್ಯಾರ್ಥಿಗಳು ತಮ್ಮ ಶಾಲೆಯನ್ನೇ ಮಾರಾಟಕ್ಕೆ ಇಟ್ಟಿದ್ದಾರೆ. ಜಿಲ್ಲೋ ಹೆಸರಿನ ರಿಯಲ್‌ ಎಸ್ಟೇಟ್‌ ಆಪ್‌ನಲ್ಲಿ ಅದರ ಬಗ್ಗೆ ಜಾಹಿರಾತನ್ನೂ ಹಾಕಿದ್ದಾರೆ. ಶಾಲೆಯು 12,458 ಚ.ಅಡಿಯಷ್ಟು ದೊಡ್ಡವಿದ್ದು ಅದರ ಬೆಲೆ 34.6 ಲಕ್ಷ ರೂ. ಎಂದು ಹಾಕಲಾಗಿದೆ.

ಇದನ್ನೂ ಓದಿ: Viral News: ಚಿತೆಯ ಮೇಲಿನ ಶವಕ್ಕೆ ಅಗ್ನಿ ಸ್ಪರ್ಶ ಮಾಡಬೇಕು ಎನ್ನುವಷ್ಟರಲ್ಲೇ ಎದ್ದು ಕೂತ ಯುವಕ; ಓಡಿ ಹೋದ ಜನ
ಈ ಜಾಹಿರಾತಿನಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿರುವುದು ಶಾಲೆಯ ಬಗ್ಗೆ ಕೊಟ್ಟಿರುವ ವಿವರಣೆ. “ಇದರಲ್ಲಿ 20 ಬೆಡ್‌ರೂಂ ಹಾಗೂ 15 ಬಾತ್‌ರೂಂ ಇವೆ. ಎಲ್ಲ ಬಾತ್‌ರೂಂನಲ್ಲಿ ಸೀವೇಜ್‌ ತೊಂದರೆಯಿದೆ. ಅದಲ್ಲದೆ ನಿಮಗೆ ನೀರಿನ ತೊಂದರೆ, ದುರ್ವಾಸನೆ ಮತ್ತು ರಾಶಿ ರಾಶಿ ಕಸ ಬಾತ್‌ರೂಂನಲ್ಲಿ ಉಚಿತವಾಗಿ ಸಿಗುತ್ತದೆ.” ಎಂದು ಶಾಲೆಯ ಬಾತ್‌ರೂಂಗಳ ಬಗ್ಗೆ ವಿವರಣೆ ನೀಡಲಾಗಿದೆ.


“ಹಾಗೆಯೇ ಶಾಲೆಯ ಒಂದು ಭಾಗ ಇನ್ನೂ ಕಾಮಗಾರಿ ಮುಗಿಯದೇ ಇರುವ ಭಾಗವೂ ನಿಮಗೆ ಸಿಗುತ್ತದೆ. ಅದನ್ನು ಪೂರ್ತಿಗೊಳಿಸುವುದಕ್ಕೆ ನೀವು ಜೀವನ ಪೂರ್ತಿ ದುಡಿಯಬೇಕಾಗುತ್ತದೆ. ನಿಮಗೆ ಕ್ರಿಮಿ ಕೀಟಗಳೇ ನೆರೆ ಹೊರೆಯವರಾಗಿರುತ್ತಾರೆ. ಇದರಲ್ಲಿ ದೊಡ್ಡ ಅಡುಗೆ ಮನೆ ಇದ್ದು, ಖಾಸಗಿ ಬಾಸ್ಕೆಟ್‌ ಬಾಲ್‌ ಕೋರ್ಟ್‌ ಕೂಡ ಇದೆ” ಎಂದು ಜಾಹಿರಾತಿನಲ್ಲಿ ಇದೆ.

ಇದನ್ನೂ ಓದಿ: Viral News : ಫುಡ್‌ ಡೆಲಿವರಿಗೆ ಬಂದವನು ಪಾಟ್‌ ಒಡೆದ; ಮುಂದಾಗಿದ್ದು ಮನ ಮುಟ್ಟುವ ಕಥೆ
ಈ ಜಾಹಿರಾತಿನ ಪೋಸ್ಟ್‌ ಅನ್ನು ಅನ್ನೆ ಅರುಂಡೆಲ್‌ ಕೌಂಟಿ ಪಬ್ಲಿಕ್‌ ಸ್ಕೂಲ್‌ನ ವಕ್ತರರಾಗಿರುವ ಬಾಬ್‌ ಮೈಸರ್‌ ಹಂಚಿಕೊಂಡಿದ್ದಾರೆ. “ಮಕ್ಕಳು 3,84,824 ಚದರ ಅಡಿ ಇರುವ ಶಾಲೆಯನ್ನು ಇಷ್ಟು ಕಡಿಮೆ ಎಂದು ತೋರಿಸಿ, ಅತ್ಯಂತ ಕಡಿಮೆ ಬೆಲೆಗೆ ಮಾರಲು ಹೊರಟಿದ್ದಾರೆ. ಈ ಡೀಲ್‌ ಹೆಚ್ಚು ದಿನ ಉಳಿದುಕೊಳ್ಳುವುದಿಲ್ಲ. ಬೇಗ ಸೇಲ್‌ ಆಗಿ ಬಿಡುತ್ತದೆ” ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. “ಈಗಿನ ಮಕ್ಕಳು ಅಪ್ಪ ಅಮ್ಮನ ಮನೆಯನ್ನೂ ಮಾರುತ್ತಾರೆ, ಶಾಲೆಯನ್ನೂ ಮಾರಿಬಿಡುತ್ತಾರೆ” ಎಂದು ಜನರು ಮಾತನಾಡಲಾರಂಭಿಸಿದ್ದಾರೆ. ಹಾಗೆಯೇ, “ಇದು ಶಾಲೆಗೆ ಮಾಡಬಹುದಾದ ಬೆಸ್ಟ್‌ ಪ್ರಾಂಕ್‌” ಎಂದು ಕೆಲವರು ಹೇಳಿ ನಕ್ಕಿದ್ದಾರೆ.

Exit mobile version