Site icon Vistara News

Viral News : ಸ್ಯಾನಿಟರಿ ಪ್ಯಾಡ್‌ ಆರ್ಡರ್‌ ಮಾಡಿದ ಮಹಿಳೆಗೆ ಚಾಕೋಲೆಟ್‌ ಕುಕ್ಕೀಸ್‌ ಗಿಫ್ಟ್‌ ಕೊಟ್ಟ ಸ್ವಿಗ್ಗಿ

ಬೆಂಗಳೂರು: ಆನ್‌ಲೈನ್‌ ಫುಡ್‌ ಡೆಲಿವರಿ ಸಂಸ್ಥೆಯಾಗಿರುವ ಸ್ವಿಗ್ಗಿ ದಿನಸಿ ಸಾಮಾನುಗಳನ್ನೂ ಡೆಲಿವರಿ ಮಾಡುವುದಕ್ಕೆಂದು ಇನ್‌ಸ್ಟಾಮಾರ್ಟ್ ನಡೆಸುತ್ತಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಯಾವುದಾದರೂ ಸಾಮಾಗ್ರಿ ತಕ್ಷಣಕ್ಕೆ ಬೇಕೆಂದರೆ ನೀವು ಈ ಇನ್‌ಸ್ಟಾಮಾರ್ಟ್‌ನಲ್ಲಿ ಆರ್ಡರ್‌ ಹಾಕಬಹುದು. ಕೆಲವೇ ನಿಮಿಷಗಳಲ್ಲಿ ಆ ಸಾಮಾಗ್ರಿ ನಿಮ್ಮ ಕೈಸೇರಿಬಿಡುತ್ತದೆ. ಈ ಇನ್‌ಸ್ಟಾಮಾರ್ಟ್‌ ಇತ್ತೀಚೆಗೆ ಮಹಿಳೆಯೊಬ್ಬರ ಮುಖದಲ್ಲಿ ನಗು ತರಿಸಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ (Viral News) ಚರ್ಚೆಯಾಗಿದೆ.

ಸಮೀರಾ ಹೆಸರಿನ ಮಹಿಳೆ ಇತ್ತೀಚೆಗೆ ಇನ್‌ಸ್ಟಾಮಾರ್ಟ್‌ನಲ್ಲಿ ಸ್ಯಾನಿಟರಿ ಪ್ಯಾಡ್‌ ಅನ್ನು ಆರ್ಡರ್‌ ಮಾಡಿದ್ದಾರೆ. ಸರಿಯಾದ ಸಮಯದಲ್ಲಿ ಆ ವಸ್ತುವನ್ನು ಡೆಲಿವರಿ ಬಾಯ್‌ ಅವರ ಕೈಗೆ ತಂದಿಟ್ಟಿದ್ದಾನೆ. ಅದನ್ನು ತೆರೆದು ನೋಡಿದಾಗ ಸಮೀರಾಗೆ ಒಂದು ರೀತಿಯಲ್ಲಿ ಖುಷಿಯಾಗಗಿ, ಧನ್ಯತಾ ಭಾವ ಮೂಡಿದೆ.

ಇದನ್ನೂ ಓದಿ: Viral Video : ಸ್ಕೂಟಿಯಾಯ್ತು ಈಗ ಕಾರಿನ ಸನ್‌ರೂಫ್‌ನಲ್ಲೇ ಲವ್ವಿ ಡವ್ವಿ ಆಡಿದ ಲವ್‌ ಬರ್ಡ್ಸ್‌!

ಕೇವಲ ಸ್ಯಾನಿಟರಿ ಪ್ಯಾಡ್‌ ಆರ್ಡರ್‌ ಮಾಡಿದ್ದ ಸಮೀರಾಗೆ ಇನ್‌ಸ್ಟಾಮಾರ್ಟ್‌ ವತಿಯಿಂದ ಉಚಿತವಾಗಿ ಚಾಕೊಲೇಟ್‌ ಕುಕ್ಕೀಸ್‌ ಅನ್ನೂ ಕಳುಹಿಸಿಕೊಡಲಾಗಿದೆ. ಈ ವಿಚಾರವನ್ನು ಸಮೀರಾ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದು, “ಇದನ್ನು ಅಂಗಡಿಯವರು ಹಾಕಿದರೋ ಅಥವಾ ಇನ್‌ಸ್ಟಾಮಾರ್ಟ್‌ ಹಾಕಿಸಿದೆಯೋ ಗೊತ್ತಿಲ್ಲ” ಎಂದು ತಿಳಿಸಿದ್ದಾರೆ.
ಅದಕ್ಕೆ ಹಲವರು ಕಾಮೆಂಟ್‌ ಮಾಡಿದ್ದು, “ಇನ್‌ಸ್ಟಾಮಾರ್ಟ್‌ನವರೇ ಈ ರೀತಿ ಮಾಡುತ್ತಾರೆ. ತಮ್ಮ ಆಪ್‌ನ ಪ್ರಚಾರಕ್ಕಾಗಿ ಈ ರೀತಿ ಅವರು ಮಾಡುತ್ತಾರೆ” ಎಂದು ಹೇಳಿದ್ದಾರೆ. “ಅದೇನೇ ಆಗಿರಲಿ, ಕೊಂಡ ಒಂದು ವಸ್ತುವಿಗೆ ಉಡುಗೊರೆ ರೂಪದಲ್ಲಿ ಕುಕ್ಕೀಸ್‌ ಕಳಿಸಿದ್ದು ಒಂದೊಳ್ಳೆ ಆಲೋಚನೆ” ಎನ್ನುತ್ತಿದ್ದಾರೆ ನೆಟ್ಟಿಗರು.

Exit mobile version