ನ್ಯೂಯಾರ್ಕ್: ಅಮೆರಿಕದ ಮಹಾ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ 185 ಕಾಲೇಜುಗಳಲ್ಲಿ ಅಡ್ಮಿಶನ್‌ಗೆ ಆಹ್ವಾನ ಪಡೆದಿದ್ದು, 1 ಕೋಟಿ ಡಾಲರ್ ಸ್ಕಾಲರ್‌ಶಿಪ್ ಆಫರ್ ಪಡೆದಿದ್ದಾನೆ! ಗಿನ್ನೆಸ್ ದಾಖಲೆ ಪುಸ್ತಕದಲ್ಲಿ (Guinness world record) ತನ್ನ ಹೆಸರು ಬರೆಸಿಕೊಂಡಿರುವ ಇವನಿಗಿನ್ನೂ 16 ವರ್ಷ!
ಇವನ ಹೆಸರು ಡೆನಿಸ್ ಮಲಿಕ್ ಬಾರ್ನೆಸ್ (Dennis Maliq Barnes). ನ್ಯೂ ಆರ್ಲಿಯನ್ಸ್‌ನ ಇಂಟರ್‌ನ್ಯಾಷನಲ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿರುವ ಈತನ GPA 4.98ರಷ್ಟಿದೆ. ಜಿಪಿಎ (ಗ್ರೇಡ್ ಪಾಯಿಂಟ್ ಆವರೇಜ್) ಎಂದರೆ ಅಮೆರಿಕದ ಸ್ಕೂಲು ಕಾಲೇಜುಗಳ ಗ್ರೇಡ್ ವ್ಯವಸ್ಥೆ. ಇದು 0ಯಿಂದ 4ರವರೆಗಿರುತ್ತದೆ. 4 ಗರಿಷ್ಠ. ಆದರೆ ಈತ ಗಳಿಸಿರುವ ಗ್ರೇಡ್ 4.98! ವಿಶೇಷವೆಂದರೆ ಹೈಸ್ಕೂಲು ಕಲಿಕೆಯ ನಿಗದಿಯ ವಯಸ್ಸಿಗಿಂತ ಎರಡು ವರ್ಷ ಮುನ್ನವೇ ಈತ ಕಲಿಕೆ ಮುಗಿಸಿದ್ದಾನೆ!
ಸದ್ಯ ಈತ ಕಾರ್ನೆಲ್ ಯೂನಿವರ್ಸಿಟಿಯನ್ನು ತನ್ನ ಮುಂದಿನ ಶಿಕ್ಷಣಕ್ಕೆ ಆಯ್ದುಕೊಂಡಿದ್ದಾನೆ. ಅಲ್ಲಿ ಕಂಪ್ಯೂಟರ್ ಸೈನ್ಸ್ ಕಲಿತು ನಂತರ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಲಿಯುವುದು ಅವನ ಉದ್ದೇಶ.
ನಿಜಕ್ಕೂ ಅವನಿಗೆ ದಾಖಲೆ ಸೃಷ್ಟಿಸುವ ಯಾವುದೇ ಉದ್ದೇಶ ಇರಲಿಲ್ಲವಂತೆ. 2022ರ ಆಗಸ್ಟ್‌ನಲ್ಲಿ ಈತ ಕಾಲೇಜುಗಳಿಗೆ ಅರ್ಜಿ ಹಾಕಲು ಶುರುಮಾಡಿದ. ಎಲ್ಲ ಕಡೆಯಿಂದ ಅಂಗೀಕಾರ ಬರತೊಡಗಿದಂತೆ ಅವನಿಗೆ ಹುಮ್ಮಸ್ಸು ಹೆಚ್ಚಿ, ದಾಖಲೆ ಸೃಷ್ಟಿಸುವ ಆಸೆ ಮೂಡಿತಂತೆ. ಹೀಗೇ ಸ್ಕಾಲರ್‌ಶಿಪ್‌ಗಳ ಆಫರ್ ಕೂಡ ಬರತೊಡಗಿತು.
ಬಾರ್ನ್ಸ್ ಕಳೆದ ಎರಡು ವರ್ಷಗಳಲ್ಲಿ 27 ಕಾಲೇಜು ಕ್ರೆಡಿಟ್‌ಗಳನ್ನು ಪಡೆದಿದ್ದಾರೆ. ನ್ಯೂ ಆರ್ಲಿಯನ್ಸ್ ಸದರ್ನ್ ಯೂನಿವರ್ಸಿಟಿಯಲ್ಲಿ ದ್ವಿಗುಣ ದಾಖಲಾತಿ ಪಡೆದಿದ್ದಾರೆ. ನ್ಯೂ ಆರ್ಲಿಯನ್ಸ್ ಮೇಯರ್ ಲಾಟೋಯಾ ಕ್ಯಾಂಟ್ರೆಲ್ ಅವರ ಮೆಚ್ಚುಗೆ ಸೇರಿದಂತೆ ತನ್ನ ಶೈಕ್ಷಣಿಕ ಸಾಧನೆಗಾಗಿ ಹಲವು ಇಂಟರ್ನ್‌ಶಿಪ್ ಅವಕಾಶಗಳು ಮತ್ತು ಇತರ ಪುರಸ್ಕಾರಗಳನ್ನು ಪಡೆದಿದ್ದಾನೆ. ಹೆಚ್ಚಿನ ಸಾಧನೆ ಪಡೆಯಲು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಓಪ್ರಾ ವಿನ್‌ಫ್ರೇ ಅವರಿಂದ ಸಲಹೆಯನ್ನು ಪಡೆಯುವ ಆಸೆಯಂತೆ.
ಇದನ್ನೂ ಓದಿ: Guinness World Record: ವಿಶ್ವದ ಇಬ್ಬರ ದಾಖಲೆ ಮುರಿದು ಫುಟ್ಬಾಲ್‌ನಲ್ಲಿ ಗಿನ್ನಿಸ್ ದಾಖಲೆ ಸಾಧಿಸಿದ ದೇರಳಕಟ್ಟೆಯ ಯುವಕ