Site icon Vistara News

Viral News : ಹರಿದ ಜೀನ್ಸ್ ತೊಟ್ಟಿದ್ದ ವಿದ್ಯಾರ್ಥಿನಿ ಕಾಲಿಗೇ ಟೇಪ್ ಹಚ್ಚಿದ ಟೀಚರ್! ಆ ಸ್ಟೂಡೆಂಟ್ ತಾಯಿ ಮಾಡಿದ್ದೇನು?

#image_title

ವಾಷಿಂಗ್ಟನ್: ಶಾಲೆ ಎಂದ ಮೇಲೆ ಶಿಸ್ತಿರಬೇಕು. ಅದಕ್ಕೆಂದೇ ನಮ್ಮ ದೇಶದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿದೆ. ಆದರೆ ಅಮೆರಿಕದಂತಹ ದೇಶಗಳಲ್ಲಿ ಸಮವಸ್ತ್ರವಿಲ್ಲ. ಆದರೂ ಅಲ್ಲಿ ಕೂಡ ಡ್ರೆಸ್ ಕೋಡ್ ಇದೆ. ಫ್ಯಾಷನ್ ಹೆಸರಿನಲ್ಲಿ ಎಲ್ಲ ರೀತಿಯ ಬಟ್ಟೆ ತೊಟ್ಟು ಶಾಲೆಗೆ ಬರುವುದನ್ನು ನಿರ್ಬಂಧಿಸಲಾಗಿದೆ. ಹೀಗಿರುವಾಗ ಹರಿದ ಜೀನ್ಸ್ ತೊಟ್ಟು ಶಾಲೆಗೆ ಬಂದ ವಿದ್ಯಾರ್ಥಿನಿಯೊಬ್ಬಳ ಕಾಲಿಗೇ ಶಿಕ್ಷಕರು ಟೇಪ್ ಹಚ್ಚಿರುವ ಘಟನೆ (Viral News) ನಡೆದಿದೆ.

ಇದನ್ನೂ ಓದಿ: Viral video: 80ರ ವಯಸ್ಸಿನಲ್ಲಿ ಸೀರೆ ಉಟ್ಟು ಪಾರಾಗ್ಲೈಡಿಂಗ್‌ ಸಾಹಸ ಮಾಡಿದ ಅಜ್ಜಿ!
ಈ ಕುರಿತಾಗಿ ವಿದ್ಯಾರ್ಥಿನಿಯ ತಾಯಿಯೇ ಟಿಕ್ ಟಾಕ್ ಅಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ. “ನನ್ನ ಮಗಳು ಹರಿದ ಜೀನ್ಸ್ ಹಾಕಿಕೊಂಡು ಶಾಲೆಗೆ ಹೋಗಿದ್ದಳು. ಆದರೆ ಅಲ್ಲಿನ ಶಿಕ್ಷಕರು ಆಕೆಯ ಕಾಲು ಕಾಣದಂತೆ ಮಾಡುವುದಕ್ಕಾಗಿ ಪ್ಯಾಂಟು ಮತ್ತು ಕಾಲಿನ ಮೇಲೆ ಕೆಂಪು ಬಣ್ಣದ ದೊಡ್ಡ ಟೇಪ್ ಹಚ್ಚಿದ್ದಾರೆ. ಇದರಿಂದಾಗಿ ನನ್ನ ಮಗಳಿಗೆ ಚರ್ಮದಲ್ಲಿ ಅಲರ್ಜಿ ಉಂಟಾಗಿದೆ” ಎಂದು ಅವರು ಹೇಳಿದ್ದಾರೆ.

ಶಿಕ್ಷಕರ ಈ ನಡೆಯಿಂದಾಗಿ ಸಿಟ್ಟಿಗೆದ್ದಿರುವ ತಾಯಿ ಶಾಲೆಗೆ ತೆರಳಿ ಶಿಕ್ಷಕರೊಂದಿಗೆ ಜಗಳವಾಡಿದ್ದಾರೆ. “ಮಕ್ಕಳ ಕಾಲಿನ ಮೇಲೆ ಟೇಪ್ ಹಚ್ಚುವುದು ನಿಮ್ಮ ನಿಯಮಗಳಲ್ಲಿ ಇದೆಯೇ?” ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಒಂದು ವೇಳೆ ನನ್ನ ಮಗಳು ನಿಯಮ ಮೀರಿದ್ದಾದಲ್ಲಿ ಅವರು ನನ್ನನ್ನು ಕರೆಸಿ ಎಚ್ಚರಿಸಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಬಾರದಿತ್ತು. ನನ್ನ ಮಗಳು ಶಾಲೆಯಲ್ಲಿ ಈ ಟೇಪನ್ನು ಮುಚ್ಚಿಕೊಳ್ಳುವುದಕ್ಕೆಂದು ಕೋಟನ್ನು ಸೊಂಟಕ್ಕೆ ಕಟ್ಟಿಕೊಂಡು ಓಡಾಡಿದ್ದಾಳೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಎಸ್ಕಲೇಟರ್​​ನಲ್ಲಿ ನಾಯಿಮರಿ ಆಟ; ಹತ್ತೋದು-ಇಳಿಯೋದು ಸಖತ್​ ಕ್ಯೂಟ್​
ಈ ಮೊದಲೂ ಕೂಡ ತಮ್ಮ ಮಗಳು ಶಾಲೆಗೆ ಹರಿದ ಜೀನ್ಸ್ ಹಾಕಿಕೊಂಡು ಹೋಗುತ್ತಿದ್ದರು. ಆದರೆ ಇದುವರೆಗೆ ಏನೂ ಹೇಳಿರದ ಶಿಕ್ಷಕರು ಇದ್ದಕ್ಕಿದ್ದಂತೆ ಈ ರೀತಿ ಮಾಡಿದ್ದಾರೆ ಎಂದು ತಾಯಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಅವರ ವಿಡಿಯೊ ಎಲ್ಲೆಡೆ ಹರಿದಾಡಿದ್ದು, ವೈರಲ್ ಆಗಿದೆ.

Exit mobile version