ದೂರದಿಂದಲೇ ಹಾವನ್ನು (cobra) ನೋಡಿದರೂ ಸಾಕು ಕೆಲವರಂತೂ ಎದ್ದು ಬಿದ್ದು ಓಡುತ್ತಾರೆ. ಇನ್ನು ಕೆಲವರು ಸ್ವಲ್ಪ ಧೈರ್ಯವಂತರಾದರೆ ಯಾವ ಹಾವು ಎಂದು ಸ್ವಲ್ಪ ಹತ್ತಿರ ಹೋಗಿ ಪರಿಶೀಲಿಸುತ್ತಾರೆ. ಆದರೆ ಅದನ್ನು ಮುಟ್ಟುವ ಧೈರ್ಯ ಮಾತ್ರ ಯಾರಿಗೂ ಇರುವುದಿಲ್ಲ. ಅದಕ್ಕಾಗಿ ಉರಗ ತಜ್ಞರು ಅಥವಾ ಹಾವು ಹಿಡಿಯುವುದರಲ್ಲಿ ಪರಿಣಿತರಾಗಿರುವವರೇ ಬರಬೇಕು. ಆದರೆ ಇಲ್ಲೊಂದು ಕುಟುಂಬ ಮಾತ್ರ ನಿಜವಾದ ಕಾಳಿಂಗ ಹಾವನ್ನು (balck cobra) ಪೂಜಿಸಿ ಸಾಮಾಜಿಕ ಜಾಲತಾಣದಲ್ಲಿ (Viral News) ಎಲ್ಲರ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ನಗರ ಪಂಚಮಿ ದಿನ ಎಲ್ಲರೂ ನಾಗ ದೇವರನ್ನು ಪೂಜಿಸುತ್ತಾರೆ. ಕೆಲವರು ನಿಜವಾದ ನಾಗನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬ ಕಪ್ಪು ನಾಗರಹಾವು ಅತ್ಯಂತ ವಿಷಪೂರಿತ ಕಾಳಿಂಗ ಸರ್ಪಕ್ಕೆ ಪೂಜೆ ಸಲ್ಲಿಸಿ ಧೈರ್ಯ ತೋರಿದ್ದಾರೆ. ವಿವಿಧ ಧಾರ್ಮಿಕ ವಿಧಿ ವಿಧಾನದ ವೇಳೆ ಹಾವಿನ ಮೇಲೆ ಹಾಲು ಸುರಿಯುತ್ತಿದ್ದಾಗ ವ್ಯಕ್ತಿಯನ್ನು ಕಚ್ಚಲು ಹಾವು ಪ್ರಯತ್ನಿಸಿದೆ. ಆದರೆ ಆಶ್ಚರ್ಯವೆಂದರೆ ಇದು ಆ ವ್ಯಕ್ತಿಯನ್ನು ಕೊಂಚವೂ ವಿಚಲಿತಗೊಳಿಸಲಿಲ್ಲ. ಬದಲಿಗೆ ನೆರೆದಿದ್ದವರನ್ನೆಲ್ಲ ನಗುವಂತೆ ಮಾಡಿದೆ.
ಎದುರಿನ ತಟ್ಟೆಯಲ್ಲಿ ಕಾಳಿಂಗ ಹಾವು ಇದ್ದರೂ ಕೊಂಚವೂ ವಿಚಲಿತರಾಗದ ಕುಟುಂಬವು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಚಕರು ಸೂಚಿಸಿದಂತೆ ಮನೆ ಮಂದಿಯೆಲ್ಲ ಸೇರಿ ಹಾವಿನ ಎದುರು ಕುಳಿತು ಪೂಜೆ ಸಲ್ಲಿಸಿದರು. ಈ ದೃಶ್ಯಗಳು ಕೆಮರಾದಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಈ ವಿಡಿಯೋ ಅನೇಕ ನೆಟ್ಟಿಗರನ್ನು ಬೆರಗುಗೊಳ್ಳುವಂತೆ ಮಾಡಿದೆ. ಹಾವಿನ ಬಗ್ಗೆ ಅಸಡ್ಡೆಯ ವರ್ತನೆಗೆ ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆದರೆ ವಿಡಿಯೋ ನೋಡಿದ ವೀಕ್ಷಕರು ಅಪಾಯದ ನಡುವೆಯೂ ಕುಟುಂಬಕ್ಕೆ ಯಾವುದೇ ಭಯವಾಗದೇ ಇರುವುದು ಆಶ್ಚರ್ಯ ಮೂಡಿಸಿದೆ.
ಇನ್ ಸ್ಟಾ ಗ್ರಾಮ್ ನಲ್ಲಿ ಓಂಕಾರ್ ಸನಾತನಿ ಎಂಬಾತ ಹಂಚಿ ಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ನೋಡಿದ್ದಾರೆ. ಈ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಉಂಟು ಮಾಡಿದೆ.
4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿರುವ ಈ ವಿಡಿಯೋ ಗೆ “ಐಸಿ ಪೂಜಾ ಕರ್ನೆ ವಾಲೆ ಕೋ 21 ಟೋಪೋನ್ ಕಿ ಸಲಾಮಿ” ಎಂದು ಶೀರ್ಷಿಕೆ ನೀಡಲಾಗಿದೆ.
ಹಿಂದೂ ಧರ್ಮದಲ್ಲಿ ಹಾವುಗಳನ್ನು ಪೂಜಿಸುವುದರಿಂದ ಹಾವು ಕಡಿತ, ಅನಾರೋಗ್ಯ ಮತ್ತು ಕೆಟ್ಟ ಶಕ್ತಿಗಳಂತಹ ಅಪಾಯಗಳಿಂದ ರಕ್ಷಣೆ ಸಿಗುತ್ತದೆ ಎಂದು ಭಾವಿಸಲಾಗುತ್ತದೆ. ಸಮೃದ್ಧಿ, ಸಂತಾನ ಭಾಗ್ಯಕ್ಕಾಗಿ ಜನರು ಹಾವುಗಳನ್ನು ಪೂಜಿಸುತ್ತಾರೆ.
ಇದನ್ನೂ ಓದಿ: Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್ ಫಿದಾ!
ಭಾರತದಾದ್ಯಂತ ವಿವಿಧ ಹಬ್ಬಗಳು ಮತ್ತು ಸಮಾರಂಭಗಳು ನಾಗ ದೇವರನ್ನು ಪೂಜಿಸಲಾಗುತ್ತದೆ. ನಾಗ ಪಂಚಮಿಯು ಹಾವಿನ ಪೂಜೆಗೆ ಮೀಸಲಾದ ಹಬ್ಬವಾಗಿದೆ. ನಾಗ ಪಂಚಮಿಯ ಸಮಯದಲ್ಲಿ ಆರಾಧಕರು ಹಾವಿನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ, ಹಾಲು, ಹೂವುಗಳು, ಹಣ್ಣುಗಳು ಮತ್ತು ಇತರ ಉಡುಗೊರೆಗಳನ್ನು ನಾಗನಿಗೆ ಭಕ್ತಿ ಭಾವದಿಂದ ಅರ್ಪಿಸಲಾಗುತ್ತದೆ.