ಬೀಜಿಂಗ್: ನಾಯಿಗಳನ್ನು ಸಾಕುವುದು ಈಗ ಸಾಮಾನ್ಯ ವಿಚಾರ. ಮನೆಯ ಮಕ್ಕಳಂತೆಯೇ ನಾಯಿಗಳನ್ನು ಸಾಕುವವರಿದ್ದಾರೆ. ಆದರೆ ಚೀನಾದ ಮಹಿಳೆಯೊಬ್ಬರು ನಾಯಿ ಎಂದುಕೊಂಡು ಕರಡಿಯನ್ನೇ (Viral News) ಸಾಕಿದ್ದಾರೆ. ಅದು ಬೆಳೆಯುತ್ತ ಬೆಳೆಯುತ್ತ ಕರಡಿ ಎಂದು ಗೊತ್ತಾದಾಗ ಭಯದಿಂದ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ.
ಇದನ್ನೂ ಓದಿ: Viral Video: ಆಜಾನ್ ವೇಳೆ ಭಾಷಣ ನಿಲ್ಲಿಸಿದರೂ ನೀವು ಸೈತಾನ್ ಆಗಿಯೇ ಇರುತ್ತೀರಿ; ಪ್ರಧಾನಿ ಮೋದಿ ವಿರುದ್ಧ ಪಾಕ್ ಮಾಜಿ ಕ್ರಿಕೆಟರ್ ವಾಗ್ದಾಳಿ
ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್ ನಗರದ ಹೊರವಲಯದ ನಿವಾಸಿ ಸು ಯುನ್ ಅವರು 2016ರಲ್ಲಿ ʼನಾಯಿ ಮರಿʼಯೊಂದನ್ನು ತಂದಿದ್ದರು. ಟಿಬೆಟನ್ ಮಸ್ಟಿಫ್ ಎಂದು ಹೇಳಿ ಅವರಿಗೆ ಅದನ್ನು ಮಾರಾಟ ಮಾಡಲಾಗಿತ್ತು. ನಾಯಿಯನ್ನು ಮನೆಗೆ ತಂದ ಸು ಯುನ್ ಅವರಿಗೆ ಅದು ಬೆಳೆಯುತ್ತಿದ್ದಂತೆ ಆಶ್ಚರ್ಯದ ಜತೆ ಭಯ ಕಾಡಲಾರಂಭಿಸಿತು.
ಸು ಯುನ್ ಅವರು ಸಾಕಿದ್ದ ನಾಯಿ ಮರಿಗೆ ಎಷ್ಟು ಊಟ ಹಾಕಿದರೂ ಹಸಿವೇ ನೀಗುತ್ತಿರಲಿಲ್ಲವಂತೆ. ದಿನಕ್ಕೆ ಒಂದು ಬಾಕ್ಸ್ ಹಣ್ಣು ಹಾಗೂ ಎರಡು ಬಕೆಟ್ ನೂಡಲ್ಸ್‌ನ್ನು ನಾಯಿ ತಿನ್ನುತ್ತಿತ್ತಂತೆ. ಬರಬರುತ್ತಾ ನಾಯಿ ಎರಡೇ ಕಾಲಿನಲ್ಲಿ ನಿಂತು, ನಡೆಯಲಾರಂಭಿಸಿದೆ. ಇದನ್ನು ಕಂಡ ಸು ಯುನ್‌ಗೆ ನಾಯಿಯ ಬಗ್ಗೆ ಭಯ ಹುಟ್ಟಿದೆ. ಅದೇ ಭಯದಿಂದ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಇದನ್ನೂ ಓದಿ: Viral News : ಯೂಟ್ಯೂಬ್ ವಿಡಿಯೊ ನೋಡಿಕೊಂಡು ಮನೆಯಲ್ಲೇ ಹೆರಿಗೆ ಮಾಡಿಕೊಂಡ ಬಾಲಕಿ! ಶಿಶುವನ್ನು ಕೊಂದು ಬಾಕ್ಸ್‌ನಲ್ಲಿಟ್ಟಳು!
ಸ್ಥಳಕ್ಕೆ ಬಂದ ಪೊಲೀಸರು ಅರಣ್ಯ ಅಧಿಕಾರಿಗಳ ಸಹಾಯದೊಂದಿಗೆ ನಾಯಿಯನ್ನು ಪರಿಶೀಲನೆ ಮಾಡಿದಾಗ ಅದು ನಾಯಿಯಲ್ಲ, ಕರಡಿ ಎನ್ನುವ ವಿಚಾರ ತಿಳಿದು ಬಂದಿದೆ. ಅದರಲ್ಲೂ ಆ ಕರಡಿ ಹಿಮಾಲಯನ್ ಕರಡಿ ತಳಿಗೆ ಸೇರಿರುವುದು ಎನ್ನುವ ವಿಚಾರ ಗೊತ್ತಾಗಿದೆ. ಕರಡಿಗೆ ನಿದ್ರೆ ಬರುವಂತೆ ಮಾಡಿ, ನಂತರ ಅದನ್ನು ಕಾಡು ಪ್ರಾಣಿಗಳ ಅಭಯಾರಣ್ಯಕ್ಕೆ ಕರೆದುಕೊಂಡು ಹೋಗಿ ಬಿಡಲಾಗಿದೆ!