Site icon Vistara News

Viral Post: ಹೆಂಡತಿಯೇ ತಂಗಿ! ಮದುವೆಯಾಗಿ ಆರು ವರ್ಷಗಳ ಬಳಿಕ ಸತ್ಯ ಬಯಲಾದದ್ದು ಹೇಗೆ?

viral post

ಕೆಲವೊಮ್ಮೆ ಜೀವನ ಊಹಿಸಲಾಗದಷ್ಟು ವಿಚಿತ್ರವೂ ದಾರುಣವೂ ಆಗಿರುತ್ತದೆ. ಇಲ್ಲೊಂದು ದಂಪತಿಗೆ ಹೀಗಾಗಿದೆ. ಇವರಿಬ್ಬರಿಗೂ ಮದುವೆಯಾಗಿ ಆರು ವರ್ಷಗಳಾಗಿವೆ. ಮಕ್ಕಳೂ ಆಗಿವೆ. ಈಗ ಬಯಲಾಗಿರುವ ಸತ್ಯವೆಂದರೆ ಆಕೆ ಅವನ ಸೋದರಿ ಎಂಬುದು!

ರೆಡ್ಡಿಟ್‌ ಎಂಬ ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿ ತನ್ನ ಸಂಕಟ, ಯಾತನೆಯನ್ನು ಹೇಳಿಕೊಂಡಿದ್ದಾನೆ. ಅಂದ ಹಾಗೆ, ಈ ಸತ್ಯ ಬಯಲಾದದ್ದಾದರೂ ಹೇಗೆ? ಆತನೇ ಬರೆದುಕೊಂಡಿರುವಂತೆ ಇಲ್ಲಿದೆ:

ʼʼನಮಗೆ ಮಗ ಹುಟ್ಟಿದ ಬಳಿಕ ನನ್ನ ಪತ್ನಿ ಕಾಯಿಲೆಗೀಡಾದಳು. ಆಕೆಯ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಮಾಡಬೇಕಾಗಿ ಬಂತು. ಆಕೆಯ ಸಂಬಂಧಿಕರಲ್ಲಿ ವಿಚಾರಿಸಿದೆವು. ಯೋಗ್ಯ ದಾನಿಗಳ್ಯಾರೂ ಸಿಗಲಿಲ್ಲ. ನನ್ನ ಪೋಷಕರಿಗೆ ನಾನು ದತ್ತು ಮಗ. ನಾನು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ನನ್ನನ್ನು ದತ್ತು ಪಡೆಯಲಾಗಿತ್ತು. ನನ್ನ ಜೈವಿಕ ತಂದೆತಾಯಿಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಹೀಗಾಗಿ, ನಾನು ಕಿಡ್ನಿ ದಾನ ಮಾಡಬಹುದಾ ಎಂದು ಪ್ರಯತ್ನಿಸಲು ನಿರ್ಧರಿಸಿದೆ.ʼʼ

ʼʼನಾನು ಕಿಡ್ನಿ ದಾನ ಮಾಡಬಹುದು ಎಂಬ ಸಕಾರಾತ್ಮಕ ಉತ್ತರ ವೈದ್ಯರಿಂದ ಸಿಕ್ಕಿತು. ನಂತರ, ಇದಕ್ಕೆ ಸಂಬಂಧಿಸಿ ಹೆಚ್ಚುವರಿ HLA (ಹ್ಯೂಮನ್‌ ಲ್ಯೂಕೋಸೈಟ್‌ ಆಂಟಿಜೆನ್)‌ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯರು ಹೇಳಿದರು. ಅದನ್ನೂ ಮಾಡಿಸಿದೆ. ಅದರಲ್ಲಿ ಬಂದ ಫಲಿತಾಂಶದ ಪ್ರಕಾರ ನನ್ನ ಮತ್ತು ಪತ್ನಿಯ ಡಿಎನ್‌ಎಗಳು ಅಸಹಜವೆನಿಸುವಷ್ಟು ಹೊಂದಾಣಿಕೆಯಾಗಿದ್ದವು. ನನಗೆ ಆಘಾತ ಹಾಗೂ ಗೊಂದಲವಾಯಿತು. ಡಿಎನ್‌ಎ ಮಾಹಿತಿ ತುಂಬಾ ಖಚಿತವಾಗಿರುತ್ತದೆ. ಹೆತ್ತವರು- ಮಕ್ಕಳ ಡಿಎನ್‌ಎ ಶೇ.50ರಷ್ಟು ಮ್ಯಾಚ್‌ ಆದರೆ, ಸೋದರ- ಸೋದರಿಯರ ಡಿಎನ್‌ಎ ಶೇ.100ರವರೆಗೂ ಮ್ಯಾಚ್‌ ಆಗಬಹುದು. ಆದರೆ ಗಂಡ- ಹೆಂಡತಿಯ ಡಿಎನ್‌ಎ ಯಾವ ರೀತಿಯಲ್ಲೂ ಮ್ಯಾಚ್‌ ಆಗಲು ಸಾಧ್ಯವಿಲ್ಲ.ʼʼ

ʼʼಇದರರ್ಥ ಇಷ್ಟೇ, ಯಾವುದೋ ರೀತಿಯಲ್ಲಿ ನಾವು ಒಡಹುಟ್ಟಿದವರಾಗಿದ್ದೇವೆ. ಈಗ ಮುಂದುವರಿಯುವುದು ಹೇಗೆ ಎಂಬುದು ನನಗೆ ಹೊಳೆಯತ್ತಿಲ್ಲ. ನಾವಿಬ್ಬರೂ ಲೋಕದ ಕಣ್ಣಿಗೆ ಈಗ ಪತಿ ಪತ್ನಿಯರು ಹಾಗೂ ನಮಗೆ ಮಕ್ಕಳೂ ಇದ್ದಾರೆʼʼ

ಈ ವ್ಯಕ್ತಿಯ ಯಾತನೆಗೆ ಕೆಲವು ಸಮಾಧಾನ ಹೇಳಿದ್ದಾರೆ. ʼʼನೀವು ಜೀವನದಲ್ಲಿ ತುಂಬಾ ಮುಂದೆ ಸಾಗಿದ್ದೀರಿ. ಮಕ್ಕಳೂ ಇದ್ದಾರೆ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿʼʼ ಎಂದು ಹೆಚ್ಚಿನವರು ಸಲಹೆ ನೀಡಿದ್ದಾರೆ. ʼʼನಿಮ್ಮ ಪತ್ನಿಗೆ ಕಿಡ್ನಿ ಕೊಟ್ಟುಬಿಡಿ, ನೆಮ್ಮದಿಯಾಗಿರಿ. ಬದುಕನ್ನು ಬದಲಾಯಿಸಲು ಹೋಗಬೇಡಿʼʼ ಎಂದು ಇನ್ನಷ್ಟು ಮಂದಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Viral Video : ಸಿಂಹದ ಬೋನಿನೊಳಗೇ ಬೆರಳಿಟ್ಟ ವ್ಯಕ್ತಿ! ಮುಂದೇನಾಯ್ತು? ವಿಡಿಯೊ ನೋಡಿ

Exit mobile version