ಇಂಥದ್ದೊಂದು ಐಡಿಯಾ ಯಾರಿಗೆ ಹೊಳೆದಿದೆಯೋ ಗೊತ್ತಿಲ್ಲ! ಆದರೆ ಈತ ಮಾತ್ರ ಐಡಿಯಾವನ್ನು ಕಾರ್ಯರೂಪಕ್ಕೆ ತಂದಿದ್ದಾನೆ. ನಾವೆಲ್ಲ ಕತ್ತಲಲ್ಲಿ ನಡೆದಾಡಲು ಮೊಬೈಲ್ ಟಾರ್ಚನ್ನೋ ಅಥವಾ ಇನ್ನೇನನ್ನೋ ಬಳಸಿ ಬೆಳಕು ಕಾಣುವಂತೆ ಮಾಡಿಕೊಂಡರೆ, ಈತ ಕತ್ತಲಾದ ತನ್ನ ಕಣ್ಣನ್ನೇ ಬೆಳಕಾಗಿ ಪರಿವರ್ತಿಸಿದ್ದಾನೆ!
ಕಣ್ಣುಗಳೆರಡು ದೀಪದಂತೆ ಎಂಬ ಕವಿವಾಣಿಯನ್ನು ಈತ ಅಕ್ಷರಶಃ ಪಾಲಿಸಿದ್ದಾನೆ. ತನ್ನ ಕಣ್ಣೇ ಈತನಿಗೆ ಕತ್ತಲಲ್ಲಿ ದಾರಿ ತೋರಿ ನಡೆಸುವ ಬೆಳಕು. ಕಣ್ಣು ಹೋದರೇನಂತೆ, ಇನ್ನೊಂದು ಇದೆಯಲ್ಲ ಎಂದುಕೊಂಡು, ಒಂದು ಕಣ್ಣಿಗೆ ಕತ್ತಲಲ್ಲಿ ಬೆಳಕು ನೀಡುವ ಕಾರ್ಯವನ್ನು ಸಾಧಿಸಿದ್ದಾನೆ.
ಅರ್ಥವಾಗಲಿಲ್ಲವೇ? ಏನಿದು ಎಂದು ತಲೆಕೆಡಿಸಿಕೊಂಡಿರಾ? ಹಾಗಾದರೆ ಇಲ್ಲಿ ಕೇಳಿ. 33ರ ಹರೆಯದ ಯುಎಸ್ ನಿವಾಸಿ ಬ್ರಿಯಾನ್ ಸ್ಟ್ಯಾನ್ಲಿ ಎಂಬಾತ ಕ್ಯಾನ್ಸರ್ ಕಾಯಿಲೆಯಿಂದಾಗಿ ತನ್ನ ಒಂದು ಕಣ್ಣನ್ನು ಕಳೆದುಕೊಂಡಿದ್ದ. ಆದರೆ, ಈತ ಕಳೆದುಕೊಂಡ ಕಣ್ಣನ್ನೇ ಈತ ಬೆಳಕಾಗಿಸಿದ್ದಾನೆ. ದೃಷ್ಟಿ ಹೋದ ಅದೇ ಕಣ್ಣನ್ನು ಆತ ಫ್ಲ್ಯಾಷ್‌ಲೈಟಾಗಿ ಬದಲಾಯಿಸಿಕೊಂಡಿದ್ದಾನೆ! ಹೇಗೆ ಅಂತೀರಾ? ಹಾಗಾದರೆ ಇಲ್ಲಿ ಕೇಳಿ.
ಎಂಜಿನಿಯರ್ ವೃತ್ತಿಯಲ್ಲಿರುವ ಈತನಿಗೆ ಯಾವಾಗಲೂ ಹೊಸತನ್ನು ಅನ್ವೇಷಿಸುತ ತುಡಿತ. ಇನ್ನು ಪ್ರಯೋಜನಕ್ಕೆ ಬಾರದೆಂಬ ಸತ್ಯದ ಅರಿವಿದ್ದ ತನ್ನ ಕಣ್ಣನ್ನು ಹೇಗೆ ಪ್ರಯೋಜನಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಯೋಚಿಸಿದಾಗ ಈತನಿಗೆ ಈ ಐಡಿಯಾ ಹೊಳೆದಿದೆ. ಅದರ ಫಲವಾಗಿ, ಪ್ರಕೃತಿ ಸಹಜವಾಗಿ ಬೆಳಕಾಗಬೇಕಿದ್ದ ಕಣ್ಣನ್ನು ಕೃತಕವಾಗಿ ಬೆಳಕು ನೀಡುವ ಅಂಗವಾಗಿಯೇ ಬದಲಾಯಿಸಿಕೊಂಡಿದ್ದಾನೆ. ಈತನ ತನ್ನ ಕಣ್ಣುಗುಡ್ಡೆಯನ್ನು ಹೆಡ್‌ಲ್ಯಾಂಪ್ ಆಗಿ ಬದಲಾಯಿಸಿಕೊಂಡಿದ್ದಾನೆ. ಬ್ಯಾಟರಿ ಚಾಲಿತ ಈ ಲೈಟನ್ನು ಕಾಂಟಾಕ್ಟ್ ಲೆನ್ಸ್ ಧರಿಸುವ ಮಾದರಿಯಲ್ಲಿ ಕಣ್ಣಿನೊಳಗೆ ಧರಿಸಿಕೊಂಡರೆ ಆಯಿತು. ಕಣ್ಣುಗುಡ್ಡೆಯೇ ಬೆಳಕು ನೀಡಿದಂತೆ ಝಗಮಗಿಸುತ್ತದೆ. ಕತ್ತಲಲ್ಲಿ ಯಾವ ಟಾರ್ಚಿಗೂ ಕಮ್ಮಿಯಿಲ್ಲವೆಂಬಂತೆ ಪ್ರಕಾಶವಾಗಿ ಬೆಳಗುತ್ತದೆ. ಪುಸ್ತಕ ಓದಲೂ ಸಾಕಾಗುವಷ್ಟು ಬೆಳಕನ್ನು ಇದು ನೀಡುತ್ತದಂತೆ!
ಈತ ತನ್ನ ಕಣ್ಣುಗುಡ್ಡೆಗೆ ಅಳವಡಿಸಿಕೊಂಡ ಈ ಹೆಡ್‌ಲ್ಯಾಂಪ್ ಕೆಲಸ ಮಾಡುವ ವಿದಾನವನ್ನು ವಿಡಿಯೋ ಮಾಡಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇದು ವೈರಲ್ ಆಗಿದೆ. ಕೇವಲ ಎರಡು ದಿನಗಳಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಮಂದಿಯಿಂದ ವೀಕ್ಷಣೆ ಕಂಡಿದ್ದು ಹಲವರು ಈತನ ಈ ಐಡಿಯಾಕ್ಕೆ ಮನಸೋತಿದ್ದಾರೆ. ಇದೊಂದು ಗ್ರೇಟ್ ಐಡಿಯಾ ಎಂದು ಹೊಗಳಿದ್ದಾರೆ.
ಸ್ಟ್ಯಾನ್ಲಿ ಹೇಳುವ ಪ್ರಕಾರ ಈ ಟೈಟಾನಿಯಂ ಸ್ಕಲ್ ಲ್ಯಾಂಪ್ ಕತ್ತಲಲ್ಲಿ ಓದಲು ಕೂಡಾ ಈತನಿಗೆ ನೆರವಾಗುತ್ತದೆ. ಇದರ ಬ್ಯಾಟರಿ ಲೈಫ್ 20 ಗಂಟೆಗಳಾಗಿದ್ದು, ಇದು ಸತತವಾಗಿ ಉರಿದರೆ ಬಿಸಿಯೂ ಆಗುವುದಿಲ್ಲ ಎಂದಿದ್ದಾನೆ. ಸ್ಟ್ಯಾನ್ಲಿ ಇದೇ ಮೊದಲು ಹೀಗೆ ಕಣ್ಣಿಗೆ ಸೈಬೋರ್ಗ್ ಐ ಮಾಡಿಕೊಂಡಿಲ್ಲ. ಈ ಮೊದಲೂ ಈತ ಈ ಪ್ರಯೋಗಕ್ಕೆ ಕೈ ಹಾಕಿದ್ದು, ಅದು ಟರ್ಮಿನೇಟರ್ ಸಿನಿಮಾದಲ್ಲಿ ನಟ ಅರ್ನಾಲ್ಡ್‌ಗೆ ಬಳಸಲಾದಂಥದ್ದೇ ಬೆಳಕನ್ನು ಹೊಂದಿತ್ತು.
ಇದನ್ನೂ ಓದಿ: Viral Post: ಹೆಂಡತಿಯೇ ತಂಗಿ! ಮದುವೆಯಾಗಿ ಆರು ವರ್ಷಗಳ ಬಳಿಕ ಸತ್ಯ ಬಯಲಾದದ್ದು ಹೇಗೆ?
ಈತ ಪೋಸ್ಟ್ ಮಾಡಿದ ಈ ವಿಡಿಯೋಗೆ ಕೆಲವರು, ʻಕ್ಯಾಂಪಿಂಗ್ ವೇಳೆಯಲ್ಲಿ ಈ ಐಡಿಯಾ ಅದ್ಭುತವಾಗಿ ಉಪಯೋಗಕ್ಕೆ ಬರಬಹುದಲ್ಲವೇ ಎಂದು ನಾನು ಯೋಚಿಸುತ್ತಿದ್ದೇನೆ!ʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻಇದರ ಉಪಯೋಗ ಎಂದರೆ, ಕತ್ತಲಲ್ಲಿ ಬೆಳಕಿಗೆ ನಾವು ಬೇರೆಯವರನ್ನು ಆಶ್ರಯಿಸಬೇಕಾಗಿಲ್ಲ. ಆದರೆ, ತೊಂದರೆ ಎಂದರೆ, ಎಂಥ ಭಯದ ಸಂದರ್ಭ ಬಂದರೆ, ಜನರೆಲ್ಲ, ಲೈಟಿನ ಕಣ್ಣಿನವನಾದ ನಿಮ್ಮನ್ನೇ ಮುಂದೆ ತಳ್ಳಬಹುದುʼ ಎಂದು ನಗೆಯಾಡಿದ್ದಾರೆ!
ಈ ಗ್ಯಾಜೆಟ್ ಪ್ರೇಮಿ, ತಾನೇ ಇದನ್ನು ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿದ್ದು, ಇದಕ್ಕಾಗಿ ಸಾಲಿಡ್ ಟೈಟಾನಿಯಂ ಬಿಲ್ಲೆಟ್ ಬಳಸಿಕೊಂಡಿದ್ದಾಗಿ ಹೇಳಿದ್ದಾನೆ. ಕಳೆದೆರಡು ವರ್ಷಗಳಿಂದ ಇದನ್ನು ಬಳಸುತ್ತಿದ್ದು, ನನಗಿದು ಬಹಳ ಉಪಯೋಗಕ್ಕೆ ಬಂದಿದೆ. ಹಾಗೂ ಈವರೆಗೂ ಯಾವುದೇ ತೊಂದರೆ ಕೊಟ್ಟಿಲ್ಲ. ನನ್ನ ಮೂಗು ಹಾಗೂ ಹುಬ್ಬುಗಳು ಈ ಬೆಳಕಿನಿಂದ ನನ್ನ ಇನ್ನೊಂದು ಕಣ್ಣಿಗೆ ರಕ್ಷಣೆಯನ್ನೂ ನೀಡುತ್ತವೆ.
ಇದನ್ನೂ ಓದಿ: Viral Post: ಜ್ಯೂಸ್ ಕುಡಿಯಿರಿ, ಯುಟ್ಯೂಬ್ ಚಾನಲ್ ಸಬ್‌ಸ್ಕ್ರೈಬ್ ಮಾಡಿ ರಿಯಾಯಿತಿ ಪಡೆಯಿರಿ!