Site icon Vistara News

Viral Story | ಇಳಿದ ತಾಪಮಾನ, ಮಂಜುಗಡ್ಡೆಯಾದ ನಯಾಗರ ಜಲಪಾತ

niagara falls

ನ್ಯೂಯಾರ್ಕ್:‌ ಅಮೆರಿಕದ ನ್ಯೂಯಾರ್ಕ್‌ ಮುಂತಾದ ಕಡೆ ತಾಪಮಾನ ಸಿಕ್ಕಾಪಟ್ಟೆ ಇಳಿಕೆಯಾಗಿದ್ದು, ವಿಶ್ವಖ್ಯಾತಿಯ ನಯಾಗರ ಜಲಪಾತ ಹಲವು ಭಾಗ ಕೆಲವು ಕಾಲ ಮಂಜುಗಡ್ಡೆಯಾಗಿರುವುದು ಕಂಡುಬಂತು.

ಕೆನಡಾ, ಅಮೆರಿಕಗಳಲ್ಲಿ ಈ ವರ್ಷದ ಚಳಿಗಾಲದ ತಾಪಮಾನ ದಾಖಲೆ ಇಳಿಕೆ ಮಾಡಿದೆ. ಗರಿಷ್ಠ ಇಳಿಕೆಯಾಗಿದ್ದರೂ ನಯಾಗರ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಗರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಮಂಜುಗಟ್ಟಿರುವ ನಯಾಗರದ ಮೈ ನವಿರೇಳಿಸುವ ಫೋಟೋ, ವಿಡಿಯೋಗಳನ್ನು ನೆಟಿಜೆನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುತ್ತಿದ್ದಾರೆ.

167 ಅಡಿ ಎತ್ತರದ ನಯಾಗರದ ಸುತ್ತಮುತ್ತ ಹಾಗೂ ಅಡಿಭಾಗದ ನೀರು ಐಸ್ ಆಗಿದೆ. ನೋಡಬಂದವರು ಫೋಟೋ, ವಿಡಿಯೋಗಳನ್ನು ʼಎಂದಿಗಿಂತ ಭವ್ಯವಾಗಿ ಕಾಣುತ್ತಿದೆʼ ಎಂದು ಅಡಿಬರಹದೊಂದಿಗೆ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭವ್ಯವಾದ ಜಲಪಾತದ ಏರಿಯಲ್‌ ವಿಡಿಯೋ ಕೂಡ ಲಭ್ಯವಾಗಿದೆ.

ಕೆನಡಾ ಹಾಗೂ ಅಮೆರಿಕದ ಗಡಿಭಾಗದಲ್ಲಿರುವ ನಯಾಗರ, ಮೂರು ಜಲಪಾತಗಳ ಸಂಗಮವಾಗಿದೆ. ಹಾರ್ಸ್‌ಶೂ ಜಲಪಾತ ಕೆನಡಾ ಭಾಗದಲ್ಲಿದೆ. ಅಮೆರಿಕನ್‌ ಫಾಲ್ಸ್‌ ಹಾಗೂ ಬ್ರೈಡಲ್‌ ವೇಲ್‌ ಫಾಲ್ಸ್‌ಗಳು ಅಮೆರಿಕ ಭಾಗದಲ್ಲಿವೆ. ಜಲಪಾಯದ ಬಹುಭಾಗ ಕನಿಷ್ಠ ತಾಪಮಾನದಲ್ಲಿ ಐಸ್‌ಗಟ್ಟುತ್ತದಾದರೂ, ನೀರೆಲ್ಲವೂ ಮಂಜಾದ ನಿದರ್ಶನ 1848ರಲ್ಲಿ ಒಮ್ಮೆ ಮಾತ್ರ ದಾಖಲಾಗಿದೆ.

ಇದನ್ನೂ ಓದಿ | Jog Falls Hanuman | ಜೋಗ ಜಲಪಾತದಲ್ಲಿ ಕಂಡ ರಾಮನ ಬಂಟ ಹನುಮ; ವಿಸ್ಮಯ ಕಂಡು ಬೆರಗಾದ ಪ್ರವಾಸಿಗರು

Exit mobile version