Site icon Vistara News

Viral post | 380 ಅಡಿ ಎತ್ತರದ ಜಲಪಾತದ ತುದಿಯಲ್ಲಿ ನೀರ ಮೇಲೆ ನಿಂತ ನೀರೆ!

victoria falls

೩೮೦ ಅಡಿ ಎತ್ತರದ ಜಲಪಾತದ ಮೇಲಿನ ತುದಿಯಲ್ಲಿ ನಿಂತರೆ ಹೇಗಿರಬಹುದು ಊಹಿಸಿ, ಅದೂ ನೀರು ಹರಿಯುವ ಜಾಗದಲ್ಲಿ! ಇಂಥದ್ದೊಂದು ಮೈಜುಂ ಎನಿಸುವ ವಿಡಿಯೋವೊಂದು ಈಗ ವೈರಲ್‌ ಆಗಿದೆ. ಮಿಲಿಯಗಟ್ಟಲೆ ಜನ ಈ ವಿಡಿಯೋವನ್ನು ವೀಕ್ಷಿಸಿದ್ದು ಇದನ್ನು ನೋಡಲೇ ಭಯವಾಗುತ್ತಿದೆ ಎಂದರೆ ಅಲ್ಲಿದ್ದವರ ಗುಂಡಿಗೆ ಎಷ್ಟು ಗಟ್ಟಿಯಿರಬಹುದು ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನೂ ಕೆಲವರು ಈ ಮಟ್ಟಿಗಿನ ರಿಸ್ಕು ಬದುಕಿನಲ್ಲಿ ಬೇಕಾ ಎಂಬ ಪ್ರಶ್ನೆಯನ್ನೂ ಇಲ್ಲಿ ಎತ್ತಿದ್ದಾರೆ.

ವಿಡಿಯೋನಲ್ಲಿ ಮಹಿಳೆಯೊಬ್ಬಳು ೩೮೦ ಅಡಿ ಎತ್ತರದ ಜಲಪಾತದ ಮೇಲೆ ತುದಿಯಲ್ಲಿ ಈಜುತ್ತಿರುವಂತಿರುವ ವಿಡಿಯೋ ಇದೆ. ಜಲಪಾತದ ಡ್ರೋನ್‌ ಶಾಟ್‌ ಇದರಲ್ಲಿದ್ದು, ಆಕೆ ನಿಂತ ಜಾಗದಿಂದಲೇ ನೀರು ರಭಸವಾಗಿ ೩೮೦ ಅಡಿ ಆಳಕ್ಕೆ ಧುಮ್ಮಿಕ್ಕುತ್ತಿದೆ. ಈ ದೃಶ್ಯ ನೋಡಿದರೆ ಎಂಥವರ ಮೈಯೂ ನಡುಗೀತು. ಅಂತಹ ಜಾಗದಲ್ಲಿ ನಿಂತಿರುವ ಈಕೆಯ ಧೈರ್ಯವನ್ನು ಹಲವರು ಕೊಂಡಾಡಿದರೆ, ಇನ್ನೂ ಬಹುತೇಕರು ಇಂತಹ ಸಾಹಸಗಳೆಲ್ಲ ಬೇಕೇ? ಎಂಬಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಝಾಂಬಿಯಾ- ಜಿಂಬಾಬ್ವೆ ಗಡಿಯಲ್ಲಿರುವ ವಿಕ್ಟೋರಿಯಾ ಜಲಪಾತ ಡೆವಿಲ್ಸ್‌ ಪೂಲ್‌ ಎಂದೇ ಜಗತ್ಪ್ರಸಿದ್ಧ. ಇಂಥ ಜಲಪಾತದಲ್ಲಿ ಜೀವಕ್ಕೆ ಅಪಾಯವಿರುವ ಸ್ಥಳದಲ್ಲಿ ಆಕೆ ಆರಾಮವಾಗಿ ನೀರಲ್ಲಿ ನಿಂತಿರುವುದು ಈ ವಿಡಿಯೋ ನೋಡಿದ ಅನೇಕರನ್ನು ಕಳವಳಗೊಳಿಸಿದೆ.

ಟ್ವಿಟರ್‌ ಸಾಮಾಜಿಕ ಜಾಲತಾಣದಲ್ಲಿ ವೀಯರ್ಡ್‌ ಅಂಡ್‌ ಟೆರಿಫೈಯಿಂಗ್‌ ಎಂಬ ಪೇಜ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದ್ದು ೧೯ ಮಿಲಿಯನ್‌ ಜನರಿಂದ ವೀಕ್ಷಿಸಲ್ಪಟ್ಟಿದೆ. ೩೮೦ ಅಡಿ ಆಳಕ್ಕೆ ಧುಮುಕುವ ಜಲಪಾತದ ತುದಿಯಲ್ಲಿ ಎಂಬ ತಲೆಬರಹದೊಂದಿಗೆ ಇದನ್ನು ಪೋಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ | Viral News | 1987ರಲ್ಲಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ? ಹಳೆ ದಾಖಲೆಯ ಫೋಟೊ ವೈರಲ್

ಕೆಲವರು ಈ ವಿಡಿಯೋ ನೋಡಿ, ಬಹುಶಃ ಆಕೆಯ ಕಾಲಿಗೆ ಏನಾದರೂ ಕಟ್ಟಿರಬಹುದು. ಗಮನಿಸಿ ನೋಡಿದರೆ ವಿಡಿಯೋನಲ್ಲಿ ಆಕೆಯ ಕಾಲುಗಳನ್ನು ತೋರಿಸಲಾಗಿಲ್ಲ. ಹಾಗಾಗಿ ಇಲ್ಲಿ ಆಕೆಗೆ ಸೇಫ್ಟಿ ಇದೆ ಅನಿಸುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಯೋಸಮೈಟ್‌ ಬಳಿಯಲ್ಲಿ ವಾಸವಾಗಿರುವವನಾಗಿ ನಾನು ಗಮನಿಸಿದಂತೆ, ಜನರು, ಅಪಾಯವಿರುವ ಜಾಗಗಳಲ್ಲಿ ಫೋಟೋಗಳಿಗಾಗಿ, ವಿಡಿಯೋಗಳಿಗಾಗಿ ಸರ್ಕಾರ ಹಾಕಿರುವ ಅಪಾಯದ ಫಲಕಗಳನ್ನು ಪೂರ್ತಿಯಾಗಿ ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ತಾವಾಗೇ ಸಾವನ್ನು ಆಹ್ವಾನಿಸಿಕೊಳ್ಳುತ್ತಾರೆ. ಜಾರುವ ಬಂಡೆಕಾಲುಗಳಲ್ಲಿ ನಡೆಯುತ್ತಾ ಜೀವವನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು, ಈ ವಿಡಿಯೋ ನೋಡುವಾಗಲೇ ಭಯವಾಗುತ್ತದೆ. ಇನ್ನು ಆ ಜಾಗದಲ್ಲಿ ನಿಲ್ಲುವ ಮಾತೇ ಇಲ್ಲ ಎಂದಿದ್ದಾರೆ. ಮತ್ತೊಬ್ಬರು ನನ್ನ ಕೈಯಲ್ಲಿ ಇಂಥದ್ದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ. ಈ ಜಲಪಾತ ತನ್ನ ಹೆಸರನ್ನು ಬ್ರಿಟನ್‌ನ ರಾಣಿ ವಿಕ್ಟೋರಿಯಾರ ನೆನಪಿಗೆ ಇಡಲಾಗಿದೆ.

ಇದನ್ನೂ ಓದಿ | Viral video | ಅಮ್ಮ ಹೇಳಿಕೊಟ್ಟಂತೆ ಮಣ್ಣಲ್ಲಿ ಜಾರಿದ ಮರಿಯಾನೆಯ ಮುದ್ದಾದ ವಿಡಿಯೋ!

Exit mobile version