ಅವಳಿ ಮಕ್ಕಳು ಎಂದರೆ ಜೊತೆಗೇ ಹುಟ್ಟುವ ಮಕ್ಕಳು ಎಂದು ಬಿಡಿಸಿ ಹೇಳುವ ಅಗತ್ಯ ಯಾರಿಗೂ ಇರಲಿಕ್ಕಿಲ್ಲ. ಆದರೆ, ಇಲ್ಲೊಂದು ಅವಳಿಗಳು ಬೇರೆ ಬೇರೆ ದಿನ ಬೇರೆ ಬೇರೆ ವರ್ಷ ಹುಟ್ಟಿದ್ದಾರೆ. ಜೊತೆಗೇ ಹುಟ್ಟಿದ ಎರಡು ಮಕ್ಕಳ ಹುಟ್ಟಿದ ದಿನಾಂಕ, ತಿಂಗಳು ಹಾಗೂ ಇಸವಿ ಬೇರೆ ಬೇರೆ!
ಅರೆ, ಇದು ಹೇಗೆ ಸಾಧ್ಯ? ಅವಳಿ ಮಕ್ಕಳು ಅದು ಹೇಗೆ ಹೀಗೆ ಹುಟ್ಟಲು ಸಾಧ್ಯ ಎನ್ನುತ್ತೀರಾ? ಹಾಗಾದರೆ ಇಲ್ಲಿ ಕೇಳಿ. ಸಾಧ್ಯವಿದೆ. ಅಮೆರಿಕನ್ ಮಹಿಳೆಯೊಬ್ಬರು ಡಿಸೆಂಬರ್ ೩೧ರ ಮಧ್ಯರಾತ್ರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈ ಎರಡೂ ಮಕ್ಕಳು ಹುಟ್ಟಿದ ಸಮಯದ ಆಧಾರದಲ್ಲಿ ಅವರಿಬ್ಬರ ಹುಟ್ಟಿದ ದಿನಾಂಕ, ಇಸವಿ, ತಿಂಗಳು ಎಲ್ಲವೂ ಬೇರೆಬೇರೆಯಾಗಿದೆ!
ಕಾಲಿ ಜೋ ಸ್ಕಾಟ್ ಎಂಬ ಅಮೆರಿಕನ್ ಮಹಿಳೆ ಅವಳಿಗಳ ಪೈಕಿ ಮೊದಲ ಹೆಣ್ಣು ಮಗು ಆನಿ ಜೋಗೆ ಜನ್ಮ ನೀಡಿದ್ದು, ೨೦೨೨ರ ಡಿಸೆಂಬರ್ ೩೧ರ ಮಧ್ಯರಾತ್ರಿ ಸುಮಾರು ೧೧.೫೫ರ ವೇಳೆಗೆ. ಇದಾದ ಮೇಲೆ ಆಕೆ ಜನ್ಮ ನೀಡಿದ್ದು ಎರಡನೇ ಹೆಣ್ಣು ಮಗು ಐಫೀ ರೋಸ್‌ಗೆ ಜನ್ಮ ನೀಡಿದ್ದು ಮಧ್ಯರಾತ್ರಿ ೧೨.೦೧ಕ್ಕೆ. ಕ್ಯಾಲೆಂಡರ್ ಪ್ರಕಾರ ಇದರ ದಿನಾಂಕ, ಜನವರಿ ೧, ೨೦೨೩. ಹೀಗಾಗಿ ಮಧ್ಯರಾತ್ರಿ ಹುಟ್ಟಿದ ಮಕ್ಕಳಿಬ್ಬರೂ ಜೊತೆಗೇ ಹುಟ್ಟಿದರೂ, ದಾಖಲೆಗಳಲ್ಲಿ ಬೇರೆ ಬೇರೆ ದಿನ ಹಾಗೂ ವರ್ಷಗಳಲ್ಲಿ ಹುಟ್ಟಿದ ಸಹೋದರಿಯರಾಗಿರಲಿದ್ದಾರೆ. ಈ ಖುಷಿ ಸಂಭ್ರಮವನ್ನು ಈಕೆಯ ಹೆತ್ತವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಿಬ್ಬರೂ, ಆರೋಗ್ಯವಾಗಿ ಸಂತೋಷದಿಂದಿದ್ದಾರೆ ಎಂದು ಹೆತ್ತವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Viral story | ಕಣ್ಣು, ಮೂಗು, ಬಾಯಿಯೆಲ್ಲ ಹಿಮ ಮೆತ್ತಿಕೊಂಡು ಫ್ರೀಝ್ ಆದ ಜಿಂಕೆಯ ರಕ್ಷಣೆ!
ಜೊತೆಗೇ ಹುಟ್ಟಿದ ಮಕ್ಕಳಾದರೂ ಹೀಗೆ ವಿಶೇಷವಾಗಿ ಅಪರೂಪದ ಮಾದರಿಯಲ್ಲಿ ಜನಿಸಿದ್ದು ಒಂಥರಾ ಖುಷಿ ನೀಡಿದೆ. ನಮಗಿದು ಬಹಳ ತಮಾಷೆಯ ಸಂಗತಿಯಾಗಿದೆ. ಹೊಸ ವರ್ಷಕ್ಕೆ ಒಬ್ಬಳ ಜನ್ಮದಿನವಾದರೆ, ನ್ಯೂ ಈಯರ್ ಈವ್‌ನ ಸಂಭ್ರಮಕ್ಕೆ ಇನ್ನೊಬ್ಬಾಕೆಯ ಹುಟ್ಟುಹಬ್ಬ. ಮುಂದೆ ನಮ್ಮ ಪ್ರತಿ ಹೊಸ ವರ್ಷಗಳೂ ಇನ್ನೂ ಹೆಚ್ಚು ಸಂಭ್ರಮ ಸಡಗರಗಳಿಂದ ಕೂಡಿರಲಿದೆ ಎಂದು ಅಮ್ಮ ಕಾಲಿ ಜೋ ಸ್ಕಾಟ್ ಹೇಳಿದ್ದಾರೆ.
ಇದನ್ನೂ ಓದಿ | Viral story | ಜನನಿಬಿಡ ಪ್ರದೇಶದಲ್ಲಿ ಪ್ರತಿದಿನ ಬಂದು ದರ್ಶನ ನೀಡುವ ನಾಗರಹಾವು!