Site icon Vistara News

Viral News: 1 ರೂಪಾಯಿಯ ತೆರಿಗೆ ವಿವಾದ ಬಗೆಹರಿಸಲು 50,000 ರೂ. ಪಡೆದ ಚಾರ್ಟರ್ಡ್ ಅಕೌಂಟೆಂಟ್‌‌!

Viral Video

ಕೇವಲ 1 ರೂಪಾಯಿ ಮೌಲ್ಯದ ತೆರಿಗೆ ವಿವಾದವನ್ನು (Tax Dispute) ಇತ್ಯರ್ಥಪಡಿಸಲು ಚಾರ್ಟರ್ಡ್ ಅಕೌಂಟೆಂಟ್ ಗೆ (CA)ಗೆ 50,000 ರೂಪಾಯಿ ಪಾವತಿಸಿದ್ದೇನೆ ಎಂದು ದೆಹಲಿಯ (Delhi) ಅಪೂರ್ವ್ ಜೈನ್ ಸಾಮಾಜಿಕ ಜಾಲತಾಣದಲ್ಲಿ (social media) ಹೇಳಿಕೊಂಡಿದ್ದು, ಇದು ಬಾರಿ ವೈರಲ್ (Viral News) ಆಗಿರುವುದು ಮಾತ್ರವಲ್ಲ ಚರ್ಚೆಯನ್ನೂ ಹುಟ್ಟು ಹಾಕಿದೆ.

ಆದಾಯ ತೆರಿಗೆ ನೊಟೀಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿರುವ ಅಪೂರ್ವ ಜೈನ್, ನಾನು ಇತ್ತೀಚೆಗೆ ಸ್ವೀಕರಿಸಿದ ಆದಾಯ ತೆರಿಗೆ ನೊಟೀಸ್ ಹಿನ್ನೆಲೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗೆ 50,000 ರೂ. ಶುಲ್ಕವನ್ನು ಪಾವತಿಸಿದ್ದೇನೆ. ಅದರಲ್ಲಿ ಅಂತಿಮ ವಿವಾದಿತ ಮೌಲ್ಯವು ಕೇವಲ 1 ರೂ. ಆಗಿತ್ತು. ನಾನು ತಮಾಷೆ ಮಾಡುತ್ತಿಲ್ಲ ಎಂದು ಸೇರಿಸುವ ಮೂಲಕ ಅವರು ತಮ್ಮ ಗಂಭೀರತೆ ವಿಷಯವನ್ನು ಹೇಳಿದರು.

ಈ ಘಟನೆಯು ಭಾರತದಲ್ಲಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಸಾಮಾನ್ಯ ಜನರಿಗೆ ಎದುರಾಗುವ ಕಷ್ಟಗಳನ್ನು ಎತ್ತಿ ತೋರಿಸಿದೆ. ಕೆಲವೊಮ್ಮೆ ಸಣ್ಣ ಸಮಸ್ಯೆಗಳು ಗಮನಾರ್ಹದ ವೃತ್ತಿಪರ ಶುಲ್ಕಗಳಿಗೆ ಕಾರಣವಾಗಬಹುದು.
ಜೈನ್ ಅವರ ಈ ಪ್ರಕರಣವು ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವು ಬಳಕೆದಾರರು ತೆರಿಗೆ ಇಲಾಖೆಯ ಅಸಮರ್ಥತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇತರರು ಸಿಎ ಅವರ ಶುಲ್ಕ ರಚನೆಯನ್ನು ಪ್ರಶ್ನಿಸಿದ್ದಾರೆ.

ತೆರಿಗೆ ಇಲಾಖೆಯ ಸ್ಥಿತಿಯ ಮುಂದೆ ಯಾವುದೂ ತಮಾಷೆಯಂತೆ ಕಾಣುತ್ತಿಲ್ಲ ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಶ್ರೀಮಂತ ರೈತರಿಗೆ ಆದಾಯ ತೆರಿಗೆ ನೊಟೀಸ್ ಕಳುಹಿಸುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.


50,000 ರೂ. ಶುಲ್ಕಗಳು ತುಂಬಾ ಹೆಚ್ಚು; ಸಿಎಗಳು ಈ ದಿನಗಳಲ್ಲಿ ಮನಸ್ಸಿಗೆ ಇಚ್ಛೆ ಬಂದಂತೆ ಶುಲ್ಕಗಳನ್ನು ವಿಧಿಸುತ್ತಿದ್ದಾರೆ ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಅಮೆರಿಕಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ವೀಕ್ಷಕರ ಮನಗೆದ್ದ ಭಾರತೀಯ ಮೂಲದ ಬಾಲಕಿ

ಈ ನಡುವೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಕಠಿಣ ಸಲಹೆಯನ್ನು ನೀಡಿದೆ. ವಿನಾಯಿತಿ ಮತ್ತು ಕಡಿತಗಳಿಗೆ ಸುಳ್ಳು ,ಮಾಹಿತಿ ನೀಡುವವರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರ ವಿರುದ್ಧ ಎಚ್ಚರಿಕೆಯನ್ನು ನೀಡಿದೆ. ಇಂತಹ ಕ್ರಮಗಳ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ಗಣನೀಯ ದಂಡ ಮತ್ತು ಜೈಲು ಶಿಕ್ಷೆಗೆ ಕಾರಣವಾಗಬಹುದು.

Exit mobile version