Site icon Vistara News

Viral video: ಗೂಡ್ಸ್ ರೈಲಿನ ಚಕ್ರಗಳ ನಡುವೆ ಕುಳಿತು 100 ಕಿ.ಮೀ ಪ್ರಯಾಣಿಸಿದ ಬಾಲಕ!

Viral video

ಹರ್ದೋಯಿ: ಗೂಡ್ಸ್ ರೈಲಿನ (goods train) ಚಕ್ರಗಳ ನಡುವೆ ಕುಳಿತು ಸುಮಾರು 100 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ ಬಾಲಕನನ್ನು (boy) ರೈಲ್ವೇ ಇಲಾಖೆ ಸಿಬ್ಬಂದಿ (Railway Protection Force) ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ (uttarpradesh) ಹರ್ದೋಯಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral video) ಆಗಿದೆ.

ಗೂಡ್ಸ್ ರೈಲಿನ ಟೈರ್‌ಗಳ ನಡುವೆ ಕುಳಿತು ಅಜಯ್ ಎಂಬ ಹೆಸರಿನ ಬಾಲಕ ಸುಮಾರು 100 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ್ದಾನೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ಉತ್ತರ ಪ್ರದೇಶದ ಹರ್ದೋಯಿಯಲ್ಲಿ ರೈಲ್ವೇ ಭದ್ರತಾ ಸಿಬ್ಬಂದಿ ಆತನನ್ನು ನೋಡಿ ರಕ್ಷಿಸಿದ್ದಾರೆ.

ಅಜಾಗರೂಕತೆಯಿಂದಾಗಿ ನಿಲುಗಡೆ ಮಾಡಿದ್ದ ಗೂಡ್ಸ್ ರೈಲನ್ನು ಏರಿದ್ದ ಬಾಲಕ ಅಜಯ್ ಗೆ ಅದು ಚಲಿಸಲು ಪ್ರಾರಂಭಿಸಿದಾಗ ಇಳಿಯಲು ಸಾಧ್ಯವಾಗಲಿಲ್ಲ. ಹರ್ದೋಯಿಯಲ್ಲಿ ರೈಲು ನಿಲುಗಡೆಯಾದಾಗ ಆರ್‌ಪಿಎಫ್ ಸಿಬ್ಬಂದಿ ದಿನನಿತ್ಯದ ತಪಾಸಣೆ ನಡೆಸಿದಾಗ ಬಾಲಕ ಕಂಡು ಬಂದಿದ್ದಾನೆ.

ಇದನ್ನೂ ಓದಿ: PM Narendra Modi: ಮಕ್ಕಳಾಗಿ ವಿಶ್ವನಾಯಕರು! ಎಐ ಮೋಡಿಯಲ್ಲಿ ನರೇಂದ್ರ ಮೋದಿ ನೋಡಿ


ಭಯಭೀತನಾಗಿದ್ದ ಬಾಲಕನ ಮೈಕೈ ಮೇಲೆ ಮಸಿ ತುಂಬಿಕೊಂಡಿತ್ತು. ಬಳಿಕ ಆತನಿಗೆ ಸ್ನಾನ ಮಾಡಿಸಿ ಆಹಾರವನ್ನು ಒದಗಿಸಲಾಯಿತು. ವಿಚಾರಣೆಗಾಗಿ ರೈಲ್ವೇ ಇಲಾಖೆ ಸಿಬ್ಬಂದಿ ಆತನನ್ನು ಮಕ್ಕಳ ಕಲ್ಯಾಣ ಸಮಿತಿಯ ಉಸ್ತುವಾರಿಗೆ ವಹಿಸಲಾಗಿದೆ. ಮಕ್ಕಳ ಸಹಾಯವಾಣಿ ಸಿಬ್ಬಂದಿಯ ನೆರವಿನೊಂದಿಗೆ ಆತನನ್ನು ಮಕ್ಕಳ ಮನೆಗೆ ವರ್ಗಾಯಿಸಲಾಗಿದೆ.


ಎಸಿ ಕೋಚ್ ಸಿಗದಕ್ಕೆ ರೈಲಿನ ಬಾಗಿಲಿನ ಗಾಜೇ ಪುಡಿ ಮಾಡಲಾಗಿತ್ತು!

ಕೆಲವು ದಿನಗಳ ಹಿಂದೆ ಸೆಕೆಯ ಕಾರಣದಿಂದ ವ್ಯಕ್ತಿಯೊಬ್ಬ ರೈಲಿನಲ್ಲಿ ತಾನು ಕಾಯ್ದಿರಿಸಿದ ಎಸಿ ಕೋಚ್ ಹತ್ತಲು ಸಾಧ್ಯವಾಗದೇ ಕೋಪಗೊಂಡು ರೈಲಿನ ಬಾಗಿಲಿನ ಗಾಜನ್ನೇ ಒಡೆದು ಹಾಕಿದ ಘಟನೆ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ನಡೆದಿತ್ತು.

ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ಎಸಿ 3 ಕೋಚ್ ನಲ್ಲಿ ವ್ಯಕ್ತಿಯೊಬ್ಬ ಸೀಟ್ ಬುಕ್ ಮಾಡಿದ್ದ. ಆದರೆ ಟಿಕೆಟ್ ಇಲ್ಲದ ಪ್ರಯಾಣಿಕರು ಆತನಿಗೆ ಒಳಗೆ ಪ್ರವೇಶಿಸಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿ ರೈಲಿನ ಬಾಗಿಲಿನ ಗಾಜನ್ನು ಒಡೆದು ಪುಡಿ ಮಾಡಿದ್ದಾನೆ.

ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 32 ಸೆಕೆಂಡುಗಳ ಈ ವಿಡಿಯೋವನ್ನು ಸುಮಾರು 2 ಮಿಲಿಯನ್ ಮಂದಿ ವೀಕ್ಷಿಸಿದ್ದರು.

ವಿಡಿಯೋದಲ್ಲಿ ಕಂಡುಬಂದಂತೆ ಕೋಚ್ ಬಾಗಿಲಿನ ಮುಂಭಾಗದಲ್ಲಿ ನೆಲದ ಮೇಲೆ ಸಾಕಷ್ಟು ಮಂದಿ ಕುಳಿತಿದ್ದರು. ಆ ವೇಳೆ ಒಬ್ಬ ಪ್ರಯಾಣಿಕ ಬಾಗಿಲನ್ನು ತೆರೆಯಲು ಜನರನ್ನು ಕೇಳಿದಾಗ ಅಲ್ಲಿದ್ದ ವ್ಯಕ್ತಿಯೊಬ್ಬ “ಅಲ್ಲಿ ಜಾಗವಿಲ್ಲ” ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕ ರೈಲಿನ ಬಾಗಿಲಿನ ಗಾಜನ್ನು ಒಡೆದುಹಾಕಿದ್ದಾನೆ.

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ರೈಲಿನ ಪ್ರಯಾಣದ ಕುರಿತಾದ ವಿಡಿಯೋಗಳು ಹರಿದಾಡುತ್ತಿದ್ದು, ಈ ಹಿಂದೆ ಕಾಶಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಭೀಕರ ಸ್ಥಿತಿಯನ್ನು ತೋರಿಸಿದೆ. ಕೋಚ್ ನಲ್ಲಿ ಎಸಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಆಹಾರ ಮತ್ತು ನೀರು ನೀಡಲಾಗಿಲ್ಲ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು.

ಹಾಗೇ ಭಾರತೀಯ ರೈಲ್ವೆಗೆ ಸಂಬಂಧಿಸಿದ ಮತ್ತೊಂದು ವಿಡಿಯೋದಲ್ಲಿ ಮಹಿಳೆಯೊಬ್ಬಳು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದು, ಈ ಬಗ್ಗೆ ತನ್ನ ಸಹ ಪ್ರಯಾಣಿಕರೊಂದಿಗೆ ಜಗಳವಾಡುತ್ತಿರುವ ಘಟನೆ ನಡೆದಿತ್ತು.

Exit mobile version